ಬೆಂಗಳೂರು: ವಿಧಾನಸಭೆಯ ಸ್ಪೀಕರ್ ಕೋಳಿವಾಡ ಅವರು ವಿಧಾನ ಸೌಧದ ತಮ್ಮ ಕೊಠಡಿಯನ್ನ ನವೀಕರಣ ಬರೋಬ್ಬರಿ 75 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಿದ್ದಾರೆ.
ಹೌದು. ಬರಗಾಲದಲ್ಲೂ ಇಂತಹ ಖರ್ಚುಬೇಕಿತ್ತಾ ಅಂತ ವಿರೋಧಗಳು ಬಂದಿದ್ದರೂ ತಮ್ಮ ನಿಲುವನ್ನು ಸ್ಪೀಕರ್ ಸಮರ್ಥನೆ ಮಾಡಿಕೊಂಡಿದ್ದರು. ಆದರೆ ಈಗ ನಮ್ಮ ಸ್ಪೀಕರ್ ಅವರು ನವೀಕರಣಕ್ಕೆ ಎಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎನ್ನುವುವುದು ಮಾಹಿತಿ ಹಕ್ಕಿನ ಅಡಿ ಬೆಳಕಿಗೆ ಬಂದಿದೆ.
Advertisement
Advertisement
ಸುಮಾರು 75. ಲಕ್ಷ ರೂ. ವೆಚ್ಚದಲ್ಲಿ ನಡೆದ ನವೀಕರಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ವಸ್ತುಗಳನ್ನ ಸ್ಪೀಕರ್ ಕೊಠಡಿಗೆ ಹಾಕಲಾಗಿದೆ.
Advertisement
ಯಾವುದಕ್ಕೆ ಎಷ್ಟು ವೆಚ್ಚ?
* ಸ್ಪೀಕರ್ ಕುಳಿತುಕೊಳ್ಳೊಕೆ ಸಿಂಗಲ್ ಲೆದರ್ ಛೇರ್ – 1.5 ಲಕ್ಷ ರೂ.
* ತ್ರಿಬಲ್ ಸೋಫಾ ಸೆಟ್ – 4 ಲಕ್ಷ. ರೂ.
* ಸ್ಪೀಕರ್ ರೂಂ ನಲ್ಲಿ ಕಾಫಿ ಕುಡಿಯೋ ಟೇಬಲ್ – 35 ಸಾವಿರ ರೂ.
* ಸ್ಪೀಕರ್ ಮೀಟಿಂಗ್ ಮಾಡೋಕೆ ಬಳಸೊ ಟೇಬಲ್ ಗೆ – 5 ಲಕ್ಷ ರೂ., ವಿಸಿಟರ್ ಚೇರ್ ಗೆ 4.5 ಲಕ್ಷ ರೂ.
* ಬುಕ್ ಸ್ಟೋರ್ ಮಾಡೋಕೆ ಬುಕ್ ಸ್ಟೋರೇಜ್ ಗೆ 2.5 ಲಕ್ಷ. ರೂ.
* ಡಬಲ್ ಕಾಟ್ ಮ್ಯಾಟ್ರಸ್ ಗೆ -1.75 ಲಕ್ಷ. ರೂ.
* ಸೈಡ್ ಟೇಬಲ್, ಎಕ್ಸಿಕ್ಯೂಟೀವ್ ಟೇಬಲ್, ವಿವಿಧ ಮಾದರಿಯ ಟೇಬಲ್ ಗೆ 5 ಲಕ್ಷ ರೂ.
Advertisement
ಗುತ್ತಿಗೆಯಲ್ಲಿ ಅಕ್ರಮದ ವಾಸನೆ: ಸ್ಪೀಕರ್ ಕೋಳಿವಾಡರ ಕಾಸ್ಟ್ಲಿ ದುನಿಯಾ ಒಂದು ಕಡೆಯಾದ್ರೆ ಮತ್ತೊಂದು ಕಡೆ ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಅಕ್ರಮ ಅಂತಾ ಲೋಕೋಪಯೋಗಿ ಇಲಾಖೆಯನ್ನ ಬಿಟ್ಟು ಸ್ವತಃ ಸ್ಪೀಕರ್ ಕಚೇರಿಯವರೇ ಟೆಂಡರ್ ಕರೆದಿದ್ರು. ಗುತ್ತಿಗೆಯನ್ನ ರಿಯಾಜ್ ಅಹಮದ್ ಅನ್ನೋರಿಗೆ ನೀಡಲಾಗಿತ್ತು.
ಅಸಲಿಗೆ ಈ ರಿಯಾಜ್ ಅಹಮದ್ ಕೇವಲ ಎಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದಾರೆ. ನಿಯಮದ ಪ್ರಕಾರ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಗೆ ಸಿವಿಲ್ ಕಾಮಗಾರಿ ನಿಡುವ ಹಾಗಿಲ್ಲ. ಆದ್ರೆ ಶಾಸಕರ ಭವನದ ಅಧಿಕಾರಿ ಮೊಹಮದ್ ಗೌಸ್ ಅನ್ನೋರ ಸಂಬಂಧಿ ಆಗಿರೋದ್ರೀಂದ ನಿಯಮ ಮೀರಿ ಗುತ್ತಿಗೆ ನೀಡಿದ್ದಾರೆ ಅನ್ನೋ ದೊಡ್ಡ ಆರೋಪವೊಂದು ಕೇಳಿ ಬಂದಿದೆ.
ದುಂದು ವೆಚ್ವ ಹಾಗೂ ನಿಯಮ ಮೀರಿ ಗುತ್ತಿಗೆ ನೀಡಿರುವ ಕುರಿತು ತನಿಖೆಗೆ ಒತ್ತಾಯಿಸಿ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಮರಿ ಲಿಂಗೇಗೌಡ ಮಾಲೀಪಾಟೀಲ್ ದೂರು ನೀಡಿದ್ದಾರೆ. ಸರ್ಕಾರ ಏನ್ ಕ್ರಮ ತೆಗೆದುಕೊಳ್ಳುತ್ತೋ ನೋಡೋಣ.