– ಶನಿವಾರ, ಭಾನುವಾರ ನಡೆಯಲಿದೆ ಕಾರ್ಯಕ್ರಮ
– ವಿದ್ಯಾರ್ಥಿಗಳಿಗೆ, ಪೋಷಕರಿಗೆ ಉಚಿತ ಪ್ರವೇಶ
ಬೆಂಗಳೂರು: ಡಿಗ್ರಿ ಮುಗಿದ ಬಳಿಕ ಬಹುತೇಕ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ (Post Graduation) ಓದುವುದು ಈಗಿನ ಹೊಸ ಟ್ರೆಂಡ್. ಸ್ನಾತಕೋತ್ತರ ಪದವಿಗೆ ಸೇರುವ ಸಂದರ್ಭದಲ್ಲಿ ಯಾವ ಕಾಲೇಜಿನಲ್ಲಿ (College) ಯಾವ ಕೋರ್ಸ್ ಇದೆ? ಶುಲ್ಕ ಎಷ್ಟಿದೆ? ಹಾಸ್ಟೆಲ್ ಸೌಲಭ್ಯ ಹೇಗೆ? ಇತ್ಯಾದಿ ಪ್ರಶ್ನೆಗಳು ಮಕ್ಕಳಿಗೆ ಮತ್ತು ಪೋಷಕರಿಗೆ ಬರುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ನೀವು ಪಬ್ಲಿಕ್ ಟಿವಿ (PUBLiC TV) ಆಯೋಜಿಸುತ್ತಿರುವ ವಿದ್ಯಾಮಂದಿರಕ್ಕೆ (VidhyaMandira) ಆಗಮಿಸಿ ಸುಲಭವಾಗಿ ಉತ್ತರವನ್ನು ಪಡೆಯಬಹುದು.
Advertisement
ಪ್ರಬ್ಲಿಕ್ ಟಿವಿ ಪ್ರಸ್ತುತ ಪಡಿಸುವ Ad6 ಸಹಯೋಗದಲ್ಲಿ ಶನಿವಾರ ಮತ್ತು ಭಾನುವಾರ ಎರಡನೇ ಅವೃತ್ತಿಯ ʼವಿದ್ಯಾಮಂದಿರʼ ಶೈಕ್ಷಣಿಕ ಮೇಳ ಮಲ್ಲೇಶ್ವರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ. ಬೆಳಗ್ಗೆ 9:30 ರಿಂದ ಆರಂಭಗೊಂಡು ಸಂಜೆ 6 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸದ ಬಗ್ಗೆ ಇರುವ ಗೊಂದಲಗಳಿಗೆ ಈ ವೇದಿಕೆ ಉತ್ತರ ನೀಡಲಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಬಿತ್ತು 500 ರೂ. ದಂಡ!
Advertisement
Advertisement
ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ. ಶೈಕ್ಷಣಿಕ ಮೇಳದಲ್ಲಿ ರಾಜ್ಯದ ನಾನಾ ಭಾಗಗಳ 36+ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಭಾಗಿಯಾಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಅವಕಾಶ ಇದೆ.
Advertisement
ಲ್ಯಾಪ್‌ಟಾಪ್, ಮೊಬೈಲ್ ಬಹುಮಾನ ಗೆಲ್ಲಿ:
ಈ ಮೇಳದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಸರ್‌ಪ್ರೈಸ್ ಗಿಫ್ಟ್ ಸಹ ಸಿಗಲಿದೆ.
ವಿದ್ಯಾಮಂದಿರದ ಪ್ಲಾಟಿನಂ ಪ್ರಾಯೋಜಕರು
ರೇವಾ ಯುನಿವರ್ಸಿಟಿ, ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಮಯ್ಯ ಯುನಿವರ್ಸಿಟಿ, ನಾಗಾರ್ಜುನ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್
ಗೋಲ್ಡ್ ಪ್ರಾಯೋಜಕರು:
ಈಸ್ಟ್ ಗ್ರೂಪ್ ಆಫ್ ಪಾಯಿಂಟ್ ಇನ್‌ಸ್ಟಿಟ್ಯೂಷನ್ಸ್, ಸಿಎಂಆರ್ ಯುನಿವರ್ಸಿಟಿ, ಆರ್‌ವಿ ಯುನಿವರ್ಸಿಟಿ, ಏಮ್ಸ್ ಇನ್‌ಸ್ಟಿಟ್ಯೂಷನ್ಸ್, ಚಾಣಕ್ಯ ವಿಶ್ವವಿದ್ಯಾಲಯ, ಪಾರುಲ್ ಯುನಿವರ್ಸಿಟಿ, SEA ಸಮೂಹ ಸಂಸ್ಥೆಗಳು,
ಸಿಲ್ವರ್ ಪ್ರಾಯೋಜಕರು
ರಾಮಯ್ಯ ಆಫೀಸರ್ಸ್ ಐಎಎಸ್ ಅಕಾಡೆಮಿ, ಆಕ್ಸ್‌ಫರ್ಡ್ ಎಜುಕೇಶನ್ ಇನ್‌ಸ್ಟಿಟ್ಯೂಷನ್ಸ್, ಪಿಇಎಸ್ ವಿಶ್ವವಿದ್ಯಾಲಯ, ರಾಜರಾಜೇಶ್ವರಿ ಕಾಲೇಜ್ ಆಫ್ ಎಂಜಿನಿಯರಿಂಗ್, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಶ್ರೀನಿವಾಸ ವಿಶ್ವವಿದ್ಯಾನಿಲಯ, ಯೂನಿವರ್ಸಿಟಿ ಹಬ್, ಹರ್ಷಾ ಇನ್‌ಸ್ಟಿಟ್ಯೂಷನ್ಸ್, ಸೌಂದರ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಪ್ರೆಸಿಡೆನ್ಸಿ ಯೂನಿವರ್ಸಿಟಿ
ವಿಶೇಷ ಪೆವಿಲಿಯನ್: ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್,
ಕ್ರಿಯೇಟಿವ್ ಸ್ಟಾಲ್ : ಆರ್‌ಆರ್ ಇನ್‌ಸ್ಟಿಟ್ಯೂಷನ್ಸ್,
ಗಿಫ್ಟ್ ಪ್ರಾಯೋಜಕರು : ಜೀನಿ ಮಿಲ್ಲೆಟ್
ಪಾನೀಯ ಪ್ರಾಯೋಜಕರು: ನಂದಿನಿ, ಬಾಯರ್ಸ್ ಕಾಫಿ
Web Stories