ಮತ್ತೆ ಮಿಂಚಿದ ಮಯಂಕ್: ಸೌರಾಷ್ಟ್ರ ಸೋಲಿಸಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

Public TV
1 Min Read
karnataka team

ನವದೆಹಲಿ: ಸೌರಾಷ್ಟ್ರ ವಿರುದ್ಧ ಕರ್ನಾಟಕ 41 ರನ್ ಗಳಿಂದ ಜಯಗಳಿಸುವ ಮೂಲಕ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯನ್ನು ಮೂರನೇ ಬಾರಿ ಗೆದ್ದುಕೊಂಡಿದೆ.

ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಕರ್ನಾಟಕ 45.5 ಓವರ್ ಗಳಲ್ಲಿ 253 ರನ್ ಗಳಿಗೆ ಆಲೌಟ್ ಆಗಿತ್ತು. 254 ರನ್ ರನ್‍ಗಳ ಗುರಿಯನ್ನು ಪಡೆದ ಸೌರಾಷ್ಟ್ರ 46.3 ಓವರ್ ಗಳಲ್ಲಿ 212 ರನ್ ಗಳಿಸಿ ಆಲೌಟ್ ಆಯಿತು.

karnataka cricket 1 1

ಸರಣಿ ಉದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ್ದ ಮಯಂಕ್ ಅಗರ್ ವಾಲ್ 90 ರನ್(79 ಎಸೆತ, 11 ಬೌಂಡರಿ, 3 ಸಿಕ್ಸರ್), ಪವನ್ ದೇಶಪಾಂಡೆ 49 ರನ್(60 ಎಸೆತ, 4 ಬೌಂಡರಿ, 1 ಸಿಕ್ಸರ್), ರವಿಕುಮಾರ್ ಸಮರ್ಥ್ 48 ರನ್(65 ಎಸೆತ, 1 ಬೌಂಡರಿ, 1 ಸಿಕ್ಸರ್) ಶ್ರೇಯಸ್ ಗೋಪಾಲ್ 31 ರನ್(28 ಎಸೆತ, 6 ಬೌಂಡರಿ) ಸಿಡಿಸಿ ಔಟಾದರು.

ಸೌರಾಷ್ಟ್ರ ನಾಯಕ ಚೇತೇಶ್ವರ ಪೂಜಾರ 94 ರನ್(127 ಎಸೆತ, 10 ಬೌಂಡರಿ, 1 ಸಿಕ್ಸರ್) ಸಿಡಿಸಿ 9ನೇಯವರಾಗಿ ಔಟಾದರು. ಕರ್ನಾಟಕದ ಪರವಾಗಿ ಕೆ.ಗೌತಮ್ ಮತ್ತು ಕೃಷ್ಣಾ 3 ವಿಕೆಟ್ ಕಿತ್ತರೆ, ಸ್ಟುವರ್ಟ್ ಬಿನ್ನಿ ಮತ್ತು ದೇಶಪಾಂಡೆ ತಲಾ ಒಂದೊಂದು ವಿಕೆಟ್ ಪಡೆದರು.

2013-14ರಲ್ಲಿ, 2015-16 ರಲ್ಲಿ ಕರ್ನಾಟಕ ಚಾಂಪಿಯನ್ ಆಗಿತ್ತು. ಈಗ ಕರುಣ್ ನಾಯರ್ ನೇತೃತ್ವದಲ್ಲಿ ಮೂರನೇ ಬಾರಿ ಕರ್ನಾಟಕ ಟ್ರೋಫಿಯನ್ನು ಗೆದ್ದುಕೊಂಡಿದೆ.

27 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ‘ಎ’ ಗುಂಪಿನಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ರಾಜ್ಯ ತಂಡ ಹೈದರಾಬಾದ್ ತಂಡವನ್ನು ಮಣಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿತ್ತು. ನಾಲ್ಕರ ಘಟ್ಟದಲ್ಲಿ 9 ವಿಕೆಟ್‍ಗಳಿಂದ ಮಹಾರಾಷ್ಟ್ರವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.

karnataka cricket 2

Share This Article
Leave a Comment

Leave a Reply

Your email address will not be published. Required fields are marked *