ಬೆಂಗಳೂರು: ಚುನಾವಣೆ (Election) ಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದ್ದು, ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ.
ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋ (Modi Road Show) ಗೆ ಭರ್ಜರಿ ಪ್ಲಾನ್ ಮಾಡಲಾಗುತ್ತಿದೆ. ಫೆಬ್ರವರಿ 6ರಂದು ಹೆಚ್ಎಎಲ್ (HAL) ಕಾರ್ಯಕ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಮತ್ತೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆ ಕಾರ್ಯಕ್ರಮದ ಆಗಮನದ ವೇಳೆ ಬೆಂಗಳೂರಲ್ಲಿ ರೋಡ್ ಶೋಗೆ ರಾಜ್ಯ ಬಿಜೆಪಿ (Karnataka BJP) ಮನವಿ ಮಾಡಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ
ಹುಬ್ಬಳ್ಳಿ ಮಾಡೆಲ್ನಲ್ಲೇ ಮೂರು ಕ್ಷೇತ್ರಗಳ ಟಾರ್ಗೆಟ್ ಮಾಡಿ ರೋಡ್ ಶೋಗೆ ತಂತ್ರ ರೂಪಿಸಲಾಗಿದೆ. ಮಹದೇವಪುರ, ಕೆ.ಆರ್.ಪುರಂ, ಸಿ.ವಿ.ರಾಮನ್ ನಗರ ಕೇಂದ್ರೀಕರಿಸಿ ರೋಡ್ ಶೋ ರೂಟ್ ಮ್ಯಾಪ್ ಮಾಡಲಾಗಿದೆ. ಈಗಾಗಲೇ ಹುಬ್ಬಳ್ಳಿ ರೋಡ್ ಶೋನಿಂದ ರಾಜ್ಯ ಬಿಜೆಪಿ ನಾಯಕರು ಉತ್ಸುಕವಾಗಿದ್ದಾರೆ. ಒಂದು ಬಾರಿ ಮೋದಿ ರೋಡ್ ಶೋ ನಡೆದ್ರೆ ವಿರೋಧಿ ಅಲೆ ಸೀಳಲು ಸಹಾಯ ಎಂಬ ಲೆಕ್ಕಚಾರ ಕಮಲನಾಯಕರದ್ದಾಗಿದೆ.
ಒಂದೆಡೆ ಬೆಂಗಳೂರು ಟ್ರಾಫಿಕ್ (Traffic) ಪರಿಸ್ಥಿತಿ, ಇನ್ನೊಂದೆಡೆ ಎಲೆಕ್ಷನ್ ಬಿಸಿ, ಬಿಜೆಪಿಯಿಂದ ಬ್ಯಾಲೆನ್ಸ್ ಮಾಡಲು ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಯಾಕಂದ್ರೆ ಮೋದಿ ರೋಡ್ ಶೋ ನಡೆದ್ರೆ ಫೆಬ್ರವರಿ 6ರಂದು ಸೋಮವಾರ ಬೆಂಗಳೂರಿಗೆ ಬಿಸಿ ತಟ್ಟುವ ಸಾಧ್ಯತೆ ಇದೆ. ಆದರೆ ಮೋದಿ ರೋಡ್ ಶೋಗೆ ಪ್ರಧಾನಿ ಕಚೇರಿಯ ಕ್ಲಿಯರೆನ್ಸ್ ಇನ್ನೂ ಸಿಕ್ಕಿಲ್ಲ ಎನ್ನಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k