Bengaluru CityKarnatakaLatestLeading NewsMain Post

ಪಬ್ಲಿಕ್ ಟಿವಿ ವಿದ್ಯಾಮಂದಿರ ಪಿಜಿ ಎಜುಕೇಶನ್ ಎಕ್ಸ್‌ಪೋಗೆ ಚಾಲನೆ

ಬೆಂಗಳೂರು: ಪಬ್ಲಿಕ್ ಟಿವಿ (Public TV) ಪ್ರಸ್ತುತಪಡಿಸುವ ವಿದ್ಯಾಮಂದಿರ (Vidhya Mandira) 2022 ಮೆಗಾ ಪಿಜಿ ಎಜುಕೇಶನ್ ಎಕ್ಸ್‌ಪೋಗೆ (Education Expo) ಇಂದು ಬೆಂಗಳೂರಿನ (Bengaluru) ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಚಾಲನೆ ಸಿಕ್ಕಿದೆ.

ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Dr. Ashwathnarayan) ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್, ಜಿಎಸ್ ಸಂಸ್ಥೆ ಎಂಡಿ ಪ್ರಕಾಶನಾಥ ಸ್ವಾಮೀಜಿ, ಪ್ರೋ ವಿಸಿ ವಿದ್ಯಾಶಂಕರ ಶೆಟ್ಟಿ, ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಡಿಕೆ ಮೋಹನ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಮೋದಿ ಎಲೆಕ್ಷನ್ ಗೇಮ್- ಪ್ರಬಲ ಸಮುದಾಯದ ಮೇಲೂ ಹೈಕಮಾಂಡ್ ಕಣ್ಣು

ಇಂದಿನಿಂದ ಎರಡು ದಿನಗಳ ಕಾಲ ವಿದ್ಯಾಮಂದಿರ 2022 ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವ ನಡೆಯಲಿದೆ. ಈ ಹಿಂದೆ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ `ವಿದ್ಯಾಪೀಠ’ಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ಸಿಕ್ಕಿತ್ತು. ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಮೇಳ ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇಂದು ಮತ್ತು ನಾಳೆ ವಿದ್ಯಾ ಮಂದಿರ ನಡೆಯಲಿದೆ. ಇದನ್ನೂ ಓದಿ: ಇಂದಿನಿಂದ 2 ದಿನ `ಪಬ್ಲಿಕ್ ಎಜುಕೇಷನ್ ಎಕ್ಸ್‌ಪೋ’- ಸ್ನಾತಕೋತ್ತರ ಪದವಿ ಶೈಕ್ಷಣಿಕ ಮೇಳಕ್ಕೆ ಬನ್ನಿ, ಭಾಗವಹಿಸಿ

ಶನಿವಾರ ಮತ್ತು ಭಾನುವಾರ ನಡೆಯಲಿರುವ ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ 36ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಭಾಗವಹಿಸುತ್ತಿವೆ. ಡಿಗ್ರಿ ನಂತ್ರ ಏನ್ ಮಾಡಬೇಕು, ಯಾವ ಕೋರ್ಸ್, ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬಹುದು ಹೀಗೆ ಹಲವು ಅನುಮಾನಗಳಿಗೆ ಪೋಷಕರು, ವಿದ್ಯಾರ್ಥಿಗಳು ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ. ವಿದ್ಯಾಮಂದಿರದಲ್ಲಿ ಹಲವು ವಿಚಾರಗಳ ಬಗ್ಗೆ ವಿಷಯ ತಜ್ಞರಿಂದ ವಿಶೇಷ ಸೆಮಿನಾರ್ ಇರುತ್ತೆ. ಹಾಗೆಯೇ ಶೈಕ್ಷಣಿಕ ಮೇಳಕ್ಕೆ ಬಂದವರಿಗೆ ಆಪ್‍ಕೆ ಇವಿ ಸಂಸ್ಥೆಯ ಎಲೆಕ್ಟ್ರಿಕ್ ಬೈಕ್ ಸೇರಿ ಹಲವು ಬಂಪರ್ ಬಹುಮಾನಗಳು ಇದೆ. ಹೀಗಾಗಿ ತಪ್ಪದೇ ವಿದ್ಯಾಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ. ಬಹುಮಾನ ಗೆಲ್ಲಿ. ವಿದ್ಯಾಮಂದಿರವನ್ನು ಸದುಪಯೋಗಪಡಿಸಿಕೊಳ್ಳಿ.

Live Tv

Leave a Reply

Your email address will not be published. Required fields are marked *

Back to top button