ತಮಿಳಿನ ಸೂಪರ್ ಸ್ಟಾರ್ ವಿಜಯ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯದಲ್ಲೇ ಬಳ್ಳಾರಿಗೆ ಆಗಮಿಸಲಿದ್ದಾರೆ. ಇದೇ ಮೊದಲ ಬಾರಿಗೆ ಈ ಜೋಡಿ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಮತ್ತು ಒಟ್ಟಾಗಿ ಕರ್ನಾಟಕಕ್ಕೆ ಬರುತ್ತಿರುವುದರಿಂದ ರಶ್ಮಿಕಾ ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ. ಅಷ್ಟಕ್ಕೂ ಈ ಜೋಡಿ ಬಳ್ಳಾರಿಗೆ ಬರುತ್ತಿರುವುದು ಯಾಕೆ ಎನ್ನುವುದನ್ನು ಸ್ವತಃ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಬಹಿರಂಗ ಪಡಿಸಿದ್ದಾರೆ.
Advertisement
ವಿಜಯ್ ಮತ್ತು ರಶ್ಮಿಕಾ ದೇವರಕೊಂಡ ‘ವಾರಿಸು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ವಿಜಯ್ ಜೊತೆ ರಶ್ಮಿಕಾ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಹಾಡೊಂದರ ಚಿತ್ರೀಕರಣ ಬಳ್ಳಾರಿಯಲ್ಲಿ ನಡೆಯಲಿದೆ. ಅದಕ್ಕಾಗಿ ಅವರು ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ಈ ಹಾಡಿನ ನೃತ್ಯ ಸಂಯೋಜನೆಯನ್ನು ಜಾನಿ ಮಾಸ್ಟರ್ ಮಾಡುತ್ತಿದ್ದು, ಈಗಾಗಲೇ ಬಳ್ಳಾರಿ ಸುತ್ತಮುತ್ತ ಲೋಕೇಶನ್ ಕೂಡ ನೋಡಿಕೊಂಡು ಹೋಗಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ
Advertisement
Advertisement
ಕೆಲವೇ ದಿನಗಳಲ್ಲಿ ವಾರಿಸು ಸಿನಿಮಾದ ಬ್ಯುಟಿಫುಲ್ ಗೀತೆಯೊಂದು ಈ ನೆಲದಲ್ಲಿ ಚಿತ್ರೀಕರಣಗೊಳ್ಳಲಿದೆ. ಹಾಗಾಗಿ ಶೂಟಿಂಗ್ ಸ್ಥಳವನ್ನು ನೋಡಲು ಬಂದಿದೆ. ಬಂದಿರುವ ಕೆಲಸ ಪಕ್ಕಾ ಆಗಿದ್ದು, ಆ ಭಾಗದ ಜನತೆ ಸಹಕರಿಸಿದ್ದಕ್ಕೆ ಧನ್ಯವಾದಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಸದ್ಯದಲ್ಲೇ ಈ ಹಾಡಿನ ಶೂಟಿಂಗ್ ನಡೆಸುವುದಾಗಿಯೂ ಅವರು ಹೇಳಿದ್ದಾರೆ.
Advertisement
ಚಿಕ್ಕಂದಿನಿಂದಲೂ ವಿಜಯ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವರು ರಶ್ಮಿಕಾ. ಅವರೊಂದಿಗೆ ನಟಿಸಬೇಕು ಎಂದು ಕನಸು ಕೂಡ ಕಂಡವರು. ವಾರಿಸು ಮೂಲಕ ಕನಸು ನನಸಾಗಿದೆ. ವಂಶಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಹುತೇಕ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು, ಆ ಹಾಡುಗಳಲ್ಲಿ ಒಂದನ್ನು ಕರ್ನಾಟಕದಲ್ಲಿ ಶೂಟ್ ಮಾಡುತ್ತಿದ್ದಾರೆ ನಿರ್ದೇಶಕರು.