ಸದಾ ಯಶಸ್ಸಿನ ಬೇಟೆಯನ್ನೇ ಆಡುತ್ತಿದ್ದ ನಟ ವಿಜಯ್ ದೇವರಕೊಂಡ, ಮೊದಲ ಬಾರಿಗೆ ಅನ್ನುವಂತೆ ಲೈಗರ್ ಸಿನಿಮಾದಿಂದ ಮಕಾಡೆ ಮಲಗಿಕೊಂಡರು. ಈ ಸಿನಿಮಾದ ಸೋಲು ಅವರನ್ನು ದಿಕ್ಕೆಡಿಸಿತ್ತು. ಅದರಿಂದ ಆಚೆ ಬರಲು ಸಾಕಷ್ಟು ಒದ್ದಾಡಿದರು. ಈ ಸಿನಿಮಾದ ಸೋಲು ಕೇವಲ ವಿಜಯ್ ಗೆ ಮಾತ್ರವಲ್ಲ ನಿರ್ದೇಶಕ ಪೂರಿ ಜಗನ್ನಾಥ್ ಅವರಿಗೂ ಸಂಕಷ್ಟ ತಂದಿತ್ತು. ಈಗ ವಿಜಯ್ ಗೆ ಎಲ್ಲ ನೋವನ್ನೂ ಮರೆಯುವ ಅವಕಾಶ ಒಂದು ಬಂದಿದೆ. ಈಗವರು ಹೊಸ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ನೋವಿನಿಂದ ಆಚೆ ಬರುವ ಪ್ರಯತ್ನದಲ್ಲಿ ಇದ್ದಾರೆ.
Advertisement
ಹೌದು, ಲೈಗರ್ ಸೋಲಿನ ನಂತರ ವಿಜಯ್ ದೇವರಕೊಂಡ ಅವರು ಎರಡು ಸಿನಿಮಾಗಳು ನಿಂತುಕೊಂಡವು. ಪೂರಿ ಜಗನ್ನಾಥ್ ಜೊತೆಯೇ ಮಾಡಬೇಕಿದ್ದ ಸಿನಿಮಾ ಅರ್ಧಕ್ಕೆ ನಿಂತಿದೆ. ಸಮಂತಾ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದರು. ಸದ್ಯಕ್ಕೆ ಅದು ಕೂಡ ಸ್ಥಗಿತಗೊಂಡಿದೆ. ಹಾಗಾಗಿ ಈಗ ಒಪ್ಪಿಕೊಂಡಿರುವ ಸಿನಿಮಾಗೆ ಮಹತ್ವ ಬಂದಿದೆ. ಈ ಸಿನಿಮಾವನ್ನು ಜೆರ್ಸಿ ಖ್ಯಾತಿಯ ನಿರ್ದೇಶಕ ಗೌತಮ್ ತಿನ್ನನೂರು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ
Advertisement
Advertisement
ಈ ಸಿನಿಮಾದಲ್ಲಿ ವಿಜಯ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಲಿದ್ದಾರಂತೆ. ಅವರೇ ಸಿನಿಮಾದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಖಾಕಿ ಧರಿಸಿ ಮುಖಕ್ಕೆ ಮಾಸ್ಕರ್ ಧರಿಸಲಾದ ಹಾಗೂ ಬೆಂಕಿ ಹೊತ್ತಿ ಉರಿಯುತ್ತಿರುವ ಪೋಸ್ಟರ್ ವೊಂದನ್ನು ಅವರು ಶೇರ್ ಮಾಡಿದ್ದಾರೆ. ಅಂದಹಾಗೆ ಇದು ವಿಜಯ್ ಅವರ 12ನೇ ಸಿನಿಮಾ. ಈ ಚಿತ್ರಕ್ಕೆ ಇನ್ನೂ ಯಾವುದೇ ಹೆಸರಿಟ್ಟಿಲ್ಲ.
Advertisement
ನಿರ್ದೇಶಕ ಗೌತಮ್ ಕೂಡ ಹಿಟ್ ಸಿನಿಮಾಗಳನ್ನು ಕೊಟ್ಟವರು. ಅಲ್ಲದೇ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು. ಅವರ ಸಿನಿಮಾಗಳ ಬಗ್ಗೆ ಯಾವಾಗಲೂ ನಿರೀಕ್ಷೆ ಇದ್ದೇ ಇರುತ್ತದೆ. ಜೊತೆಗೆ ವಿಜಯ್ ದೇವರಕೊಂಡ ಕೂಡ ಸೇರಿಕೊಂಡಿದ್ದರಿಂದ ಈ ಹೊಸ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಚಿತ್ರತಂಡ ಮತ್ತಷ್ಟು ಮಾಹಿತಿಯನ್ನು ನೀಡಲಿದೆಯಂತೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k