ಬಿಜೆಪಿ ಪಾಳಯಕ್ಕೆ ಸಿದ್ದು ಟಾರ್ಗೆಟ್- ಚಕ್ರವ್ಯೂಹ ರೂಪಿಸುವಂತೆ ಹೈಕಮಾಂಡ್‍ನಿಂದಲೇ ಸಂದೇಶ?

ಬೆಂಗಳೂರು: ಒಂದೆಡೆ ಕೆಪಿಸಿಸಿ ಅಧ್ಯಕ್ಷ (KPCC President) ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಟಾರ್ಗೆಟ್ ಮಾಡ್ತಿದ್ರೆ ಮತ್ತೊಂದೆಡೆ ಸಿದ್ದರಾಮಯ್ಯ ಟಾರ್ಗೆಟ್ ಆಗಿದ್ದಾರೆ. ಎರಡು ಅಸ್ತ್ರ, ಎರಡು ರಿಸಲ್ಟ್, ಬಿಜೆಪಿ (Bharatiya Janata Party) ನಡೆ ಕುತೂಹಲ ಮೂಡಿಸಿದೆ.
ಇಬ್ಬರ ಮೇಲೆ ಪ್ರತ್ಯೇಕ ಚಕ್ರವ್ಯೂಹ ರೂಪಿಸಿದ್ದು ಹೈಕಮಾಂಡ್‍ನಿಂದಲೇ ಸಂದೇಶ ರವಾನೆ ಆಯ್ತಾ ಅನ್ನೋ ಪ್ರಶ್ನೆ ಎದ್ದಿದೆ. ಒಂದೆಡೆ ರಮೇಶ್ ಜಾರಕಿಹೊಳಿ (Ramesh Jarakiholi) ಯಿಂದ 2023ರ ಇಡೀ ಪ್ರಚಾರದಲ್ಲಿ ಡಿಕೆಶಿ ಪರ್ಸನಲ್ ಆಟ್ಯಾಕ್ ಆಗ್ತಿದೆ. ಇನ್ನೊಂದು ಕಡೆ ಸಿದ್ದರಾಮಯ್ಯ ವಿರುದ್ಧ ಹಳೇ ಶಿಷ್ಯರಿಂದಲೇ ದಾಳಿ ತಂತ್ರ ನಡೀತಿದೆ. ಇದನ್ನೂ ಓದಿ: ಬೆಳಗಾವಿ ಬಿಜೆಪಿಯಲ್ಲಿ ಬಣ ಸಂಘರ್ಷ – ಕಚ್ಚಾಟಕ್ಕೆ ತೆರೆ ಎಳೆಯಲು ಅಮಿತ್ ಶಾ ಸೂತ್ರ
ಸಿದ್ದರಾಮಯ್ಯ (Siddaramaiah) ಮೇಲೆ ಚಾರ್ಜ್ ಫ್ರೇಮ್ ಆಗ್ತಿಲ್ಲ, ಎಲೆಕ್ಷನ್ ಅಟ್ಯಾಕ್ ಕಠಿಣವಾಗಿರಬೇಕು. ಹಳೆಯ ಆರೋಪಗಳ ಬಗ್ಗೆ ಕಾಂಗ್ರೆಸ್ (Congress) ತಲೆ ಕೆಡಿಸಿಕೊಳ್ಳುವಂತೆ ಮಾಡಿ, ಹಳೆಯದನ್ನ ಕೆದಕಿ. ಹೀಗಂತ ಬಿಜೆಪಿ ಹೈಕಮಾಂಡ್‍ನಿಂದ ಸಂದೇಶ ರವಾನೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸಿದ್ದರಾಮಯ್ಯ ಟಾರ್ಗೆಟ್ ಮಾಡಲು ಹಳೇ ಶಿಷ್ಯ ಸುಧಾಕರ್ (Dr. K Sudhakar) ಫಿಕ್ಸ್ ಮಾಡಲಾಗಿದೆಯಂತೆ. ಸುಧಾಕರ್ ಅಸ್ತ್ರಕ್ಕೆ ಸಿದ್ದರಾಮಯ್ಯ ತಲೆಕೆಡಿಸಿಕೊಂಡಿದ್ದು ಕಿಡಿಕಾರುತ್ತಿದ್ದಾರೆ.
ಮೂಲ ಬಿಜೆಪಿ ಸಚಿವರು ಸೈಲೆಂಟ್: ಚುನಾವಣಾ ಅಖಾಡದಲ್ಲಿ ಒಬ್ಬೊಬ್ಬರು ಒಂದೊಂದು ತಂತ್ರ ರೂಪ್ತಿಸ್ತಿದ್ದಾರೆ. ಆದರೆ ಮೂಲ ಬಿಜೆಪಿ ಸಚಿವರು ಮಾತ್ರ ಫುಲ್ ಸೈಲೆಂಟ್ ಆಗಿದ್ದಾರೆ. ಸಂಘಟನೆಯಲ್ಲೂ ಸದ್ದಿಲ್ಲ, ರಾಜಕೀಯ ಗುದ್ದಾಟದಲ್ಲೂ ಮುಂದಿಲ್ಲ. ವಲಸಿಗರಿಂದಲೇ ಸಿದ್ದು, ಡಿಕೆಶಿ ಮೇಲೆ ಬ್ರಹ್ಮಾಸ್ತ್ರ. ನಿತ್ಯ ಅವರದ್ದೇ ಕಾದಾಟ ನಡೆಯುತ್ತಿದೆ. ಮೂಲ ಬಿಜೆಪಿ ಸಚಿವರು ಸೈಲೆಂಟ್ ಆಗಿದ್ದು, ಎಲ್ಲಿಯೂ ಆಗ್ರೆಸೀಟ್ ಆಟ್ಯಾಕ್ ಇಲ್ಲ. ಮಾಧುಸ್ವಾಮಿ ಹೇಳಿದ್ದ ವಲಸಿಗರೇ ಮುಂಚೂಣಿ ಎಂಬ ಮಾತು ಪಕ್ಷದಲ್ಲಿ ಚರ್ಚೆ ಆಗ್ತಿದ್ಯಾ? ಸರ್ಕಾರದ ವಿರುದ್ಧ ತಿರುಗಿಬಿದ್ದಾಗಲೂ ಮೂಲ ಬಿಜೆಪಿ ಸಚಿವರು ದಂಡಾಗಿ ಮುಗಿಬೀಳಲ್ಲ. ಇದನ್ನೂ ಓದಿ: ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧಿಸುವ ಅನಿವಾರ್ಯತೆಯಿಲ್ಲ: ಹೆಚ್‌ಡಿಕೆ
ಸಾಂದರ್ಭಿಕ ಚಿತ್ರ
ಪಕ್ಷದ ಬಗ್ಗೆ, ಆರ್ ಎಸ್‍ಎಸ್ (RSS) ಬಗ್ಗೆ ಮಾತನಾಡಿದಾಗಲೂ ಪೊಲಿಟಿಕಲ್ ಆಟ್ಯಾಕ್ ಮಾಡಲ್ಲ. ಬಹಳಷ್ಟು ಸಚಿವರು ಸರ್ಕಾರವನ್ನೂ ಸಮರ್ಥಿಸಲ್ಲ, ಪಕ್ಷವನ್ನೂ ಸಮರ್ಥಿಸಲ್ಲ ಎಂಬ ಆರೋಪವಿದೆ. ಪಕ್ಷದ ವೇದಿಕೆಯಲ್ಲೇ ಕೆಲ ಸಚಿವರ ನಡವಳಿಕೆಯ ವಿರುದ್ಧ ಅಸಮಾಧಾನ ವ್ಯಕ್ತವಾಗ್ತಿದೆಯಂತೆ. ವಾರ್ ಫೀಲ್ಡ್ ಸಮಯದಲ್ಲಿ ಸಪ್ಪೆಯಾದ್ರೆ ಪಕ್ಷಕ್ಕೆ ಡ್ಯಾಮೇಜ್ ಎಂಬುದು ಆಂತರಿಕ ಆಕ್ರೋಶಕ್ಕೆ ಕಾರಣವಾಗಿದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k