ತಮ್ಮ ಮೇಲೆ ಗುರುತರ ಆರೋಪ ಮಾಡಿದ ಆಡಿಯೋ ವಿರುದ್ಧ ನಟ ವಿದ್ಯಾಭರಣ್ ಇಂದು ದೂರು ದಾಖಲಿಸಿದ್ದಾರೆ. ಆಡಿಯೋದಲ್ಲಿ ತಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಲಾಗಿದೆ. ಅವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಅವರ ಮಾತುಗಳಿಂದಾಗಿ ತಮಗೂ ಮತ್ತು ತಮ್ಮ ಕುಟುಂಬಕ್ಕೂ ಮುಜುಗರ ಉಂಟಾಗಿದೆ. ಆಡಿಯೋದಲ್ಲಿ ಮಾತನಾಡಿದವರು ಯಾರು ಎಂಬುದನ್ನು ಪತ್ತೆ ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ವಿದ್ಯಾಭರಣ್.
ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ವಿಷಯ ನಾನಾ ರೂಪಗಳನ್ನು ಪಡೆದುಕೊಳ್ಳುತ್ತಿದೆ. ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ಇಬ್ಬರೂ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದು, ಅದು ನಿಶ್ಚಿತಾರ್ಥ ಅಲ್ಲ, ಕೇವಲ ಹಣ್ಣು ಕಾಯಿ ಇಡುವ ಶಾಸ್ತ್ರ ಎಂದು ಸ್ಪಷ್ಟ ಪಡಿಸಿದ್ದಾರೆ. ಆದರೆ, ವಿದ್ಯಾಭರಣ್ ಬಗ್ಗೆ ನಟಿಯೊಬ್ಬಳು ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಮಾತ್ರ ನಾನಾ ಅನುಮಾನಗಳನ್ನು ಹುಟ್ಟು ಹಾಕಿದೆ. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್
ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ವಿದ್ಯಾಭರಣ್ ಅವರು, ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಾಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಆಯಿತು ಎನ್ನುವುದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಪ್ಲಾನ್ ಮಾಡಿದ್ದಾರೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪವನ್ನು ಮಾಡಬಹುದಿತ್ತು. ನನ್ನ ಮೊದಲ ಫಿಲ್ಮ್ ಬಂದಾಗಲೇ ಇವರು ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಆಕೆ ಆರೋಪ ಮಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.
ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಬದಲು ಆಕೆಯೇ ಕಂಪ್ಲೆಂಟ್ ಕೊಡಬಹುದಿತ್ತು. ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರುವ ಹಿತಶತ್ರುಗಳು ಹೀಗೆ ಮಾಡುತ್ತಿದ್ದಾರೆ. ನಾನು ಇನ್‍ಸ್ಟಾಗ್ರಾಮ್ ಅನ್ನು ಮೊದಲೇ ಡಿಲೀಟ್ ಮಾಡಿದ್ದೇನೆ. ನನ್ನ ಇನ್‍ಸ್ಟಾಗ್ರಾಮ್ ಹ್ಯಾಕ್ ಆಗಿತ್ತು. ತುಂಬಾ ಹಿಂದೆಯೇ ಡಿಲೀಟ್ ಆಗಿದೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಆಡಿಯೋದಲ್ಲಿ ಮಾತನಾಡಿದವರು ಕಿರುತೆರೆ ನಟಿ ಎಂದು ಹೇಳಲಾಗುತ್ತಿದ್ದು, ಆದರೆ, ಆ ವಾಯ್ಸು ತಮಗೆ ಗೊತ್ತಿಲ್ಲ ಎಂದು ವಿದ್ಯಾಭರಣ್ ತಿಳಿಸಿದ್ದಾರೆ.
ನನ್ನ ರೀತಿ ಬೇರೆ ಯಾವ ಹುಡುಗನಿಗೂ ಹೀಗೆ ಆಗಬಾರದು. ಇವತ್ತು ಬುದ್ಧಿ ಕಲಿಸಿಲ್ಲ ಅಂದರೆ, ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಆಗುತ್ತದೆ. ನಾನು ಮೂರು ತಿಂಗಳು ಯಾವ ಹುಡುಗಿಯನ್ನು ಕೂಡ ಕರೆದುಕೊಂಡು ಬಂದಿಲ್ಲ. ನೇರವಾಗಿ ಬಂದು ದೂರು ಕೊಡದೇ ಈ ರೀತಿ ಮಾಡಿರುವುದರಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.