ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ (Pakistan) ವಿಯೆಟ್ನಾಂ ರಾಯಭಾರಿ (Vietnamese Ambassador) ನ್ಗುಯೆನ್ ಟಿಯೆನ್ ಫಾಂಗ್ ಅವರ ಪತ್ನಿ ಇಸ್ಲಾಮಾಬಾದ್‌ನಲ್ಲಿ ನಾಪತ್ತೆಯಾಗಿದ್ದಾರೆ. ಬೆಳಿಗ್ಗೆ 11 ಗಂಟೆಗೆ ತಮ್ಮ ನಿವಾಸದಿಂದ ತೆರಳಿದ್ದ ಪತ್ನಿ ಮರಳಿ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಸ್ಲಾಮಾಬಾದ್ ಪೊಲೀಸರು ಈಗ ಸಿಸಿಟಿವಿ ದೃಶ್ಯ ಆಧಾರಿಸಿ ಮಹಿಳೆಯ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆಯಲ್ಲಿ ನಾಗೇಂದ್ರ ಇದ್ದಾರೋ ಇಲ್ವೋ ಗೊತ್ತಿಲ್ಲ: ಸಚಿವ ಮಹದೇವಪ್ಪ
ಕಳೆದ ವಾರ ನಕಲಿ ಪೊಲೀಸರು ಇಸ್ಲಾಮಾಬಾದ್‌ನ (Islamabad) ರಾಜತಾಂತ್ರಿಕ ಎನ್‌ಕ್ಲೇವ್‌ನ ಎಫ್ -6 ಸೂಪರ್‌ಮಾರ್ಕೆಟ್‌ನಲ್ಲಿ ವಿದೇಶಿ ಪ್ರಜೆಯನ್ನು ಲೂಟಿ ಮಾಡಿದ್ದರು.
ಇಬ್ಬರು ವ್ಯಕ್ತಿಗಳು ಪೊಲೀಸ್ ಅಧಿಕಾರಿಗಳಂತೆ ನಟಿಸಿ ಮಹಿಳೆಯನ್ನು ತಪಾಸಣೆಗೆ ನಿಲ್ಲಿಸಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ವಿದೇಶಿ ಪ್ರಜೆ ಮಹಿಳೆಯನ್ನು ತಡೆದಾಗ ನಕಲಿ ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.