ಬೆಂಗಳೂರು: ನಾವು ಕೂಡ ಸನ್ಯಾಸಿಗಳಲ್ಲ ಎಂದು ತೋರಿಸಿಕೊಳ್ಳಲು ಮತ್ತು ಕುರ್ಚಿ ಉಳಿಸಿಕೊಳ್ಳಲು ಆಪರೇಷನ್ ಕಮಲ ಆಡಿಯೋವನ್ನು ಪತ್ರಿಕಾಗೋಷ್ಠಿ ನಡೆಸಿ ರಿಲೀಸ್ ಮಾಡಿದ್ದೇನೆ ಎದು ವಿಧಾನಸಭೆಯಲ್ಲಿ ಬಿಜೆಪಿ ಆರೋಪಕ್ಕೆ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಸದನದಲ್ಲಿ ಇಂದು ಬಿಜೆಪಿ ನಾಯಕರು ಆಡಿಯೋ ಬಗ್ಗೆ ಎಸ್‍ಐಟಿ ತನಿಖೆಗೆ ಒಪ್ಪಿಸುವುದನ್ನು ವಿರೋಧಿಸಿ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಂತದಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿ ಸ್ಪೀಕರ್ ಅವರನ್ನು ಬೀದಿಗೆ ತಂದಿದ್ದಾರೆ ಎಂದು ಆರೋಪಿಸಿದರು. ಶೆಟ್ಟರ್ ಅವರ ಆರೋಪಕ್ಕೆ ತಕ್ಷಣ ತಿರುಗೇಟು ನೀಡಿದ ಸಿಎಂ ಅವರು, ಬಿಜೆಪಿ ನಾಯಕರು ಪದೇ ಪದೇ ಆಪರೇಷನ್ ಕಮಲ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದರು. ಅಲ್ಲದೇ ಸರ್ಕಾರ ಉರುಳಿದರೆ ನಾವೇನು ಸುಮ್ಮನೆ ಕೂರಲು ಸನ್ಯಾಸಿಗಳಲ್ಲ ಎಂದು ಹೇಳುತ್ತಿದ್ದರು. ಹಾಗೆಯೇ ನಾವು ಕೂಡ ಸನ್ಯಾಸಿಗಳು ಅಲ್ಲ. ನಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ನಾವು ಪ್ರತಿಕಾಗೋಷ್ಠಿ ನಡೆಸಿ ಈ ಆಡಿಯೋ ರೆಕಾರ್ಡ್ ಬಿಡುಗಡೆ ಮಾಡಿದ್ದೇವೆ ಅಷ್ಟೇ ಎಂದು ಎಚ್‍ಡಿಕೆ ಟಾಂಗ್ ನೀಡಿದರು.
Advertisement
Advertisement
ಇದೇ ವೇಳೆ ಏನೂ ತಪ್ಪು ಮಾಡಿಲ್ಲ ಅಂದರೆ ಬಿಜೆಪಿಯವರಿಗೆ ಭಯ ಏಕೆ ಎಂದು ಪ್ರಶ್ನಿಸಿದ ಸಿಎಂ ಕುಮಾರಸ್ವಾಮಿ ಅವರು, ಸತ್ಯವನ್ನ ಜನರಿಗೆ ತೋರಿಸಬೇಕಿತ್ತಲ್ವಾ? ಅದಕ್ಕೆ ಆಡಿಯೋ ನೀಡಿದೆ. ಸ್ಪೀಕರ್ ಹೆಸರನ್ನು ಬೀದಿಗೆ ತಂದಿದ್ದು ಯಾರು? ಎನ್ನುವುದನ್ನು ಅವರೇ ಯೋಚನೆ ಮಾಡಲಿ ಎಂದರು. ಅಲ್ಲದೇ ಶೆಟ್ಟರ್ ಅವರು ಫೋನ್ ಕದ್ದಾಲಿಕೆ ಆರೋಪ ನಿರಾಕರಿಸಿ, ನಾನು ಯಾರ ಫೋನ್ ಕದ್ದಾಲಿಕೆ ಮಾಡಿಲ್ಲ ಎಂದರು.
Advertisement
ಎರಡು ಪಕ್ಷಗಳ ನಾಯಕರಿಗೆ ತಿಳಿ ಹೇಳಿದ ಸ್ಪೀಕರ್ ಅವರು, ಸಿಎಂ ಕುಮಾರಸ್ವಾಮಿ ಅವರಿಗೆ ನಾಗನಗೌಡ ಮಗ ಕೇಳಿದ್ದರು. ಅದಕ್ಕೆ ಹೋಗು ಎಂದು ಹೇಳಿ, ರೆಕಾರ್ಡ್ ಮಾಡಿ ತಂದಿದ್ದಾರೆ. ರೆಕಾರ್ಡ್ ಕೈಗೆ ಬಂದು, ಸ್ಪೀಕರ್ ಅವರ ಹೆಸರು ಪ್ರಸ್ತಾಪ ಆದಾಗ ಅವರು ಹೇಳಲೇ ಬೇಕಾಗಿತ್ತು. ಒಂದೊಮ್ಮೆ ಅವರು ಸುಮ್ಮನಾಗಿ 3ನೇ ವ್ಯಕ್ತಿಯಿಂದ ನನಗೆ ಆಗ ವಿಚಾರ ತಿಳಿದಿದ್ದರೆ ಏನಾಗುತಿತ್ತು? ಆಗ ಸಿಎಂ ಕುಮಾರಸ್ವಾಮಿ ಅವರು ಅಪರಾಧಿ ಆಗುತ್ತಿದ್ದರು. ಆದ್ದರಿಂದ ಅವರು ನನಗೆ ಮಾಹಿತಿ ನೀಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
Advertisement
ಸಿಎಂ ಕುಮಾರಸ್ವಾಮಿ ಅವರ ಮಾತಿಗೆ ಮತ್ತೆ ಮಧ್ಯಪ್ರವೇಶ ಮಾಡಿದ ಶೆಟ್ಟರ್ ಅವರು, ಸಭಾಧ್ಯಕ್ಷರನ್ನೇ ಈಗ ಸನ್ಯಾಸಿ ಮಾಡಿದ್ದಾರೆ. ಸಭಾಧ್ಯಕ್ಷರ ಹೆಸರು ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ. ಅವರು ಸುದ್ದಿಗೋಷ್ಠಿ ಮಾಡಿದ್ದೆ ಇಷ್ಟೆಲ್ಲಾ ನಡೆಯಲು ಕಾರಣ ಎಂದು ಆರೋಪಿಸಿದರು.
ಶೆಟ್ಟರ್ ಆರೋಪ: ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿರುವ ಕುರಿತು ಸಿಎಂ ಕುಮಾರಸ್ವಾಮಿ ಮೇಲೆಯೇ ಆರೋಪಗಳನ್ನು ಮಾಡಿದ ಶೆಟ್ಟರ್ ಅವರು, ಸಿಎಂ ಸ್ಥಾನದಲ್ಲಿರುವ ಕುಮಾರಸ್ವಾಮಿ ಅವರು ಆಡಿಯೋ ರೆಕಾರ್ಡ್ ಮಾಡಿಸಿಕೊಳ್ಳಲು ಕಳುಹಿಸಿದ್ದು ಅವರ ಮೊದಲನೇ ಅಪರಾಧ ಹಾಗೂ ಕಾನ್ಫರೆನ್ಸ್ ಕುಳಿತು ಕೇಳಿಸಿಕೊಂಡಿದ್ದು 2ನೇ ಅಪರಾಧ. ಈ ಬಗ್ಗೆ ನೇರ ಸ್ಪೀಕರ್ ಅವರಿಗೆ ದೂರು ನೀಡದೇ ಸುದ್ದಿಗೋಷ್ಠಿ ನಡೆಸಿದ್ದು ಮತ್ತೊಂದು ತಪ್ಪು. ಸ್ವತಃ ಸಿಎಂ ಅವರೇ ಶಾಸಕರೊಬ್ಬರಿಗೆ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಿ ಆರೋಪಗಳ ಸುರಿಮಳೆಗೈದರು.
https://www.youtube.com/watch?v=s2WxVzZmLyo
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv