ಬಾಲಿವುಡ್ ನಟಿ ವಿದ್ಯಾ ಬಾಲನ್ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ತಮ್ಮ ನಟನಾ ಕೌಶಲ್ಯದಿಂದ ಮತ್ತೆ, ಮತ್ತೆ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಈ ನಟಿ ದಕ್ಷಿಣದ ಸೂಪರ್ಸ್ಟಾರ್ ಮೋಹನ್ಲಾಲ್ ಅವರೊಂದಿಗೆ ಒಟ್ಟಿಗೆ ಕೆಲಸ ಮಾಡುತ್ತಾ, ಅವರಿಂದ ಕಲಿತ ಪಾಠವೇನು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
Advertisement
ವಿದ್ಯಾ ಬಾಲನ್ ಅವರು ಮೋಹನ್ಲಾಲ್ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದರು. ಆದರೆ ದುರದೃಷ್ಟವಶಾತ್, ಆ ಚಿತ್ರವು ಸ್ಥಗಿತಗೊಂಡಿತು. ಈ ಚಿತ್ರದ ಕುರಿತು ಮಾತನಾಡಿದ ವಿದ್ಯಾ, ಈ ಚಿತ್ರಕ್ಕಾಗಿ ಸುಮಾರು 2 ವಾರಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ಮೋಹನ್ಲಾಲ್ ಮತ್ತು ನಿರ್ದೇಶಕರಿಗೆ ಸಮಸ್ಯೆಗಳಿವೆ, ಆದ್ದರಿಂದ ಬಹಳಷ್ಟು ಬಾರಿ ಚಿತ್ರೀಕರಣವನ್ನು ರದ್ದುಗೊಳಿಸಲಾಯಿತು. ಅವರ ಜೊತೆ ಕೇವಲ 6-7 ದಿನ ಕೆಲಸ ಮಾಡಿದ್ದೇನೆ ಎಂದು ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್
Advertisement
ನಾನೊಬ್ಬಳು ನಟಿಯಾಗಿ ಮೋಹನ್ ಲಾಲ್ ಅವರನ್ನು ಪ್ರೀತಿಸುತ್ತೇನೆ. ಅವರಿಂದ ನಾನು ದೊಡ್ಡ ಪಾಠವನ್ನು ಕಲಿತಿದ್ದೇನೆ. ನಾನು ಯಾವಾಗಲೂ ಅವರು ನನ್ನ ನೆಚ್ಚಿನ ನಟ ಎಂದು ಹೇಳುತ್ತಿದ್ದೆ. ಸೆಟ್ನಲ್ಲಿ ನಾನು ಮೋಹನ್ಲಾಲ್ ಅವರ ಜೊತೆಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಅವರ ನನಗೆ ಹೇಳಿದ್ದರು, ನಾನು ಸ್ಕ್ರಿಪ್ಟ್ ಓದಲು ಬಯಸುವುದಿಲ್ಲ. ಆದರೆ ನಿರ್ದೇಶಕರು ಕರೆದಾಗ ಮ್ಯಾಜಿಕ್ ಆಗುವಂತೆ ನಾನು ನಟಿಸಲು ನಾನು ಬಯಸುತ್ತೇನೆ. ಅವರು ಯಾವಾಗಲೂ ಸಿನಿಮಾ ತಂಡವನ್ನು ಬೆಂಬಲಿಸುತ್ತಿದ್ದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ನಾನು ಅವರಿಂದ ದೊಡ್ಡ ಪಾಠವನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.