ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಡಿ.5ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ‘ಪುಷ್ಪ 3’ ಬರೋದು ಪಕ್ಕಾ ಆಗಿದೆ. ಇದರ ನಡುವೆ ಹೊಸದೊಂದು ವಿಚಾರ ಚರ್ಚೆಗೆ ಗ್ರಾಸವಾಗಿದೆ. ‘ಪುಷ್ಪ 3’ನಲ್ಲಿ ಸ್ಟಾರ್ ನಟ ವಿಜಯ್ ದೇವರಕೊಂಡ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:UI: ಕಂಟೆಂಟ್ ಇರುವ ಸಿನಿಮಾವನ್ನು ಜನ ಕೈಬಿಡಲ್ಲ: ನಟ ಉಪೇಂದ್ರ
ಪವರ್‌ಫುಲ್ ಪಾತ್ರಗಳನ್ನು ಸೃಷ್ಟಿಸಿ ಪ್ರತಿಭಾವಂತ ನಟರಿಗೆ ಅವಕಾಶ ಕೊಡೋದ್ರಲ್ಲಿ ಸುಕುಮಾರ್ ಯಾವಾಗಲೂ ಮುಂದು. ಪುಷ್ಪ 2ನಲ್ಲಿ ಈಗಾಗಲೇ ಫಹಾದ್ ಫಾಸಿಲ್ ವಿಲನ್ ಆಗಿ ಅಬ್ಬರಿಸಿದ್ದಾರೆ. ‘ಪುಷ್ಪ 3’ನಲ್ಲಿ (Pushpa 3) ವಿಜಯ್ ದೇವರಕೊಂಡ (Vijay Devarakonda) ಅವರು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮುಂದೆ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜನಾ? ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಇನ್ನೂ ಡಿ.5ರಂದು ‘ಪುಷ್ಪ 2’ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ, ಅನಸೂಯ, ಫಹಾದ್ ಫಾಸಿಲ್, ಶ್ರೀಲೀಲಾ ಸೇರಿದಂತೆ ಅನೇಕರು ನಟಿಸಿದ್ದಾರೆ.