ಟಾಲಿವುಡ್ ಚಿತ್ರರಂಗದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ವಿಜಯ್ ಜನುಮದಿನದ ಸ್ಪೆಷಲ್ ಆಗಿ ಖುಷಿ ಸಿನಿಮಾದ ಮೊದಲ ಹಾಡು (Song) ರಿಲೀಸ್ ಮಾಡಲಾಗಿದೆ. ‘ನನ್ನ ರೋಜಾ ನೀನೇ’ (Nanna Roja Neene) ಎಂಬ ಮೆಲೋಡಿ ಟ್ರ್ಯಾಕ್ ಬಿಡುಗಡೆಯಾಗಿದ್ದು, ಕೇಳುಗರನ್ನು ಇಂಪ್ರೆಸ್ ಮಾಡುತ್ತಿದೆ.
ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಹೇಶಾಮ್ ಅಬ್ದುಲ್ ವಹಾಬ್ ಧ್ವನಿಯಾಗುವುದರ ಜೊತೆಗೆ ಟ್ಯೂನ್ ಹಾಕಿದ್ದಾರೆ. ಲವರ್ ಬಾಯ್ ಆಗಿ ವಿಜಯ್ ದೇವರಕೊಂಡ (Vijay Devarakonda) ಕಾಣಿಸಿಕೊಂಡಿದ್ದು, ಸಮಂತಾ (Samantha) ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾಶ್ಮೀರ ಭಾಗದಲ್ಲಿ ಇಡೀ ಸಾಂಗ್ ಅನ್ನು ಚಿತ್ರೀಕರಿಸಲಾಗಿದೆ. ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ನಿಷೇಧ : ಪ್ರತಿಭಟನೆಗೆ ಇಳಿದ ಬಿಜೆಪಿ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಖುಷಿ ಸಿನಿಮಾ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಮಜಿಲಿ ಹಿಟ್ ನಿರ್ದೇಶಕ ಶಿವ ನಿರ್ವಣ (Shiva Nirvana) ನಿರ್ದೇಶಿಸುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.