ಗಾಂಧಿನಗರ: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನ 6 ಮಂದಿ ಶಾಸಕರು ಬಿಜೆಪಿಗೆ ಹಾರಲು ಮುಂದಾಗಿದ್ದಾರೆ.
ಸೌರಾಷ್ಟ್ರದ 6 ಶಾಸಕರು ಶೀಘ್ರವೇ ಬಿಜೆಪಿ ಸೇರಲಿದ್ದರೆ ಉಳಿದ ಕೆಲವರು ಈ ಹಾದಿಯಲ್ಲೇ ಸಾಗಲಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಭವೇಶ್ ಕಟಾರಾದಲ್ಲಿ ಚಿರಾಗ್ ಕಲ್ಗಾರಿಯಾ, ಲಲಿತ್ ವಸೋಯಾ, ಸಂಜಯ್ ಸೋಲಂಕಿ, ಮಹೇಶ್ ಪಟೇಲ್ ಮತ್ತು ಹರ್ಷದ್ ರಿಬಾಡಿಯಾ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಅವರನ್ನು ಭೇಟಿ ಮಾಡಿದ್ದು, ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆ ಇದೆ. 6 ಶಾಸಕರ ಪೈಕಿ ನಾಲ್ವರು ಪಾಟಿದಾರ್ ಸಮುದಾಯವರಾಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ
ಹಿರಿಯ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿ, 50 ಸಾವಿರ ಚುನಾವಣಾ ಬೂತ್‌ಗಳ ಏಜೆಂಟ್‌ಗಳಿಗೆ 5 ಸಾವಿರ ರೂ. ನೀಡಬೇಕು. ಚುನಾವಣಾ ಸಮಯದಲ್ಲಿ ಇಷ್ಟೊಂದು ಹಣ ಹೊಂದಿಸುವುದು ಪಕ್ಷಕ್ಕೆ ಕಷ್ಟವಾಗಬಹುದು. ಶಾಸಕರ ಬೇಡಿಕೆಯನ್ನು ಈಡೇರಿಸಲು ಪಕ್ಷಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.