Connect with us

Cinema

ಡಿಫ್ರೆಂಟ್ ಲುಕ್ ನಲ್ಲಿ ಪಂಚತಂತ್ರದ ವಿಹಾನ್ ಗೌಡ

Published

on

ಸ್ಯಾಂಡಲ್‍ವುಡ್‍ಗೆ ಹೊಸಬರ ಎಂಟ್ರಿ ದಿನಬೆಳಗಾದ್ರೂ ಆಗ್ತಾನೇ ಇರತ್ತೆ. ಆದ್ರೆ ಒಮ್ಮೆ ಎಂಟ್ರಿ ಕೊಟ್ಟು ಭರವಸೆ ಹುಟ್ಟುಹಾಕಿದ ಮೇಲಂತೂ, ಮುಂದಿನ ಸಿನ್ಮಾ ಯಾವುದಾಗಿರತ್ತೆ..? ಹೇಗಿರತ್ತೆ ಅನ್ನೂ ಕುತೂಹಲವಿರತ್ತೆ. ಈ ಹಿಂದೆ ಕಾಲ್ ಕೆ.ಜಿ ಪ್ರೀತಿ, ಯೋಗರಾಜ್ ಭಟ್ಟರ ಪಂಚತಂತ್ರ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ವಿಹಾನ್ ‘ಲೆಗಸಿ’ ಮೂಲಕ ಮತ್ತೊಮ್ಮೆ ಮೋಡಿ ಮಾಡೊಕೆ ಬರ್ತಿರೋದು ಗೊತ್ತಿರೋ ವಿಚಾರ. ಚಿತ್ರಕ್ಕಾಗಿ ಕೊಂಚ ಬಾಡಿಯನ್ನ ಮಾಡಿಫೈ ಮಾಡ್ಕೊಂಡು ವಿಹಾನ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ರು.

ಈಗ ಯೋಗರಾಜ್ ಭಟ್ಟರ ಪಂಚತಂತ್ರ ಸಿನೆಮಾವಾದ ಮೇಲೆ ವಿಹಾನ್ ನಟಿಸ್ತಿರೋ ‘ಲೆಗಸಿ’ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಸುಭಾಷ್ ಚಂದ್ರ ನಿರ್ದೇಶನದ ಈ ಸಿನೆಮಾ ಗ್ರೇಟ್ ಬ್ರೋಸ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗ್ತಿದೆ. ಚಿತ್ರಕ್ಕೆ ನಿಷಾ ನಾಯಕಿಯಾಗಿ ಆಯ್ಕೆಯಾಗಿದ್ದು ಮಾಡೆಲ್ ಆಗಿರೋ ನಿಷಾ, ಈ ಹಿಂದೆ ತೆಲುಗಿನ ಸಿನೆಮಾವೊಂದರಲ್ಲಿ ನಟಿಸಿದ್ದಾರಂತೆ. ಜೊತೆಗೆ ಸದ್ಯ ತಮಿಳು ಪ್ರಾಜೆಕ್ಟ್ ಕೂಡ ಕೈಯಲ್ಲಿದೆಯಂತೆ.

ರಿಲೀಸ್ ಆಗಿರೋ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಕೂಡ ಇಂಟ್ರಸ್ಟಿಂಗ್ ಆಗಿದ್ದು, ಆಕ್ಷನ್, ಥ್ರಿಲ್ಲರ್ ಕಥೆಯ ಎಳೆಯನ್ನ ಚಿತ್ರದಲ್ಲಿ ಅಚ್ಯುತ್ ಕುಮಾರ್, ಮಜಾಟಾಕಿಸ್ ವಿಶ್ವ ಸೇರಿದಂತೆ ಹಲವರ ತಾರಾಗಣವಿರಲಿದೆ. ಈಗಾಗಲೇ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಆಗಿದ್ದು, ಮಾರ್ಚ್ ತಿಂಗಳಲ್ಲಿ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಪ್ಲಾನ್ ನಲ್ಲಿದೆ ಚಿತ್ರತಂಡ.

ಈ ಲೆಗಸಿ ಚಿತ್ರ ಸುಭಾಷ್ ಚಂದ್ರ ನಿರ್ದೇಶನದ ಮೊದಲ ಸಿನೆಮಾವಾಗಿದ್ದು, ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ, ಹಾಗೂ ರಾಮನಗರದ ಸುತ್ತಮುತ್ತ ಚಿತ್ರೀಕರಣ ನಡೆಸುವ ಪ್ಲಾನ್ ಚಿತ್ರತಂಡಕ್ಕಿದೆ. 1990ರಿಂದ 2019ರವರೆಗೆ ನಡೆಯುವ ಬರಹಗಾರನೊಬ್ಬನ ಜೀವನ ಹಾಗೂ ಆತನ ಮುಂದಿನ ಪೀಳಿಗೆ ಸಮಾಜವನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಆಕ್ಷನ್, ಥ್ರಿಲ್ಲರ್ ಕಥೆಯ ಮೂಲಕ ನಿರ್ದೇಶಕರು ಹೇಳಲಿದ್ದಾರಂತೆ.

ಪ್ರೀತಿಯ ಜೊತೆ ತಂದೆ-ಮಗನ ಸೆಂಟಿಮೆಂಟ್ ಕಥೆ ಕೂಡ ಈ ಚಿತ್ರದಲ್ಲಿರಲಿದ್ದು. ಚಿತ್ರಕ್ಕೆ ಸುರೇಶ್ ರಾಜ್ ಸಂಗೀತ, ಸುಂದರ್ ಪಿ ಛಾಯಾಗ್ರಹಣ, ಶಿವ-ಪ್ರೇಮ್ ಸಾಹಸ, ಸುನಿಲ್ ಎಸ್.ಎಲ್.ಆರ್. ಸಂಕಲನ, ಜಯಂತ್ ಕಾಯ್ಕಿಣಿ ಮತ್ತು ಡಾ. ವಿ. ನಾಗೇಂದ್ರಪ್ರಸಾದ್ ಅವರ ಗೀತಸಾಹಿತ್ಯವಿರೋ ಲೆಗಸಿ ಯ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಡಿ ಬೀಟ್ಸ್ ಯೂ ಟ್ಯೂಬ್ ನಲ್ಲಿ ಹವಾ ಕ್ರಿಯೇಟ್ ಮಾಡ್ತಿದೆ.

Click to comment

Leave a Reply

Your email address will not be published. Required fields are marked *