ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಸೀಕ್ರೆಟ್ ಡೇಟಿಂಗ್‌ಗೆ ಸಿಕ್ತು ಸಾಕ್ಷಿ

Public TV
1 Min Read
RASHMIKA MANDANNA 2

‘ಕಿರಿಕ್ ಪಾರ್ಟಿ’ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೌತ್ ಇಂಡಸ್ಟ್ರಿ- ಬಾಲಿವುಡ್‌ನಲ್ಲಿ (Bollywood) ಸೆಟಲ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿರುವ ರಶ್ಮಿಕಾ ಬಗ್ಗೆ ಸದಾ ಕೇಳಿ ಬರೋ ವಿಚಾರ ಅಂದರೆ ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್. ನಮ್ಮಿಬ್ಬರ ನಡುವೆ ಏನಿಲ್ಲ ಎಂದು ಹೇಳುವ ಈ ಜೋಡಿ ಬಗ್ಗೆ ಹೊಸ ಸುದ್ದಿಯೊಂದು ಸೌಂಡ್ ಮಾಡುತ್ತಿದೆ. ‘ಗೀತಾ ಗೋವಿಂದಂ’ (Geetha Govindam) ಜೋಡಿಯ ಡೇಟಿಂಗ್ ನ್ಯೂಸ್ ನಿಜಾ ಎಂಬುದ್ದಕ್ಕೆ ಫ್ಯಾನ್ಸ್‌ಗೆ ಹೊಸ ಸಾಕ್ಷಿಯೊಂದು ಸಿಕ್ಕಿದೆ.

rashmika mandanna 3

ವಿಜಯ್-ರಶ್ಮಿಕಾ ಮೊದಲು ಭೇಟಿಯಾಗಿದ್ದು, ‘ಗೀತಾ ಗೋವಿಂದಂ’ ಸಿನಿಮಾದ ಸೆಟ್‌ನಲ್ಲಿ. ಈ ಚಿತ್ರಕ್ಕಾಗಿ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿದ್ದ ರಶ್ಮಿಕಾ ಬೋಲ್ಡ್‌ ಆಗಿ ನಟಿಸಿದ್ದರು. ಹಾಗಾಗಿ ರಶ್ಮಿಕಾ ಎಂಗೇಜ್‌ಮೆಂಟ್‌ ಬ್ರೇಕಪ್‌ ಆಗಲು ಕಾರಣ ಎಂಬುದು ನೆಟ್ಟಿಗರ ವಾದವಾಗಿತ್ತು. ಬ್ರೇಕಪ್ ನಂತರ ವಿಜಯ್ ಜೊತೆ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇಷ್ಟು ವರ್ಷಗಳ ಕಾಲ ವಿಜಯ್‌- ರಶ್ಮಿಕಾ ಈ ಬಗ್ಗೆ ನೋ ಎಂದೇ ಹೇಳುತ್ತಿದ್ದರು. ಆದರೆ ಅದು ನಿಜಾ ಎಂಬುದ್ದಕ್ಕೆ ಸ್ಪಷ್ಟನೆ ಇರಲಿಲ್ಲ. ಈಗ ಅದಕ್ಕೆಲ್ಲಾ ಉತ್ತರ ಸಿಕ್ಕಿದೆ.

Vijay D and Rashmika spotted with their friends & family. So they are actually dating.byu/Muted-Expression-109 in BollyBlindsNGossip

ಈಗ ವಿಜಯ್ (Vijay Devarakonda) ಹಾಗೂ ರಶ್ಮಿಕಾ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಇವರ ಕುಟುಂಬದವರು ಕೂಡ ಇದ್ದರು ಅನ್ನೋದು ವಿಶೇಷ. ಈ ಕುರಿತ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ನಾದಬ್ರಹ್ಮ ಹಂಸಲೇಖಗೆ ಪದ್ಮಶ್ರೀ ಕೊಡಿ : ನಿರ್ದೇಶಕ ಶಶಾಂಕ್ ಮನವಿ

rashmika mandanna and vijay devarakonda 1

ವಿಜಯ್ ದೇವರಕೊಂಡ ಲೈಗರ್ ಸೋಲಿನ ನಂತರ ಮೃಣಾಲ್ ಠಾಕೂರ್ ಜೊತೆಗೊಂದು ಸಿನಿಮಾ ಮಾಡ್ತಿದ್ದಾರೆ. ಶ್ರೀಲೀಲಾ- ವಿಜಯ್ ಕಾಂಬೋದಲ್ಲಿ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ರಶ್ಮಿಕಾ, ಅನಿಮಲ್ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಪುಷ್ಪ 2, ರೈನ್‌ಬೋ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Share This Article