ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ (Vidhanasabha Election) ಗೆ ಈಗಿನಿಂದಲೇ ತಯಾರಿಗಳು ಆರಂಭವಾಗಿದ್ದು, ಹಳೇ ಮೈಸೂರಿನಲ್ಲಿ ಜೆಡಿಎಸ್ (JDS) ವರ್ಸಸ್ ಕಾಂಗ್ರೆಸ್ (Congress) ತಿಕ್ಕಾಟ ಶುರುವಾಗಿದೆ. ಜೆಡಿಎಸ್ ಮಣಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ.
Advertisement
ಹೌದು. ನಾಗಮಂಗಲದಲ್ಲಿ ಶಿವರಾಮೇಗೌಡ (Shivarame Gowda) ರನ್ನ ಕಣಕ್ಕಿಳಿಸಲು ಪ್ಲಾನ್ ಮಾಡಲಾಗುತ್ತಿದ್ದು, ಇತ್ತ ಮಂಡ್ಯದಿಂದ ಚಲುವರಾಯಸ್ವಾಮಿ (Chaluvarayaswamy) ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಶಿವರಾಮೇಗೌಡ, ಚಲುವರಾಯಸ್ವಾಮಿ ಒಂದಾದ್ರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಕಾಂಗ್ರೆಸ್‍ನದ್ದಾಗಿದೆ.
Advertisement
Advertisement
ಭಾರತ್ ಜೋಡೋ ಯಾತ್ರೆ (Bharat Jodo Yatre) ಯಿಂದ ಸಿದ್ಧತೆ ತಯಾರಾಗುತ್ತಿದೆ. ಶಿವರಾಮೇಗೌಡ-ಚಲುವರಾಯಸ್ವಾಮಿ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದು ಸ್ಪರ್ಧೆ ಖಚಿತವಾದ ಬೆನ್ನಲ್ಲೇ ದಲಿತ ಸಿಎಂ ಕೂಗು – ಸಿದ್ದು ಸೋಲಿಸಿ, ದಲಿತ CM ಹಾದಿ ಸುಗಮಗೊಳಿಸಿ ಅಭಿಯಾನ
Advertisement
ಡಿಕೆಶಿ (DK Shivakumar) ಜೊತೆ ಶಿವರಾಮೇಗೌಡ ನಡೆಸಿರುವ ಮಾತುಕತೆಯಲ್ಲಿ ಚಲುವರಾಯಸ್ವಾಮಿ ಸೇರಿ ಮಂಡ್ಯ ಕೈ ನಾಯಕರು ಭಾಗಿಯಾಗಿದರು. ಡಿಕೆಶಿ ಭೇಟಿಯ ವೇಳೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಶಿವರಾಮೇಗೌಡ ಜೆಡಿಎಸ್ ಸೋಲಿಸಲು ಮತ್ತೆ ಮರಳಿ ಕಾಂಗ್ರೆಸ್ ಬರಲು ನಿರ್ಧಾರ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇತ್ತ ಚಲುವರಾಯಸ್ವಾಮಿ ಜೆಡಿಎಸ್ ಮಣಿಸಲು ಕ್ಷೇತ್ರ ಬದಲಾವಣೆಯತ್ತ ಮುಂದಾಗುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k