ಬಾಲಿವುಡ್‌ನ ನಂಬರ್ ಒನ್ ಶೋ ಕರಣ್ ಜೋಹರ್ ನಿರೂಪಣೆಯ ಶೋನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಭಾಗವಹಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಎಪಿಸೋಡ್‌ನ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪ್ರೋಮೋದಲ್ಲಿ `ಲೈಗರ್’ ಜೋಡಿ ತಮ್ಮ ಸೆಕ್ಸ್ ಲೈಫ್ ಮತ್ತು ಡೇಟಿಂಗ್ ಕುರಿತು ಮಾತನಾಡಿದ್ದಾರೆ.

View this post on Instagram
`ಕಾಫಿ ವಿತ್ ಕರಣ್’ ಹೊಸ ಸೀಸನ್‌ನಲ್ಲಿ, ವಿಜಯ್ ತಮ್ಮ ಕೊನೆಯ ಬಾರಿಯ ಸೆಕ್ಸ್ ಕಾರಿನಲ್ಲಿ ಮಾಡಿದ್ದೇನೆ ಎಂದು ಶೋನಲ್ಲಿ ರಿವೀಲ್ ಮಾಡಿದ್ದಾರೆ. ನಂತರ ಅನನ್ಯಾ ಪಾಂಡೆಗೆ ಆದಿತ್ಯ ರಾವ್ ಕಪೂರ್ ಜತೆಗಿನ ಡೇಟಿಂಗ್ ವಿಚಾರ ಕೇಳಿದ್ದಾರೆ. ವಿಜಯ್ ಮತ್ತು ಅನನ್ಯಾ ಎಪಿಸೋಡ್ ಪ್ರೋಮೋನೇ ಸಖತ್ ವೈರಲ್ ಆಗುತ್ತಿದ್ದು, ಹೆಚ್ಚಿನ ಅಪ್‌ಡೇಟ್‌ಗೆ ಶೋ ಬರುವವರೆಗೂ ಕಾದುನೋಡಬೇಕಿದೆ.

