ಬೆಂಗಳೂರು: ಬಹುನಿರೀಕ್ಷಿತ ವಿಧಾನಸೌಧ (Vidhana Soudha) ಗೈಡೆಡ್ ವಾಕಿಂಗ್ ಟೂರ್ (Guided Walking Tour) ಉದ್ಘಾಟನಾ ಕಾರ್ಯಕ್ರಮ ಮೇ 25ರಂದು ನಡೆಯಲಿದ್ದು, ಜೂ. 01ರಿಂದ ಸಾರ್ವಜನಿಕರಿಗೆ ಪ್ರವೇಶ ಆರಂಭವಾಗಲಿದೆ.
ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವಿಧಾನಸೌಧ ಹಾಗೂ ವಿಧಾನಸಭೆಯ ಸಭಾಂಗಣದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡುವಂತಹ ಮಹತ್ವ ಹೆಜ್ಜೆ ರಾಜ್ಯ ಸರ್ಕಾರ ಇಡುತ್ತಿದೆ. ನಾಳೆ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್‌ಗೆ ಚಾಲನೆ ಸಿಗಲಿದೆ.ಇದನ್ನೂ ಓದಿ: ಪಾಕ್ ಶೆಲ್ ದಾಳಿಗೆ ಒಳಗಾಗಿದ್ದ ಪೂಂಚ್ ಗುರುದ್ವಾರಕ್ಕೆ ರಾಹುಲ್ ಗಾಂಧಿ ಭೇಟಿ
ಸಾರ್ವಜನಿಕರಿಗೆ ಜೂನ್ 1ರಿಂದ ವಿಧಾನಸೌಧ ಟೂರ್ ಗೈಡ್ ಪ್ರಾರಂಭವಾಗಲಿದ್ದು, ಪ್ರವಾಸೋದ್ಯಮ ಇಲಾಖೆ ಕೆಎಸ್‌ಟಿಡಿಸಿ ಮಾರ್ಗಸೂಚಿ ಜೊತೆಗೆ ಶುಲ್ಕದ ವಿವರವನ್ನು ಬಿಡುಗಡೆ ಮಾಡಿದೆ. ವಯಸ್ಕರಿಗೆ 50 ರೂ., 16 ವರ್ಷ ಮೇಲ್ಪಟ್ಟ ವಯಸ್ಕರಿಗೆ 50 ರೂ. ಹಾಗೂ 15 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ವಿಧಾನಸೌಧ ಟೂರ್ ವ್ಯವಸ್ಥೆ ಇರಲಿದ್ದು, ಬೆಳಗ್ಗೆ 8 ರಿಂದ ಸಂಜೆ 5 ಗಂಟೆಗೆ ಸಮಯ ನಿಗದಿಪಡಿಸಲಾಗಿದೆ.
ಟೂರ್‌ಗಾಗಿ ಟಿಕೆಟ್‌ನ್ನು ಕೆಎಸ್‌ಟಿಡಿಸಿ ಆನ್‌ಲೈನ್ ಮೂಲಕ ಬುಕ್ ಮಾಡಬೇಕು. 30 ಜನರನ್ನು ಒಳಗೊಂಡ ಗ್ರೂಪ್‌ನ್ನು ಪ್ರತಿ ಪ್ರವಾಸಕ್ಕೆ ನಿಗದಿ ಮಾಡಲಾಗಿದ್ದು, ಒಂದು ಗ್ರೂಪ್‌ಗೆ 90 ನಿಮಿಷಗಳ ಪ್ರವಾಸವಿರಲಿದೆ. ಒಂದು ದಿನಕ್ಕೆ 300 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಗೈಡ್ ಮಾಹಿತಿ ಕೊಡಲಿದ್ದಾರೆ. ವಿಧಾನಸೌಧದ ಗೇಟ್ ನಂಬರ್ 3ರಿಂದ ಪ್ರವೇಶ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: 2025ರ UG-CET ಫಲಿತಾಂಶ ಪ್ರಕಟ – 2,75,677 ವಿದ್ಯಾರ್ಥಿಗಳಿಗೆ ರ‍್ಯಾಂಕ್