ಲಂಡನ್: ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಎರಡನೇ ಬಾರಿ ಬಂಧಿಸಲಾಗಿದೆ. ಲಂಡನ್ ನಲ್ಲಿ ಮಲ್ಯ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಂಧ ಮಾಡಿದ ತಕ್ಷಣವೇ ಅವರಿಗೆ ಜಾಮೀನು ಸಿಕ್ಕಿದೆ. ದೆಹಲಿ ಕೋರ್ಟ್ ಫಾರಿನ್ ಎಕ್ಸ್ ಚೇಂಜ್ ರೆಗ್ಯುಲೇಷನ್ ಆ್ಯಕ್ಟ್(FERA) ಉಲ್ಲಂಘನೆ ಆರೋಪದ ಮೇಲೆ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.
Advertisement
ವಿಜಯ್ ಮಲ್ಯ 17 ಬ್ಯಾಂಕ್‍ಗಳ ಒಕ್ಕೂಟಕ್ಕೆ ಸುಮಾರು 9 ಸಾವಿರ ಕೋಟಿ ರೂ. ಸಾಲ ಹಿಂದಿರುಗಿಸಬೇಕಿದ್ದು, ಕಳೆದ ವರ್ಷ ಮಾರ್ಚ್ 2ರಂದು ಭಾರತ ತೊರೆದು ಲಂಡನ್‍ಗೆ ಹೋಗಿ ನೆಲೆಸಿದ್ದರು.
Advertisement
ಇದೇ ಏಪ್ರಿಲ್ ನಲ್ಲಿ ಮಲ್ಯ ಅವರ ಬಂಧನವಾಗಿತ್ತು. ಆದರೆ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಮಲ್ಯ ಪಾಸ್‍ಪೋರ್ಟ್ ರದ್ದು ಮಾಡಿದ್ದ ಭಾರತ, ಇಂಗ್ಲೆಂಡ್ ಸರ್ಕಾರಕ್ಕೆ ಮಲ್ಯರನ್ನು ಗಡೀಪಾರು ಮಾಡುವಂತೆ ಕೇಳಿತ್ತು. ಆದ್ರೆ ಇಂಗ್ಲೆಂಡ್‍ನಲ್ಲಿ ಪಾಸ್‍ಪೋರ್ಟ್ ಮಾನ್ಯತೆ ಕಳೆದುಕೊಂಡಿದ್ದರೂ ಕೂಡ ಆ ವ್ಯಕ್ತಿ ಅಲ್ಲೇ ನೆಲೆಸಲು ಅವಕಾಶವಿರುವುದರಿಂದ ಭಾರತದ ಗಡೀಪಾರು ಮನವಿ ಇಂಗ್ಲೆಂಡ್ ಕಾನೂನುಗಳ ಅಡಿ ಬರುವುದಿಲ್ಲ ಎಂದು ಈ ಹಿಂದೆ ಹೇಳಿತ್ತು.
Advertisement