ಬೆಂಗಳೂರು: 2019 ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳು ನಾಡು ತಂಡವನ್ನು ಎದುರಿಸಲಿದ್ದು, ಬೆಂಗಳೂರಿನಲ್ಲಿ ಶುಕ್ರವಾರ ಫೈನಲ್ ಪಂದ್ಯ ನಡೆಯಲಿದೆ.
ಟೂರ್ನಿಯ ಎ ಗ್ರೂಪ್‍ನಲ್ಲಿ ಟಾಪ್ ನಂ.1 ಪಟ್ಟದೊಂದಿಗೆ ಕರ್ನಾಟಕ ಫೈನಲ್ ಪ್ರವೇಶ ಮಾಡಿದ್ದು, ಇಂದು ನಡೆದ ಛತ್ತೀಸ್‍ಗಡ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ ಅಂತರದೊಂದಿಗೆ ಗೆಲ್ಲುವ ಮೂಲಕ ಫೈನಲ್ ಪ್ರವೇಶ ಮಾಡಿತು. ಗೆಲ್ಲಲು 224 ರನ್ ಗುರಿ ಪಡೆದ ಕರ್ನಾಟಕ 10 ಓವರ್ ಬಾಕಿ ಇರುವಂತೆಯೇ 1 ವಿಕೆಟ್ ಕಳೆದುಕೊಂಡು 229 ರನ್ ಗಳಿಸಿ ಗೆಲುವು ಪಡೆಯಿತು.
Advertisement
Tamil Nadu successfully chase down 178 to win over Gujarat and set up final with Karnataka in the #VijayHazare Trophy. ???????? #TNvGUJ @paytm pic.twitter.com/tCVsiVPPen
— BCCI Domestic (@BCCIdomestic) October 23, 2019
Advertisement
ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಹಾಗೂ ದೇವ್ ದತ್ತ್ ಭರ್ಜರಿ ಬ್ಯಾಟಿಂಗ್ ನಡೆಸಿ ಗೆಲುವು ನೀಡಿದರು. ದೇವ್ ದತ್ತ್ ಪಡಿಕ್ಕಲ್ 98 ಎಸೆತಗಳಲ್ಲಿ 92 ರನ್ ಗಳಿಸಿದರೆ, ಕೆಎಲ್ ರಾಹುಲ್ 111 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದರು. ಇತ್ತ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಮಯಾಂಕ್ ಅಗರ್ವಾಲ್ 33 ಎಸೆತಗಳಲ್ಲಿ 47 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯ ಅಂತಿಮ ಟೆಸ್ಟ್ ಆಡಿದ್ದ ಮಯಾಂಕ್ ಸರಣಿ ಗೆಲುವಿನ ಬಳಿಕ ಕರ್ನಾಟಕ ತಂಡಕ್ಕೆ ಮರಳಿದ್ದರು.
Advertisement
Karnataka register a 9-wicket win over Chhattisgarh to enter the final of #VijayHazare Trophy ????????#KARvCHH @Paytm pic.twitter.com/Y8SHHWLfR5
— BCCI Domestic (@BCCIdomestic) October 23, 2019
Advertisement
ಈ ಮೊದಲು ಬ್ಯಾಟಿಂಗ್ ನಡೆಸಿದ್ದ ಛತ್ತೀಸ್‍ಗಡ ತಂಡ ಕರ್ನಾಟಕ ಬೌಲಿಂಗ್ ದಾಳಿಯನ್ನು ಎದುರಿಸಿ 49.4 ಓವರ್ ಗಳಲ್ಲಿ 223 ರನ್ ಗಳಿಸಿತ್ತು. ಕರ್ನಾಟಕದ ಪರ ಅಭಿಮನ್ಯು ಮಿಥುನ್, ಕೆ.ಗೌತಮ್ ಮತ್ತು ಪ್ರವೀನಕುಮಾರ್ ದುಬೆ ತಲಾ 2 ವಿಕೆಟ್ ಪಡೆದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ 4ನೇ ಬಾರಿಗೆ ಫೈನಲ್ ಪ್ರವೇಶ ಮಾಡಿದೆ.
.@klrahul11 brings up his 5⃣0⃣ from 78 balls. #KARvCHH #VijayHazare @Paytm pic.twitter.com/5vve18GpAx
— BCCI Domestic (@BCCIdomestic) October 23, 2019