ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯರನ್ನು ಲಂಡನ್ ನ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಮಂಗಳವಾರ ಬಂಧಿಸಿದ್ದು, ಬಂಧನವಾದ 3 ಗಂಟೆಯ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
`ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಮೋಸ ಮಾಡಿದ ಯಾರನ್ನೂ ಬಿಡಲ್ಲ. ದೇಶದ ಜನರ ಹಣವನ್ನು ಲೂಟಿ ಮಾಡಿದವರು ಆ ಹಣವನ್ನು ಮತ್ತೆ ಹಿಂದುರಿಗಿಸಲೇ ಬೇಕು’ ಅಂತಾ ಪ್ರಧಾನಿ ಖಾರವಾಗಿಯೇ ನುಡಿದಿದ್ದಾರೆ.
Advertisement
ಇದನ್ನೂ ಓದಿ: ಕೊನೆಗೂ ವಿಜಯ್ ಮಲ್ಯ ಬಂಧನ
Advertisement
ಏನಿದು ಪ್ರಕರಣ?: ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾರತದ ವಿವಿಧ ಬ್ಯಾಂಕ್‍ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಮಾಡಿ ಬಳಿಕ 2016ರ ಮಾರ್ಚ್ 2ರಂದು ಲಂಡನ್ ಗೆ ಹಾರಿದ್ದರು. ಮಲ್ಯ ಲಂಡನ್ ನಲ್ಲಿ ಇರುವುದು ಗೊತ್ತಾಗುತ್ತಿದ್ದಂತೆಯೇ ಇತ್ತ ಭಾರತ ಸರ್ಕಾರ ಲಂಡನ್ ಸರ್ಕಾರವನ್ನು ಸಂಪರ್ಕಿಸಿ ಮಲ್ಯರನ್ನು ಹಸ್ತಾಂತರಿಸುವಂತೆ ಕೋರಿತ್ತು. ಹೀಗಾಗಿ ಈ ಬಗ್ಗೆ ವಿಚಾರಣೆ ನಡೆದು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮಲ್ಯ ಬಂಧನಕ್ಕೆ ಆದೇಶ ನೀಡಿತ್ತು. ಅಂತೆಯೇ ಬ್ರಿಟಿಷ್ ಕಾಲಮಾನ ಪ್ರಕಾರ ಮಂಗಳವಾರ 9.30ರ ವೇಳೆ ಮಲ್ಯರನ್ನು ಬಂಧಿಸಲಾಗಿತ್ತು. ನಂತ್ರ ಲಂಡನ್‍ನ ವೆಸ್ಟ್ ಮಿನಿಸ್ಟರ್ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಬಳಿಕ ಮಲ್ಯಗೆ ಜಾಮೀನು ಸಿಕ್ಕಿದ್ದು, ವಿಚಾರಣೆ ಮೇ 17 ರಂದು ನಡೆಯಲಿದೆ.
Advertisement
ಇದನ್ನೂ ಓದಿ: ಅರೆಸ್ಟ್ ಆದ ಮೂರೇ ಗಂಟೆಗಳಲ್ಲಿ ಮಲ್ಯಗೆ ಜಾಮೀನು