ನವದೆಹಲಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಇಕ್ಕಟ್ಟಿನಲ್ಲಿ ಸಿಲುಕಿದೆ. ಕೆಲವು ಜಿಲ್ಲೆಗಳಲ್ಲಿನ ಗೊಂದಲದ ಹಿನ್ನಲೆ ಅಭ್ಯರ್ಥಿ ಘೋಷಣೆ ವಿಳಂಬವಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಳೆದ ಶುಕ್ರವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಮತ್ತು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭೇಟಿಯಾಗಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಿದ್ದರು. ಇದನ್ನೂ ಓದಿ: ಬೊಮ್ಮಾಯಿ ನಿಮ್ಮ ಹನಿಮೂನ್ ಕಾಲ ಮುಗಿದಿದೆ: ಸಿದ್ದರಾಮಯ್ಯ
Advertisement
Advertisement
Advertisement
ಕೋಲಾರ, ಬಳ್ಳಾರಿ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲವಾದ ಹಿನ್ನಲೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುತ್ತಿಲ್ಲ. ಒಂದೇ ಹಂತದಲ್ಲಿ ಪಟ್ಟಿ ಬಿಡುಗಡೆ ಲೆಕ್ಕಚಾರದಲ್ಲಿರುವ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡದೇ ತಡೆ ಹಿಡಿದಿದೆ. ಈ ಸಂಬಂಧ ಭಾನುವಾರ ರಾತ್ರಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ರಣದೀಪ್ ಸುರ್ಜೆವಾಲ ಭೇಟಿಯಾಗಿ ಚರ್ಚಿಸಿದ್ದಾರೆ. ಇದನ್ನೂ ಓದಿ: ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ
Advertisement
Had the privilege of meeting Honourable @INCIndia President Smt. Sonia Gandhi today in Delhi to discuss various party matters related to Karnataka. pic.twitter.com/rgZeyOoPs8
— DK Shivakumar (@DKShivakumar) November 20, 2021
ನಾಳೆ ನಾಮಪತ್ರಕ್ಕೆ ಕೊನೆಯ ದಿನಾಂಕವಾಗಿರುವ ಹಿನ್ನೆಲೆ ಇಂದು ಸಂಜೆಯ ವೇಳೆಗೆ ಪಟ್ಟಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಮೂಲಗಳ ಪ್ರಕಾರ ಬೆಂಗಳೂರು ಗ್ರಾಮಾಂತರದಿಂದ ಎಸ್.ರವಿ, ಶಿವಮೊಗ್ಗದಿಂದ ಪ್ರಸನ್ನ ಕುಮಾರ್, ಚಿಕ್ಕಮಗಳೂರುನಿಂದ ಗಾಯಿತ್ರಿ ಶಾಂತೇಗೌಡ, ತುಮಕೂರುನಿಂದ ರಾಜೇಂದ್ರ, ಚಿತ್ರದುರ್ಗ ದಾವಣಗೆರೆಯಿಂದ ಸೋಮಶೇಖರ್, ಮಂಡ್ಯದಿಂದ ದಿನೇಶ್ ಗೂಳಿ ಗೌಡ, ಕೊಡಗುನಿಂದ ಮಂಥರ್ ಗೌಡ, ಹಾಸನದಿಂದ ಶಂಕರ್, ಕೊಪ್ಪಳ – ರಾಯಚೂರಿನಿಂದ ಶರಣೇಗೌಡ ಬಯ್ಯಾಪುರ, ಧಾರವಾಡದಿಂದ (ದ್ವಿ ಸದಸ್ಯ ಸ್ಥಾನ) ಸಲೀಂ ಅಹಮ್ಮದ್, ಬೆಳಗಾವಿಯಿಂದ (ದ್ವಿ ಸದಸ್ಯ ಸ್ಥಾನ)ಚನ್ನರಾಜು, ಗದಗನಿಂದ ಆರ್.ಎಸ್ ಪಾಟೀಲ್, ಉತ್ತರ ಕನ್ನಡದಿಂದ ಭೀಮಣ್ಣ ನಾಯಕ ಹೆಸರು ಬಹುತೇಕ ಖಚಿತವಾಗಿದೆ.