ಬೆಂಗಳೂರು: ನಾನು ಸ್ನಾತಕೋತ್ತರ ಪದವಿ ಪಡೆದಿಲ್ಲ. ಅಂದಿನ ಸ್ಥಿತಿಯಲ್ಲಿ ನನಗೆ ಪಿಜಿ ಮಾಡಲು ಆಗಲೇ ಇಲ್ಲ. ಇದಕ್ಕೆ ಹಲವಾರು ಕಾರಣಗಳಿವೆ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್. ಆರ್ ರಂಗನಾಥ್ ಹೇಳಿದರು.
Advertisement
ಇಂದು ಪಬ್ಲಿಕ್ ಟಿವಿ ಪ್ರಸ್ತುತ ಪಡೆಸುತ್ತಿರುವ ವಿದ್ಯಾಮಂದಿರ ಎಜುಕೇಶನ್ ಎಕ್ಸ್ ಪೋ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಕಾಲದ ಶಿಕ್ಷಣಕ್ಕೂ ಈಗನ ಶಿಕ್ಷಣಕ್ಕೂ ಇರುವ ವ್ಯತ್ಯಾಸಗಳನ್ನು ವಿವರಿಸಿದರು. ನಾನು ಡಿಗ್ರಿಯಲ್ಲಿ ಫೈನಲ್ ಇಯರ್ ಪರೀಕ್ಷೆ ಬರೆಯುವ ಮೊದಲೇ ನನಗೆ ಕೆಲಸ ಕೊಟ್ಟರು. ಬಮದು ಕೆಲಸ ಮಾಡಿ ಪರೀಕ್ಷೆಗೆ ರಜೆ ತೆಗೆದುಕೊಂಡು ಹೋಗಿ ಡಿಗ್ರಿ ಪರೀಕ್ಷೆ ಬರೆದು ಬಂದೆ. ಹೀಗಾಗಿ ಆಗ ನಾನು ಸ್ನಾತಕೋತ್ತರ ಪದವಿ ಪಡೆದಿದ್ದರೆ ಚೆನ್ನಾಗಿತ್ತು ಅಂತ ಅನಿಸಿತ್ತು. ಆದರೆ ಈಗ ಕಾಲ ಮುಗಿದಿದೆ. ಈವಾಗಲೂ ನಾನು ಅದನ್ನು ಮಾಡಬಲ್ಲೆ. ಪತ್ರಿಕೋದ್ಯಮದಲ್ಲಿಯೇ ಯಾವುದಾದರೂ ಒಂದು ಒಳ್ಳೆಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಅನಿಸ್ತಿದೆ. ಆದರೆ ಅಲ್ಲಿ ನಾನು ಅಲ್ಲಿ ತುಂಬಾ ತಂದರೆ ಕೊಡುವ ವಿದ್ಯಾರ್ಥಿ ಆಗಬಹುದು. ಇದು ತುಂಬಾ ಕಷ್ಟವಾಗಬಹುದೆಂದು ನಕ್ಕರು.
Advertisement
Advertisement
ಬಹಳ ಹಿಂದೆ ಪೊಲೀಸ್ ಆಗೋಕೆ 8ನೇ ಕ್ಲಾಸ್ ಆದವರು ಸಾಕು ಎಂಬ ಜಾಹೀರಾತು ಬರುತ್ತಿತ್ತು. ಆದರೆ ಇಂದು ಪೊಲೀಸ್ ಕಾನ್ಸ್ ಟೇಬಲ್‍ಗೆ 60 ಪರ್ಸೆಂಟ್ ಪದವಿ ಪಡೆದವರು, 20-21 ಪರ್ಸೆಂಟ್ ಪಿಜಿ ಮಾಡಿವರು ಅಪ್ಲೈ ಮಾಡುತ್ತಿದ್ದಾರೆ. ಈ ಮೂಲಕ ಉದ್ಯೋಗಕ್ಕೆ ಬೇಕಾದ ತಯಾರಿ ಇಲ್ಲದ ಶಿಕ್ಷಣ ಸಿಗುತ್ತಿದೆ ಅಂತ ಉದ್ಯೋಗ ಬೇಕು ಅಂದ್ರೆ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಕೆಲವೊಂದು ಉದ್ಯೋಗಗಳಿಗೆ ಪಿಜಿ ಮುಗಿಸಿರಲೇಬೇಕು ಎಂಬಂತಾಗಿದೆ. ಹೀಗಾಗಿ ಡಿಗ್ರಿ ಮಾಡದವರಿಗೆ ಮುಂದೊಂದು ದಿನ ಕೆಲಸ ಸಿಗುವುದು ಕೂಡ ಕಷ್ಟವಾಗಬಹುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್
Advertisement
ಪಿಜಿ ಹಾಗೂ ರಿಸರ್ಚ್ ಶಿಕ್ಷಣದಲ್ಲಿ ಕರ್ನಾಟಕ ಈಗ ಒಂದು ಹೆಜ್ಜೆ ಮುಂದೆಯೇ ಇದೆ ಎಂದನಿಸುತ್ತದೆ. ನಮ್ಮ ಶಿಕ್ಷಣ ಸಂಸ್ಥೆಗಳು ಕೂಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿವೆ. ಹೀಗಾಗಿ ಮುಂದೆ ಈ ಶಿಕ್ಷಣಕ್ಕೆ ಸಹಾಯ ಆಗಬಹುದೆಂಬ ನಿಟ್ಟಿನಲ್ಲಿ ಎರಡು ದಿನಗಳ ಈ ಎಕ್ಸ್ ಪೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಶಿಕ್ಷಣ ಸಚಿವರಾಗಿರುವ ಅಶ್ವಥ್ ನಾರಾಯಣ್ ಕೂಡ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ಮೂಲಕ ಹೆಚ್ಚಿನ ಕೊಡುಗೆಗಳನ್ನು ಕೊಡುತ್ತಿದ್ದಾರೆ.
ಎರಡು ದಿನವಿರಲಿದೆ ವಿದ್ಯಮಂದಿರ: ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ 36ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಭಾಗವಹಿಸುತ್ತಿವೆ. ಡಿಗ್ರಿ ನಂತ್ರ ಏನ್ ಮಾಡಬೇಕು, ಯಾವ ಕೋರ್ಸ್, ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬಹುದು.. ಹೀಗೆ ಹಲವು ಅನುಮಾನಗಳಿಗೆ ಪೋಷಕರು, ವಿದ್ಯಾರ್ಥಿಗಳು ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ. ವಿದ್ಯಾಮಂದಿರದಲ್ಲಿ ಹಲವು ವಿಚಾರಗಳ ಬಗ್ಗೆ ವಿಷಯ ತಜ್ಞರಿಂದ ವಿಶೇಷ ಸೆಮಿನಾರ್ ಇರುತ್ತೆ. ಹಾಗೇ, ಶೈಕ್ಷಣಿಕ ಮೇಳಕ್ಕೆ ಬಂದವರಿಗೆ ಆಪ್‍ಕೆ ಇವಿ ಸಂಸ್ಥೆಯ ಎಲೆಕ್ಟ್ರಿಕ್ ಬೈಕ್ ಸೇರಿ ಹಲವು ಬಂಪರ್ ಬಹುಮಾನಗಳು ಇದೆ. ಹೀಗಾಗಿ ತಪ್ಪದೇ ವಿದ್ಯಾಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.. ಬಹುಮಾನ ಗೆಲ್ಲಿ.. ವಿದ್ಯಾಮಂದಿರವನ್ನ ಸದುಪಯೋಗಪಡಿಸಿಕೊಳ್ಳಿ.