ವಿಜಯ್ ದೇವರಕೊಂಡ (Vijay Devarkonda) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಮುಖ್ಯ ಪಾತ್ರದಲ್ಲಿ ನಟಿಸಿದ್ದ ಸಿನಿಮಾ ಈಗ ಹಿಂದಿಯಲ್ಲಿ ರಿಮೇಕ್ ಆಗ್ತಿದೆ.
2019ರಲ್ಲಿ ತೆರೆಕಂಡು ಸೌತ್‌ನಲ್ಲಿ ಸಖತ್ ಸೌಂಡ್ ಮಾಡಿದ್ದ ಡಿಯರ್ ಕಾಮ್ರೇಡ್ (Dear Comrade) ಚಿತ್ರ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಹಾಗೂ ಪ್ರತಿಭಾ ರಾಂಟಾ ನಟಿಸುತ್ತಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮೇಲೆ ಮತ್ತೆ ಕನ್ನಡ ಫ್ಯಾನ್ಸ್ ಗರಂ
ಧರ್ಮ ಪ್ರೊಡಕ್ಷನ್‌ನಲ್ಲಿ ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಭರ್ತಿ ಆರು ವರ್ಷಗಳ ಬಳಿಕ ಹಿಂದಿಯಲ್ಲಿ ರಿಮೇಕ್ ಆಗಲು ಸಕಲ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾರನ್ನ ಇಡೀ ಸೌತ್ ಇಂಡಸ್ಟ್ರಿ ಮೆಚ್ಚಿಕೊಂಡಿದೆ. ಗೀತಾ ಗೋವಿಂದಂ ಸೂಪರ್ ಹಿಟ್ ಬಳಿಕ ಈ ಜೋಡಿ ಮತ್ತೊಂದು ಬಾರಿ ಒಟ್ಟಾಗಿ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ನಟಿಸಿತ್ತು.
ವಿಜಯ್ ಹಾಗೂ ರಶ್ಮಿಕಾ ಸದ್ಯ ಮದ್ವೆಯಾಗಲು ತಯಾರಿಯನ್ನ ನಡೆಸುತ್ತಿದ್ದಾರೆ. ಇದೇ ವರ್ಷ ಫೆ.26ಕ್ಕೆ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಇದೇ ವೇಳೆ ಈ ಸುದ್ದಿ ಜೋಡಿಗೆ ಮತ್ತಷ್ಟು ಸಂಭ್ರಮ ಹೆಚ್ಚಿಸಿದೆ.ಇದನ್ನೂ ಓದಿ: ಕಿರಿಕ್ ಪಾರ್ಟಿ ಸಿನಿಮಾ ನೆನೆದ ರಶ್ಮಿಕಾ ಮಂದಣ್ಣ

