ಲಂಡನ್: ಮದ್ಯ ದೊರೆ ವಿಜಯ್ ಮಲ್ಯಾರನ್ನ ಕೊನೆಗೂ ಲಂಡನ್ ನಲ್ಲಿ ಬಂಧಿಸಲಾಗಿದೆ.
ಲಂಡನ್ ಕಾಲಮಾನದ ಪ್ರಕಾರ ಇಂದು ಬೆಳಿಗ್ಗೆ 9.30ರ ವೇಳೆಗೆ ಮಲ್ಯ ಬಂಧನವಾಗಿದೆ ಎಂದು ಹೇಳಲಾಗಿದೆ. ಮಲ್ಯ ಬಂಧನದ ವಿಷಯವನ್ನ ಇಂಗ್ಲೆಂಡ್ ಸರ್ಕಾರ ಸ್ಪಷ್ಟಪಡಿಸಿದೆ.
Advertisement
ಕೆಲವೇ ಕ್ಷಣಗಳಲ್ಲಿ ವೆಸ್ಟ್ ಮಿನಿಸ್ಟರ್ ಕೋರ್ಟ್‍ಗೆ ಮಲ್ಯರನ್ನ ಪೊಲೀಸರು ಕರೆದೊಯ್ಯಲಿದ್ದಾರೆ. ಮಲ್ಯ ಬಂಧನದ ಹಿನ್ನೆಲೆಯಲ್ಲಿ ಸಿಬಿಐ ತಂಡ ಲಂಡನ್‍ಗೆ ತೆರಳಲಿದೆ.
Advertisement
ಮಲ್ಯ ಪಾಸ್‍ಪೋರ್ಟ್ ರದ್ದು ಮಾಡಿದ್ದ ಭಾರತ, ಇಂಗ್ಲೆಂಡ್ ಸರ್ಕಾರಕ್ಕೆ ಮಲ್ಯರನ್ನು ಗಡೀಪಾರು ಮಾಡುವಂತೆ ಕೇಳಿತ್ತು. ಆದ್ರೆ ಇಂಗ್ಲೆಂಡ್‍ನಲ್ಲಿ ಪಾಸ್‍ಪೋರ್ಟ್ ಮಾನ್ಯತೆ ಕಳೆದುಕೊಂಡಿದ್ದರೂ ಕೂಡ ಆ ವ್ಯಕ್ತಿ ಅಲ್ಲೇ ನೆಲೆಸಲು ಅವಕಾಶವಿರುವುದರಿಂದ ಭಾರತದ ಗಡೀಪಾರು ಮನವಿ ಇಂಗ್ಲೆಂಡ್ ಕಾನೂನುಗಳ ಅಡಿ ಬರುವುದಿಲ್ಲ ಎಂದು ಹೇಳಿತ್ತು.
Advertisement
ಕಳೆದ ವಾರ ದೆಹಲಿ ಕೋರ್ಟ್ ಫಾರಿನ್ ಎಕ್ಸ್ ಚೇಂಜ್ ರೆಗ್ಯುಲೇಷನ್ ಆ್ಯಕ್ಟ್(FERA) ಉಲ್ಲಂಘನೆ ಆರೋಪದ ಮೇಲೆ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.
Advertisement
ವಿಜಯ್ ಮಲ್ಯ 17 ಬ್ಯಾಂಕ್‍ಗಳ ಒಕ್ಕೂಟಕ್ಕೆ ಸುಮಾರು 9 ಸಾವಿರ ಕೋಟಿ ರೂ. ಸಾಲ ಹಿಂದಿರುಗಿಸಬೇಕಿದ್ದು, ಕಳೆದ ವರ್ಷ ಮಾರ್ಚ್ 2ರಂದು ಭಾರತ ತೊರೆದು ಲಂಡನ್‍ಗೆ ಹೋಗಿ ನೆಲೆಸಿದ್ದರು.
ಇದನ್ನೂ ಓದಿ: ಕೊನೆಗೂ ಮಾರಾಟವಾಯ್ತು ಗೋವಾದಲ್ಲಿನ ವಿಜಯ್ ಮಲ್ಯ ಮನೆ