ಬೆಂಗಳೂರು: ಹಳೇ ಮೈಸೂರು(Old Mysuru) ಭಾಗದ ಮೇಲೆ ಕಾಂಗ್ರೆಸ್ ಬಿಜೆಪಿ ಕಣ್ಣು ಹಾಕಿದ ಹಿನ್ನೆಲೆಯಲ್ಲಿ ತನ್ನ ಭದ್ರಕೋಟೆಯಲ್ಲಿ ಹಿಡಿತ ಸಡಿಲಿಕೆ ಆಗದಂತೆ ಮಾಜಿ ಸಿಎಂ ಕುಮಾರಸ್ವಾಮಿ(Kumaraswamy) ಪ್ಲ್ಯಾನ್ ಮಾಡಿದ್ದಾರೆ.
ವಿಧಾನಸಭಾ ಚುನಾವಣೆ(Election) ತಿಂಗಳು ಇರುವಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಕೋಟೆಯನ್ನು ಛಿದ್ರ ಮಾಡಲು ರಣತಂತ್ರ ಮಾಡುತ್ತಿದೆ. ಈ ತಂತ್ರಕ್ಕೆ ಪ್ರತಿ ತಂತ್ರ ಹೂಡಲು ಕುಮಾರಸ್ವಾಮಿ ಅವರೇ ನೇರವಾಗಿ ಅಖಾಡಕ್ಕೆ ಧುಮುಕಿದ್ದಾರೆ.
ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಕುಮಾರಸ್ವಾಮಿ ಇಳಿದಿದ್ದು, ಪಕ್ಷ ತೊರೆದ ಎರಡನೇ ಹಂತದ ನಾಯಕರನ್ನು ಕರೆತರಲು ದಳಪತಿ ಮುಂದಾಗಿದ್ದಾರೆ. ರೆಬೆಲ್ ಶಾಸಕರ ಕ್ಷೇತ್ರ, ಉಪ ಚುನಾವಣೆಯಲ್ಲಿ ಸೋಲುಂಡ ಕ್ಷೇತ್ರಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ರಾಜೀವ್ ಗಾಂಧಿ ಹತ್ಯೆ ಬಗ್ಗೆ ಪ್ರಶ್ನಿಸಿದ್ದರು: ನಳಿನಿ ಶ್ರೀಹರನ್
ಶಿರಾ, ಕೆ.ಆರ್.ಪೇಟೆ, ಗುಬ್ಬಿ, ಚಾಮುಂಡೇಶ್ವರಿ, ಕೋಲಾರ ಕ್ಷೇತ್ರಗಳ ಮುಖಂಡರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ತೊರೆದಿರುವ ಕಲ್ಕೆರೆ ರವಿಕುಮಾರ್, ಎಸ್.ಆರ್.ಗೌಡ ಇಂದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಕಲ್ಕೆರೆ ರವಿ, ಎಸ್.ಆರ್.ಗೌಡ ಶಿರಾ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದು ಅವರನ್ನು ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಈ ಮೂಲಕ ಕಾರ್ಯಕರ್ತರಿಗೆ ಮೊದಲ ಆದ್ಯತೆ ಎಂಬ ಸಂದೇಶವನ್ನು ಎಚ್‌ಡಿಕೆ ರವಾನಿಸಿದ್ದಾರೆ.