ಮಂಡ್ಯ: ಮಾಜಿ ಸಂಸದ ಶಿವರಾಮೇಗೌಡ (Shivarame Gowda) ಜೆಡಿಎಸ್ ನಿಂದ ಉಚ್ಛಾಟಣೆಗೊಂಡ ಬಳಿಕ ಪಕ್ಷೇತರವಾಗಿ ಚುನಾವಣೆ ನಿಲ್ಲೋದಕ್ಕೆ ತಯಾರಿ ಆಗುತ್ತಿದ್ದಾರೆ. ಈ ನಡುವೆ ಡಿಕೆಶಿ ಮನೆಯಲ್ಲಿ ಶಿವರಾಮೇಗೌಡ ಕಾಣಿಸಿಕೊಂಡಿರೋದು ಮಂಡ್ಯ (Mandya) ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ನಾಗಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ (Congress Ticket) ಅವರಿಗೆ ಎಂಬ ಚರ್ಚೆ ನಡೆಯುತ್ತಿದ್ದು, ಇಂದು ಬೃಹತ್ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.
Advertisement
ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲೆಕ್ಷನ್ ಗೆ ನಾಲ್ಕು ತಿಂಗಳು ಬಾಕಿ ಇರುವಾಗಲೇ ನಾಗಮಂಗಲ ಕ್ಷೇತ್ರ (Nagamangala Constituency) ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಜೆಡಿಎಸ್ ನಿಂದ ಉಚ್ಛಾಟಣೆಗೊಂಡ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ಲಾನ್ ಮಾಡಿದ್ದ ಶಿವರಾಮೇಗೌಡ, ಸ್ವಾಭಿಮಾನದ ಹೆಸರೇಳಿಕೊಂಡು ಮತ ಭಿಕ್ಷೆ ಕೇಳುವ ಮೂಲಕ ಸುಮಲತಾ ಹಾದಿ ಹಿಡಿದಿದ್ರು. ಇದೀಗ ಅವರಿಗೆ ಕಾಂಗ್ರೆಸ್ ನಿಂದಲೇ ಆಫರ್ ಬಂದಿದೆ ಎನ್ನಲಾಗಿದ್ದು, ಇಂದು ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.
Advertisement
Advertisement
ನಾಗಮಂಗಲದಲ್ಲಿ ಜೆಡಿಎಸ್ (JDS) ಮಣಿಸಲು ಶಿವರಾಮೇಗೌಡ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ ಒಂದಾಗಬೇಕು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ ಎನ್ನಲಾಗಿದೆ. ಶಿವರಾಮೇಗೌಡರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ನಾಗಮಂಗಲದಿಂದ ಟಿಕೆಟ್ ನೀಡಿ, ಚಲುವರಾಯಸ್ವಾಮಿಗೆ ಮಂಡ್ಯದಿಂದ ಕಣಕ್ಕೆ ಇಳಿಸಲು ಡಿಕೆಶಿ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೊನ್ನೆ ಶಿವರಾಮೇಗೌಡರನ್ನ ತಮ್ಮ ಮನೆಗೆ ಕರೆಸಿಕೊಂಡು ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವರಾಮೇಗೌಡ, ನಾನು ಡಿ.ಕೆ.ಶಿವಕುಮಾರ್ (DK Shivakumar) ಸಂಬಂಧಿಕರು. ನಾನು ಅವರು ಮನೆಗೆ ಯಾವಾಗ ಬೇಕಾದ್ರೂ ಹೋಗುತ್ತೇನೆ, ಅವರು ನಮ್ಮನೆಗೆ ಯಾವಾಗ ಬೇಕಾದ್ರೂ ಬರ್ತಾರೆ. ರಾಜಕೀಯವಾಗಿ ಚರ್ಚೆ ನಡೆದಿಲ್ಲ. ಒಂದೊಮ್ಮೆ ಟಿಕೆಟ್ ನೀಡಿದ್ರೆ ಜನರ ಅಭಿಪ್ರಾಯ ಸಂಗ್ರಹಿಸಿ ಸ್ಪರ್ಧೆ ಮಾಡ್ತೀನಿ ಅಂತ ಹೇಳಿದ್ದಾರೆ.
Advertisement
ಭಾನುವಾರ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪದಲ್ಲಿ ಹೋಬಳಿ ಮಟ್ಟದ ಬೆಂಬಲಿಗರ ಸಭೆ ನಡೆಸಿದ್ರು. ಸ್ವಾಭಿಮಾನಿ ಪರ್ವ ಹೆಸರಿನಲ್ಲಿ ನಡೆದ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ತಾವು ಯಾವ ಪಕ್ಷದ ಅಭ್ಯರ್ಥಿಗಳಿಗೂ ಕಡಿಮೆ ಇಲ್ಲ, ತನಗೆ ವೈಯಕ್ತಿಕ ವರ್ಚಸ್ಸಿದೆ ಎಂಬುದನ್ನ ತೋರಿಸಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಟಿಕೆಟ್ ಸಿಗದಿದ್ರೂ ಸುಮಲತಾ ಮಾದರಿಯಲ್ಲೇ ಸ್ವಾಭಿಮಾನದ ಹೆಸರಿನಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡೋದು ಖಚಿತ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ನಾಗಮಂಗಲ ಕ್ಷೇತ್ರ ಈಗಾಗಲೇ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಜೆಡಿಎಸ್ ಸೋಲಿಸೇಕೆಂಬ ಪಣ ತೊಟ್ಟಿರುವ ಶಿವರಾಮೇಗೌಡ ಕಾಂಗ್ರೆಸ್ ಸೇರುತ್ತಾರಾ? ಅಥವಾ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹಾದಿಯಲ್ಲಿ ಸ್ವಾಭಿಮಾನದ ಹೆಸರಿನಲ್ಲೇ ಅಖಾಡಕ್ಕೆ ಇಳಿಯುತ್ತಾರಾ ಕಾದು ನೋಡಬೇಕು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k