ಬೆಂಗಳೂರು: ಪದವಿ ಮುಗಿದ ನಂತರ ಯಾವ ಕಾಲೇಜಿನಲ್ಲಿ (College) ಯಾವ ಕೋರ್ಸ್ ಇದೆ? ಈ ಕೋರ್ಸ್‍ಗಳಿಗೆ ಎಷ್ಟು ಶುಲ್ಕ ಇರುತ್ತದೆ? ಈ ಕಾಲೇಜುಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಇದ್ಯಾ? ಈ ರೀತಿಯ ಪ್ರಶ್ನೆಗಳು ಪೋಷಕರಿಗೆ, ವಿದ್ಯಾರ್ಥಿಗಳಿಗೆ (Student) ಬರುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಪಬ್ಲಿಕ್ ಟಿವಿಯ (Public TV) ‘ವಿದ್ಯಾ ಮಂದಿರ 2022’ದಲ್ಲಿ (Vidya Mandira) ಸುಲಭವಾಗಿ ಉತ್ತರ ಸಿಗಲಿದೆ.
ಪಬ್ಲಿಕ್ ಟಿವಿ ಎರಡು ದಿನ `ವಿದ್ಯಾಮಂದಿರ 2022’ದ ಹೆಸರಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವವನ್ನು ಆಯೋಜಿಸಿದೆ. ಈ ಹಿಂದೆ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ವಿದ್ಯಾಪೀಠ’ಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ಸಿಕ್ಕಿತ್ತು. ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಪದವಿ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ (Bengaluru) ಮಲ್ಲೇಶ್ವರಂನ (Malleshwaram) ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನ.12, 13 ರಂದು ವಿದ್ಯಾ ಮಂದಿರ ನಡೆಯುಲಿದೆ.
Advertisement
Advertisement
ಒಂದೇ ಸೂರಿನಡಿ ಸ್ನಾತಕೋತ್ತರ ಪದವಿ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‍ಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಈ ಬಾರಿಯ ವಿದ್ಯಾಮಂದಿರ 2022 ಕಾರ್ಯಕ್ರಮದಲ್ಲಿ 36ಕ್ಕೂ ಅಧಿಕ ಸಂಸ್ಥೆಗಳು ಭಾಗವಹಿಸುತ್ತಿವೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿ ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯಮಿಕ ಕೋರ್ಸ್‍ಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನೂ ಓದಿ: ಈಗಿನ ಶಿಕ್ಷಣದ ಹೊಸ ಟ್ರೆಂಡ್ ಏನು? – ಪಬ್ಲಿಕ್ ಟಿವಿ ‘ವಿದ್ಯಾ ಮಂದಿರ’ಕ್ಕೆ ಬನ್ನಿ ಮಾಹಿತಿ ಪಡೆಯಿರಿ
Advertisement
ದಿನಾಂಕ: ನವೆಂಬರ್ 12 ಮತ್ತು 13
ಸ್ಥಳ: ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ, ಮಲ್ಲೇಶ್ವರಂ, ಬೆಂಗಳೂರು
ಸಮಯ: ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ
Advertisement
ಯಾರೆಲ್ಲ ಆಗಮಿಸಬಹುದು?:
ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ಉದ್ಯೋಗಿಗಳು.
ಪ್ಲಾಟಿನಂ ಪ್ರಾಯೋಜಕರು:
ರೇವಾ ಯುನಿವರ್ಸಿಟಿ, ಬಿಜಿಎಸ್ & ಎಸ್‍ಜೆಬಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಗಾರ್ಡನ್ ಸಿಟಿ ಯುನಿವರ್ಸಿಟಿ, ರಾಮಯ್ಯ ಯುನಿವರ್ಸಿಟಿ
ಗೋಲ್ಡ್ ಪ್ರಾಯೋಜಕರು:
ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್, ಎಮ್ಸ್ ಇನ್‍ಸ್ಟಿಟ್ಯೂಷನ್, ಕೇಂಬ್ರಿಡ್ಜ್ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ಸಿ ಗ್ರೂಪ್ ಇನ್‍ಸ್ಟಿಟ್ಯೂಷನ್
ಸಿಲ್ವರ್ ಪ್ರಾಯೋಜಕರು:
ಕೆಎಲ್‍ಇ ಟೆಕ್ನಾಲಜಿಕಲ್ ಯುನಿವರ್ಸಿಟಿ, ಆರ್ ಆರ್ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ರಾಮಯ್ಯ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಇಂಡಿಯನ್ ಅಕಾಡಮಿ ಆಫ್ ಇನ್‍ಸ್ಟಿಟ್ಯೂಷನ್, ರಾಮಯ್ಯ ಇನ್‍ಸ್ಟಿಟ್ಯೂಷನ್ ಆಫ್ ಮೆನೆಜ್‍ಮೆಂಟ್, ಸಿಎಂಆರ್ ಯುನಿವರ್ಸಿಟಿ, ಆಚಾರ್ಯ ಬೆಂಗಳೂರು ಬ್ಯುಸಿನೆಸ್ ಯುನಿವರ್ಸಿಟಿ
ಸ್ಪೆಷಲ್ ಪೆವಿಲಿಯನ್:
ರಾಮಯ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್
ಕ್ರಿಯೇಟಿವ್ ಸ್ಟಾಲ್:
ಆರ್ ಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ