ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಕಳ್ಳರಿಬ್ಬರು ಎಂಟಿಎಂನಲ್ಲಿ ಹಣ ದೋಚಿರುವ ಘಟನೆ ನಗರದ ಯಶವಂತಪುರದ ತ್ರೀವೆಣಿ ರಸ್ತೆಯಲ್ಲಿ ನಡೆದಿದೆ.
ಯಶವಂತಪುರದ ತ್ರೀವೆಣಿ ರಸ್ತೆಯಲ್ಲಿರುವ ಎಟಿಎಂ ಮೆಷಿನ್‍ನಲ್ಲಿ ಕಳ್ಳರು ಹಿಡನ್ ಕ್ಯಾಮೆರಾ ಹಾಗೂ ಸ್ಕಿಮ್ಮಿಂಗ್ ಡಿವೈಸ್ ಅಳವಡಿಸಿ, ಡಾಟಾ ಕದ್ದು ನಕಲಿ ಎಟಿಎಂ ತಯಾರಿಸಲು ಯತ್ನಿಸಿದ್ದರು. ಮಹಿಳೆಯೊಬ್ಬರು ಹಣ ಡ್ರಾ ಮಾಡಲು ಎಟಿಎಂಗೆ ಬಂದಿದ್ದನ್ನು ನೋಡಿದ ಕಳ್ಳರು, ಬೋನ್ಸ್ ಬೈಕ್‍ನಲ್ಲಿ ಬಂದು ಎಟಿಎಂ ಸೆಂಟರ್ ಮುಂದೆ ನಿಂತಿದ್ದರು. ಇದನ್ನೂ ಓದಿ: ಎಟಿಎಂ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ 3 ವಿದೇಶಿಯರು ಸೇರಿ ಐವರು ಅರೆಸ್ಟ್
ಎಷ್ಟೇ ಪ್ರಯತ್ನಿಸಿದರೂ ಮಹಿಳೆಗೆ ಹಣ ಡ್ರಾ ಸಾಧ್ಯವಾಗಲಿಲ್ಲ. ಹೀಗಾಗಿ ಅಲ್ಲಿಂದ ಹೊರನಡೆದರು. ಆಗ ಅವರು ಕಳ್ಳರು ಸ್ಕಿಮ್ಮಿಂಗ್ ಡಿವೈಸ್ ಹಾಗೂ ಹಿಡನ್ ಕ್ಯಾಮೆರಾದ ಮೂಲಕ ಡೆಟಾ ಪಡೆದು ಹಣ ಡ್ರಾ ಮಾಡಿಕೊಂಡಿದ್ದಾರೆ. ಖದೀಮರ ಚಲನವಲನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರು, ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರಿಗೆ ಹೇಳುವುದಾಗಿ ಬೆದರಿಸುತ್ತಿದ್ದಂತೆ ಕಳ್ಳರಿಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ತಕ್ಷಣವೇ ಸ್ಥಳೀಯರು ಬೋನ್ಸ್ ಬೈಕ್ ಸಮೇತ ಕಳ್ಳರನ್ನು ಹಿಡಿದು ಯಶವಂತಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.