`ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ರೋಲ್ ಮಾಡೆಲ್ ಸಿನಿಮಾ : ನಟ ರಘು ರಾಮನಕೊಪ್ಪ

Public TV
2 Min Read
Raghu Ramakoppa

ರುಣ್ ಅಮುಕ್ತ (Arun Amukta) ನಿರ್ದೇಶನದಲ್ಲಿ ಮೂಡಿ ಬಂದಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಚಿತ್ರದ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಚರ್ಚೆ ಶುರುವಾಗಿದೆ. ಹಂತ ಹಂತವಾಗಿ ಅಂಥದ್ದೊಂದು ಕುತೂಹಲ ನೋಡುಗರಲ್ಲಿ ಮೂಡಿಕೊಳ್ಳುವಂತೆ ಮಾಡುವಲ್ಲಿ ಚಿತ್ರತಂಡ ಯಶ ಕಂಡಿದೆ. ಹೀಗೆ ಸಾಗಿ ಬಂದಿರುವ ಈ ಸಿನಿಮಾದ ಚಿತ್ರೀಕರಣವೀಗ ಸಮಾಪ್ತಿಗೊಂಡಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಆಯೋಜಿಸಿದ್ದ ಚಿತ್ರತಂಡ ಮಾಧ್ಯಮಗಳ ಮುಂದೆ ಒಂದಷ್ಟು ವಿಚಾರಗಳನ್ನು ತೆರೆದಿಟ್ಟಿದೆ. ಈ ಹಂತದಲ್ಲಿ ಚಿತ್ರೀಕರಣ ನಡೆದ ಬಗೆ, ಪಾತ್ರದ ಝಲಕ್ಕುಗಳೆಲ್ಲವೂ ಆಯಾ ಪಾತ್ರಗಳನ್ನು ನಿರ್ವಹಿಸಿದ ಕಲಾವಿದರ ಕಡೆಯಿಂದಲೇ ಅನಾವರಣಗೊಂಡಿರೋದು ವಿಶೇಷ.

Bhavana Appu

ಈ ಸಿನಿಮಾದಲ್ಲಿ ಬಹುಮುಖ್ಯವಾದ ಪಾತ್ರವೊಂದನ್ನು ರಘು ರಾಮನಕೊಪ್ಪ (Raghu Ramakoppa) ನಿಭಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆ ಹೊಂದಿರುವ ನಟ ರಘು. ಸಿನಿಮಾದಿಂದ ಸಿನಿಮಾಗೆ ಅವರ ಪಾಲಿಗೆ ಭಿನ್ನವಾದ ಪಾತ್ರಗಳೇ ಒಲಿದು ಬರುತ್ತಿವೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಿ ಈವರೆಗಿನದ್ದಕ್ಕಿಂತ ವಿಶೇಷವಾದ ಪಾತ್ರ ಸಿಕ್ಕ ಖುಷಿ ಅವರಲ್ಲಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ರಘು ರಾಮನಕೊಪ್ಪ ಒಂದಿಡೀ ಚಿತ್ರತಂಡದ ಕಾರ್ಯವೈಖರಿಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಲೇ, ತಮ್ಮ ಪಾತ್ರದ ಬಗ್ಗೆ ಒಂದಷ್ಟು ಅಂಶಗಳನ್ನು ಹಂಚಿಕೊಂಡಿದ್ದಾರೆ.

Vidyarthi Vidyarthiniyare 1 2

ಸಿನಿಮಾ ಬಗ್ಗೆ ಕನಸಿಟ್ಟುಕೊಂಡವರಿಗೆಲ್ಲ ಪ್ರತಿಯೊಂದರಲ್ಲಿಯೂ ಪ್ರೇರಣೆಯಾಗಬಲ್ಲ ರೋಲ್ ಮಾಡೆಲ್ಲಿನಂತಾ ಚಿತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಎಂಬುದು ರಘು ಅವರ ಅಚಲ ವಿಶ್ವಾಸ. ಯಾಕೆಂದರೆ, ಪಾತ್ರಗಳನ್ನು ಕಲಾವಿದರಿಗೆ ಕನೆಕ್ಟ್ ಮಾಡೋದರಿಂದ ಹಿಡಿದು, ಕಲಾವಿದರನ್ನು ಹೇಗೆಲ್ಲ ನಡೆಸಿಕೊಳ್ಳಬೇಕು ಎಂಬಲ್ಲಿಯವರೆಗೂ ಅವರ ಪಾಲಿಗೆ ಈ ಸಿನಿಮಾ ವಿಶೇಷ ಅನ್ನಿಸಿದೆಯಂತೆ. ಇನ್ನುಳಿದಂತೆ, ಬೇರೆ ಬೇರೆ ತೆರನಾದ ಪಾತ್ರಗಳನ್ನು ಬಯಸುವ ರಘು ಪಾಲಿಗಿಲ್ಲಿ ಬೇರೆಯದ್ದೇ ಶೇಡಿನ ಪಾತ್ರ ಸಿಕ್ಕಿದೆಯಂತೆ.

Vidyarthi Vidyarthiniyare 4 2

ಸಾಮಾನ್ಯವಾಗಿ ಹಾಸ್ಯ ಪ್ರಧಾನ ಪಾತ್ರಗಳ ಮೂಲಕ ರಘು ರಾಮಕೊಪ್ಪ ಪ್ರಸಿದ್ಧರು. ಆದರೆ, ಅರುಣ್ ಅಮುಕ್ತ ಅದಕ್ಕೆ ತದ್ವಿರುದ್ಧ ಪಾತ್ರವೊಂದನ್ನು ರಘು ಅವರಿಗಾಗಿಯೇ ಸೃಷ್ಟಿಸಿದ್ದಾರೆ. ಅದರ ಫಲವಾಗಿ ರಘು ಇಲ್ಲಿ ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಓರ್ವ ಮಗಳ ತಂದೆಯಾಗಿ, ಕುಟುಂಬದ ಜವಾಬ್ದಾರಿ ಹೊತ್ತ ಗೃಹಸ್ಥನಾಗಿ, ಮಗಳ ಬದುಕಿನಲ್ಲಾಗುವ ಘಟನಾವಳಿಗಳನ್ನು ಕಂಡು ಸಂಕಟ ಪಡುವ ಅಪ್ಪನಾಗಿ ಅವರಿಲ್ಲಿ ಕಾಣಿಸಿಕೊಂಡಿದ್ದಾರಂತೆ. ಒಟ್ಟಾರೆಯಾಗಿ, ಅದೊಂದು ಭಾವನಾತ್ಮಕ ಅಂಶಗಳಿರುವ ಪಾತ್ರ. ಹೀಗೆ ಕಲಾವಿದರನ್ನು ಒಂದೇ ಬಗೆಯ ಪಾತ್ರಗಳಿಗೆ ಕಟ್ಟುಬೀಳುವಂತೆ ಮಾಡದೆ, ಹೊಸಾ ಸಾಧ್ಯತೆಗಳಿಗೆ ತೆರೆದುಕೊಳ್ಳಲು ಅವಕಾಶ ಮಾಡಿಕೊಟ್ಟ ಈ ಚಿತ್ರತಂಡಕ್ಕೆ ರಘು ರಾಮನಕೊಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ. ಇದಲ್ಲದೇ ಈ ತಂಡದಿಂದ ಇನ್ನು ಮುಂದೆ ಬಿಗ್ ಪ್ರಾಜೆಕ್ಟುಗಳು ಸೃಷ್ಟಿಯಾಗುವ ಭರವಸೆಯನ್ನೂ ಕೂಡಾ ಹೊರಹಾಕಿದ್ದಾರೆ.

 

ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Share This Article