ಪಬ್ಲಿಕ್ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ವಿದ್ಯುಕ್ತ ಚಾಲನೆ – 35 ಕ್ಕೂ ಅಧಿಕ ಸಂಸ್ಥೆಗಳು ಭಾಗಿ

Public TV
2 Min Read
EducationExpo 3

– ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್

ಬೆಂಗಳೂರು: ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ Ad6 ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ `ಪಬ್ಲಿಕ್ ಟಿವಿ ಎಕ್ಸ್‌ ಪೋ ವಿದ್ಯಾಮಂದಿರ’ (Vidhyamandira) ಶೈಕ್ಷಣಿಕ ಮೇಳಕ್ಕೆ `ಪಬ್ಲಿಕ್ ಟಿವಿ’ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅವರು ಚಾಲನೆ ನೀಡಿದರು.

EducationExpo 1 1

ಶನಿವಾರ ಬೆಳಗ್ಗೆ 10:30 ಗಂಟೆಗೆ ಕೇಂಬ್ರಿಡ್ಜ್ ಸಂಸ್ಥೆಯ ಮುಖ್ಯಸ್ಥ ಡಿ.ಕೆ.ಮೋಹನ್ ಅವರು ವಿದ್ಯಾಮಂದಿರ ಮೇಳದ ಟೇಪ್ ಕಟ್ ಮಾಡಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ಕೊಟ್ಟರು. ಈ ವೇಳೆ ಆರ್‍ಆರ್ ಸಂಸ್ಥೆಯ ಕಾರ್ಯದರ್ಶಿ ಕಿರಣ್ ಹೆಚ್.ಆರ್ ಅವರು ಸಾಥ್ ನೀಡಿದರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಚಾಲನೆ – ಡಿಗ್ರಿ ನಂತರದ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಬನ್ನಿ

EducationExpo 1 2

35ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಂಡಿವೆ. ಇಂದು & ನಾಳೆ (ಅ.7 ಮತ್ತು 8) ನಡೆಯಲಿರುವ ಈ ಮೇಳದಲ್ಲಿ, ಡಿಗ್ರಿ ಮುಗಿದ ನಂತರ ಮುಂದೆ ಯಾವ ಕೋರ್ಸ್ ಮಾಡಬೇಕು ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳಿಗೆ ಇಲ್ಲಿ ಉತ್ತರ ದೊರೆಯಲಿದೆ. ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲವೂ ಇಲ್ಲಿ ಪರಿಹಾರವಾಗಲಿದೆ. ವಿದ್ಯಾರ್ಥಿಗಳ ಹಲವಾರು ಗೊಂದಲಗಳಿಗೆ ನಿಮ್ಮ ಪಬ್ಲಿಕ್ ಟಿವಿಯ ವಿದ್ಯಾಮಂದಿರದಲ್ಲಿ ಉತ್ತರ ಸಿಗಲಿದೆ.

Ad6 ಸಹಯೋಗದಲ್ಲಿ ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ ಎರಡನೇ ಅವೃತ್ತಿಯ `ವಿದ್ಯಾಮಂದಿರ’ ಶೈಕ್ಷಣಿಕ ಮೇಳ ಮಲ್ಲೇಶ್ವರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಈಗಾಗಲೇ ಆರಂಭಗೊಂಡಿರುವ ಕಾರ್ಯಕ್ರಮ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ನಾಳೆ ಸಹ ಮುಂದುವರೆಯಲಿದ್ದು, ಬೆ.9:30 ರಿಂದ ಸಂಜೆ 6ರ ವರೆಗೆ ಇರಲಿದೆ.

EducationExpo 1 3

ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‍ಗಳು, ದಾಖಲಾತಿ, ವಿದ್ಯಾರ್ಥಿವೇತನದ ಬಗ್ಗೆ ನಿಮಗೆ ಇಲ್ಲಿ ಸಮಗ್ರ ಮಾಹಿತಿ ಒದಗಿಸಲಿವೆ. ಸಂವಾದ ಕಾರ್ಯಕ್ರಮಗಳು ಸಹ ಇಲ್ಲಿ ಇರಲಿವೆ. ಮೇಳಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿ ಲ್ಯಾಪ್‍ಟಾಪ್, ಮೊಬೈಲ್ ಗೆಲ್ಲಿ
ಈ ಮೇಳದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಸರ್‍ಪ್ರೈಸ್ ಗಿಫ್ಟ್ ಸಹ ಸಿಗಲಿದೆ. ಇದನ್ನೂ ಓದಿ: ಪ್ರಾಣಿ ಕಡಿತಕ್ಕೆ ಒಳಗಾದವರಿಗೆ ಉಚಿತ ಚಿಕಿತ್ಸೆ ನೀಡಿ: ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ

Web Stories

Share This Article