ತೆಲುಗು ನಟ ವಿಜಯ್ ದೇವರಕೊಂಡ (Vijay Deverakonda) ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಡೆಂಗ್ಯೂ (Dengue) ಜ್ವರದಿಂದ ನಟ ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 20ರ ಒಳಗೆ ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ ವರದಿಗಳು ತಿಳಿಸಿವೆ. ಇದನ್ನೂ ಓದಿ: ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆಯಾದರೂ, ವಿಜಯ್ ದೇವರಕೊಂಡ ಅಥವಾ ಅವರ ತಂಡವು ಆಸ್ಪತ್ರೆ ದಾಖಲಾಗಿರುವ ಬಗ್ಗೆ ಯಾವುದೇ ಅಧಿಕೃತ (Official Message) ಮಾಹಿತಿ ಹಂಚಿಕೊಂಡಿಲ್ಲ. ಇದನ್ನೂ ಓದಿ: ತಲೈವಾನ್ ತಲೈವಿ ಟ್ರೈಲರ್ ರಿಲೀಸ್ – ವಿಜಯ್ ಸೇತುಪತಿ-ನಿತ್ಯಾ ಮಸ್ತ್ ಮಸ್ತ್..!
ಗೌತಮ್ ತಿನ್ನನುರಿ ನಿರ್ದೇಶನದ ನಟ ವಿಜಯ್ ದೇವರಕೊಂಡ ನಟನೆಯ ‘ಕಿಂಗ್‌ಡಮ್ʼ ಚಿತ್ರ ಇದೇ ಜುಲೈ 31 ರಂದು ಬಿಡುಗಡೆಯಾಗಲಿದೆ. 100 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಆದ್ರೆ ಚಿತ್ರ ರಿಲೀಸ್‌ಗೂ ಮೊದಲೇ ನಟ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.