.ad-label:empty { display: none; }

ಎಸ್‍ಬಿಐನಿಂದ 963 ಕೋಟಿ ರೂ. ಮೌಲ್ಯದ ವಿಜಯ್‍ಮಲ್ಯ ಆಸ್ತಿ ವಶ!

Public TV
1 Min Read
MALYA SBI

ಲಂಡನ್: ಮದ್ಯ ದೊರೆ ವಿಜಯ್ ಮಲ್ಯರವರ ಇಂಗ್ಲೆಂಡ್ ನಲ್ಲಿರುವ ಒಟ್ಟು 963 ಕೋಟಿ ಮೌಲ್ಯದ ಆಸ್ತಿಯನ್ನು ಎಸ್‍ಬಿಐ ವಶಪಡಿಸಿಕೊಂಡಿದೆ.

ಎಸ್‍ಬಿಐ ಮುಖ್ಯಸ್ಥ ಅರ್ಜಿತ್ ಬಸು ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಇಂಗ್ಲೆಂಡಿನಲ್ಲಿರುವ ಒಟ್ಟಾರೆ 963 ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದೇವೆ. ಇದು ಬ್ಯಾಂಕುಗಳಿಗೆ ಸಿಕ್ಕ ಜಯವಾಗಿದೆ. ಅಲ್ಲದೇ ಇನ್ನೂ ಹೆಚ್ಚಿನ ರೀತಿಯಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದ್ದಾರೆ.

ಸರಿಯಾದ ಮಾಹಿತಿಯನ್ನು ನೀಡಿದ್ದರಿಂದ ಲಂಡನ್‍ನಲ್ಲಿರುವ ವಿಜಯ್ ಮಲ್ಯರವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ನ್ಯಾಯಾಲಯ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಟೆವಿನ್, ವೆಲ್ವಿಯನ್ ಬಳಿ ಇರುವ ಲೇಡಿವಾಕ್ ಹಾಗೂ ಬ್ರಾಂಬಲ್ ವಸತಿನಿಲಯಗಳನ್ನು ಸಹ ಮುಟ್ಟುಗೋಲನ್ನು ಹಾಕಿಕೊಂಡು ಸುಮಾರು 9 ಸಾವಿರ ಕೋಟಿ ರೂಪಾಯಿ ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು. ಅಲ್ಲದೇ ವಿಶ್ವವ್ಯಾಪಿ ಮಲ್ಯರವರ ಆಸ್ತಿಮುಟ್ಟಿಗೋಲು ಕುರಿತು ಇಂಗ್ಲೆಂಡ್ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಎಸ್‍ಬಿಐ ಉಪ ವ್ಯವಸ್ಥಾಪಕ ನಿರ್ದೇಶಕ ಪಲ್ಲವ್ ಮೊಹಪತ್ರಾ, ಮಲ್ಯ ಹೊಂದಿರುವ ಆಸ್ತಿಯ ಮಾಲೀಕತ್ವ ವಿಚಾರದಲ್ಲಿ ಗೊಂದಲದಲ್ಲಿರುವ ಕಾರಣ ವಶ ಪಡಿಸುಕೊಳ್ಳುವ ಪ್ರಕ್ರಿಯೆ ಕಠಿಣವಾಗಿದೆ. ಭಾರತೀಯ ಬ್ಯಾಂಕುಗಳಿಗೆ ಮಲ್ಯ ಸುಮಾರು 6,500 ಕೋಟಿ ರೂ. ನೀಡಬೇಕಿದೆ. ಭಾರತೀಯ ಬ್ಯಾಂಕ್ ಗಳ ಒಕ್ಕೂಟ ಮಲ್ಯನನ್ನು ದಿವಾಳಿ ಎಂದು ಘೋಷಿಸಲು ಮನವಿ ಮಾಡಿಕೊಂಡಿದೆ ಎಂದು ತಿಳಿಸಿದೆ.

9 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಗಳಿಗೆ ಬಾಕಿ ಹಣ ನೀಡಬೇಕಿರುವ ವಿಜಯ್ ಮಲ್ಯ ಅವರ ಲಂಡನ್ ನಲ್ಲಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ನ್ಯಾಯಾಲಯದಲ್ಲಿ 13 ಭಾರತೀಯ ಬ್ಯಾಂಕ್ ಗಳ ಒಕ್ಕೂಟ ಕಾನೂನು ಸಮರ ನಡೆಸುತಿತ್ತು. ಗುರುವಾರ ಕೋರ್ಟ್ ಆಸ್ತಿ ವಶಪಡಿಸಿಕೊಳ್ಳಲು ಆದೇಶ ನೀಡಿತ್ತು.

ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಲು ಸಿದ್ಧರಾಗಿರುವ ಉದ್ದೇಶಪೂರ್ವಕ ಸುಸ್ತಿದಾರ ವಿಜಯ್ ಮಲ್ಯ ಅವರಿಗೆ ಸೇರಿದ 159 ಆಸ್ತಿಗಳನ್ನು ಬೆಂಗಳೂರು ನಗರ ಪೊಲೀಸರು ಗುರುವಾರ ಪತ್ತೆ ಹಚ್ಚಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *