ಪರಿಷತ್‍ನಲ್ಲಿ ನಿದ್ರೆ ಮಾಡೋರಿಗೆ ಹಾಡು ಹೇಳಿ ಎಬ್ಬಿಸಿದ ಜೆಡಿಎಸ್ ಸದಸ್ಯ ಭೋಜೇಗೌಡ

Public TV
1 Min Read
BOOJEGOWDA

-ಪರಿಸರ ವಾದಿಗಳ ವಿರುದ್ಧ ಕಿಡಿ

ಬೆಂಗಳೂರು: ವಿಧಾನಪರಿಷತ್‍ನಲ್ಲಿ ಚರ್ಚೆಯ ಸಂದರ್ಭದಲ್ಲಿ ನಿದ್ದೆ ಮಾಡುತ್ತಿದ್ದವರನ್ನು ನೋಡಿ ವಿಧಾನಪರಿಷತ್ ಜೆಡಿಎಸ್ ಸದಸ್ಯ ಭೋಜೇಗೌಡರು ಏರು ಕಂಠದಲ್ಲಿ ದಾಸರ ಪದ ಹಾಡುವ ಮೂಲಕ ನಿದ್ದೆಯಿಂದ ಎಬ್ಬಿಸುವ ಕೆಲಸ ಮಾಡಿದ್ದಾರೆ.

BOOJEGOWDA

ನಿಯಮ 330 ಅಡಿ ನಡೆಯುತ್ತಿದ್ದ ಚರ್ಚೆ ವೇಳೆ ಫಾರೂಕ್ ಅವರೊಂದಿಗೆ ಮಾತನಾಡುತ್ತಿದ್ದ ಭೋಜೇಗೌಡರು, ಇದ್ದಕ್ಕಿದ್ದಂತೆ ಗಾಯನ ಶುರುಮಾಡಿಕೊಂಡರು. ರಾಗವಾಗಿ ಹಾಡು ಶುರು ಮಾಡಿದ ಭೋಜೇಗೌಡರು ಏರು ಕಂಠದಲ್ಲಿ ದಾಸರ ಪದ ಹಾಡಿ, ಬಹಳ ಜನ ನಿದ್ದೆ ಮಾಡ್ತಿದ್ರು ಅದಕ್ಕೆ ಹಾಡಿದೆ ಎಂದು ಸಮಜಾಯಿಷಿ ನೀಡಿದರು. ಇದನ್ನೂ ಓದಿ: ವಿಮಾನದ ಟಿಕೆಟ್‍ಗಿಂತ ಬಸ್‍ಗಳ ಟಿಕೆಟ್ ದರ ಜಾಸ್ತಿ ಇದೆ: ರಮೇಶ್ ಕುಮಾರ್

VIDANAPARISHATH

88 ಲಕ್ಷ ಜೀವರಾಶಿಗಳ ದಾಟಿ ಬಂದ ಈ ಶರೀರ, ತಾನಲ್ಲ ತನ್ನದಲ್ಲ ಎಂದು ದಾಸರ ಪದ ಭೋಜೇಗೌಡರು ಹಾಡುತ್ತಿದ್ದಂತೆ, ಬಿಜೆಪಿ ಸದಸ್ಯರಿಂದ ಒನ್ಸ್ ಮೋರ್ ಎಂಬ ಬೇಡಿಕೆ ಕೇಳಿಬಂತು. ಈ ವೇಳೆ ಮತ್ತೆ ರಾಗವಾಗಿ ಕೀರ್ತನೆ ಹಾಡಲು ಭೋಜೇಗೌಡರು ಆರಂಭಿಸಿದರು. ಈ ಸಂದರ್ಭ ಮತ್ತೆ ಶುರು ಮಾಡಬೇಡಿ ಎಂದು ಸಭಾಪತಿ ಹೊರಟ್ಟಿ ತಮಾಷೆ ಮಾಡಿದರು.

BOOJEGOWDA 1

ಮಂಗಳೂರು, ಕರಾವಳಿ, ಉಳ್ಳಾಲ ಸುರತ್ಕಲ್ ಭಾಗದಲ್ಲಿ ಅಸಮರ್ಪಕ ಒಳಚರಂಡಿಯಿಂದ ತೀವ್ರ ಸಮಸ್ಯೆ ಇದೆ ಎಂದು ತಮ್ಮ ಭಾಗದ ಸಮಸ್ಯೆಗಳನ್ನು ಪರಿಷತ್‍ನಲ್ಲಿ ಮಂಡಿಸಿದರು. ಇದಲ್ಲದೆ ಮಂಗಳೂರು, ಕರಾವಳಿ ಪ್ರದೇಶಗಳಲ್ಲಿ ಸಾಕಷ್ಟು ಕೈಗಾರಿಕಾ ಪ್ರದೇಶಗಳಿವೆ ಇದರಿಂದ ಪರಿಸರ ನಾಶವಾಗುತ್ತಿದೆ. ಈ ಬಗ್ಗೆ ಮಾತನಾಡದೆ ಸುಮ್ಮನಿರುವ ಇವರೆಲ್ಲ ಪರಿಸರ ವಾದಿಗಳಲ್ಲ, ಪರಿಸರ ವ್ಯಾಧಿಗಳು. ನನ್ನ ಬಗ್ಗೆ ಏನು ಬೇಕಾದ್ರೂ ಬರೀರಿ, ಪರಿಸರ ವ್ಯಾಧಿಗಳಿಂದಾಗಿಯೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಪರಿಸರ ವಾದಿಗಳ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಬಸ್ಸಿನಲ್ಲಿ ‘ಗೀತ ಗೋವಿಂದಂ’ ಸೀನ್ – ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟ ಅಪರಿಚಿತ ಯುವಕ!

Share This Article
Leave a Comment

Leave a Reply

Your email address will not be published. Required fields are marked *