ಮೈಸೂರು: ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಅಂತಾ ರಕ್ಷಣಾತ್ಮಕ ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ (Siddaramaiah) ತವರೂರಿನ ವರುಣಾ ಕ್ಷೇತ್ರದಲ್ಲಿ ಪಿಚ್ ಸ್ಟಡಿ ಮಾಡೋಕೆ ಖುದ್ದು ಫೀಲ್ಡ್ ಗೆ ಇಳಿದಿದ್ದಾರೆ. ಮಗನ ಜೊತೆಗೂಡಿ ವರುಣಾ ಕ್ಷೇತ್ರ (Varuna Constituency) ದ ಹಳ್ಳಿ ಹಳ್ಳಿಗಳನ್ನು ಸುತ್ತಿದ್ದಾರೆ.
Advertisement
ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲೇ ಸ್ಪರ್ಧಿಸುತ್ತಾರೆ ಎಂಬ ಮಾತು ದಟ್ಟವಾಗಿ ಹಬ್ಬುತ್ತಿರುವ ಬೆನ್ನಲ್ಲೆ ಸಿದ್ದರಾಮಯ್ಯ ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯ ಜೊತೆಗೆ ವರುಣಾ ಕ್ಷೇತ್ರದ ಹಳ್ಳಿ ಹಳ್ಳಿಗಳನ್ನು ಸುತ್ತಿದ್ದಾರೆ. ಎರಡು ದಿನ ಮೈಸೂರು (Mysuru) ಪ್ರವಾಸದಲ್ಲಿರೋ ಅವರು ಎರಡು ದಿನವೂ ವರುಣಾ ಕ್ಷೇತ್ರದಲ್ಲೆ ವಿವಿಧ ಕಾರ್ಯಕ್ರಮ ಇಟ್ಟುಕೊಂಡು ಕಾರ್ಯಕ್ರಮದ ಹೆಸರಿನಲ್ಲಿ ಪಿಚ್ ಸ್ಟಡಿ ಮಾಡುತ್ತಿದ್ದಾರೆ.
Advertisement
Advertisement
ಮೊದಲ ದಿನದ ಪ್ರವಾಸದಲ್ಲಿ ವರುಣಾ ಕ್ಷೇತ್ರದ ತಾಂಡವಪುರ, ಬಸವನಪುರ, ಕೆಂಪಿಸಿದ್ದನಹುಂಡಿ, ಹಿಮ್ಮಾವು, ಬೊಕ್ಕಳಿ, ಹದಿನಾರು ಮೊಳೆ, ಮಲ್ಲರಾಜಯ್ಯನ ಹುಂಡಿ, ಹದಿನಾರು ಹಾಗೂ ಸುತ್ತೂರು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಪ್ರತಿ ಹಳ್ಳಿಯಲ್ಲೂ ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತು ಗ್ರಾಮಸ್ಥರನ್ನು ಮಾತಾಡಿಸಿದ್ದಾರೆ. ಇದನ್ನೂ ಓದಿ: Gujarat Election Result: ಬಿಜೆಪಿ 156, ಕಾಂಗ್ರೆಸ್ 17, ಆಪ್ 5 ಸ್ಥಾನ
Advertisement
ಇಂದು ಕೂಡ ತಮ್ಮ ಹುಟ್ಟೂರು ಸಿದ್ದರಾಮನಹುಂಡಿ ಸೇರಿದಂತೆ ಹಲವು ಗ್ರಾಮಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತಾಡಲಿದ್ದಾರೆ. ಎಲ್ಲಾ ಕಡೆಯೂ ಸಿದ್ದರಾಮಯ್ಯ ಅವರಿಗೆ ಗ್ರಾಮಸ್ಥರು ಇಲ್ಲೆ ಚುನಾವಣೆಗೆ ಸ್ಪರ್ಧಿಸಿ ಎಲ್ಲೂ ಬೇರೆ ಕಡೆ ಹೋಗಬೇಡಿ. ಇವತ್ತೇ ಕ್ಷೇತ್ರ ಘೋಷಣೆ ಮಾಡಿ ಎಂದು ಕೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಹ್ಹೂ ಅನ್ನುತ್ತಿಲ್ಲ. ಹೂಹ್ಹೂ ಅಂತಾ ಕೂಡ ಹೇಳದೆ ಸಸ್ಪೆನ್ಸ್ ಮೆಟೈನ್ ಮಾಡ್ತಿದ್ದಾರೆ. ನಮಗೆ ಬೆಂಬಲಿಸಿ ಅಂತಷ್ಟೆ ಹೇಳುತ್ತಿರುವ ಸಿದ್ದರಾಮಯ್ಯ, ತಾನೇ ನಿಲ್ಲುತ್ತೇನೆ ಮತ ಹಾಕಿ ಅಂತಾ ಹೇಳುತ್ತಿಲ್ಲ.
ಸಿದ್ದರಾಮಯ್ಯ ಅವರು ಅಕ್ಷರಶಃ ಪಿಚ್ ಸ್ಟಡಿ ಮಾಡ್ತಿರೋದಂತೂ ಸತ್ಯ. ಜನರ ಒಲವು ಹೇಗಿದೆ. ಜನ ಇನ್ನೂ ತಮ್ಮ ವಿಚಾರದಲ್ಲಿ ಎಂಥ ಭಾವನೆ ಇಟ್ಟು ಕೊಂಡಿದ್ದಾರೆ ಯಾರೋ ಮಾಡುವ ಸರ್ವೇಗಿಂತಾ ತಾವೇ ನಡೆಸುವ ಸರ್ವೇಯೆ ಉತ್ತಮ ಅನ್ನೋದು ಸಿದ್ದರಾಮಯ್ಯ ಭಾವನೆ ಇದ್ದಂತಿದೆ. ಇದನ್ನೂ ಓದಿ: ಗುಜರಾತ್‍ನಲ್ಲಿ 7ನೇ ಬಾರಿಗೆ ಬಿಜೆಪಿಗೆ ಅಧಿಕಾರ – ಅಧಿಕೃತ ವಿಪಕ್ಷ ಸ್ಥಾನವನ್ನೂ ಕಳೆದುಕೊಂಡ ಕಾಂಗ್ರೆಸ್