ನವದೆಹಲಿ: ಆರ್‌ಎಸ್‌ಎಸ್ (RSS) ಸಂಘಟನೆ ಮೊದಲಿನಂತಿಲ್ಲ, ಈಗಿನ ನಾಯಕರು ಅದರ ಹೆಸರಿನಲ್ಲಿ ಕಾರಿನಲ್ಲಿ ಓಡಾಡಿಕೊಂಡು ಶೋಕಿ ಮಾಡುತ್ತಿದ್ದಾರೆ, ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ ಆಗಿದೆ ಎಂದು ಬಿಜೆಪಿ ನಾಯಕರನ್ನು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಟೀಕಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಸಿ.ಟಿ ರವಿ (CT Ravi), ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಸಿದ್ದರಾಮಉಲ್ಲಾ ಖಾನ್ ಎಂದಿದ್ದಾರೆ, ಸಿ.ಟಿ ರವಿ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಸಿಟಿ ರವಿ ಅವರು, ನಾಲ್ಕು ಬಾರಿ ಶಾಸಕರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಗೌರವಯುತವಾಗಿ ಮಾತನಾಡಬೇಕು ಎಂದರು.
- Advertisement
ಸಿ.ಟಿ ರವಿ ಹಿಟ್ ಅಂಡ್ ರನ್ ಕೇಸ್ ಗಿರಾಕಿ ಅಂತಾರೆ, ಲೂಟಿ ರವಿ ಅಂತಾ ಅವರ ಕ್ಷೇತ್ರದ ಜನರು ಹೇಳುತ್ತಾರೆ. ಬಿಜೆಪಿ ನಾಯಕರು ಹತಾಶರಾಗಿ ನಮ್ಮ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹಿಂದೂಳಿದ ವರ್ಗಗಳ ನಾಯಕ, 5 ವರ್ಷ ಉತ್ತಮ ಆಡಳಿತ ನೀಡಿದ ನಾಯಕ, ಮುಸಲ್ಮಾನರ ಬೇರೆ ದೇಶದಿಂದ ಬಂದಿದ್ದಾರಾ ಎಂದು ಪ್ರಶ್ನಿಸಿದ ಅವರು, ನಮ್ಮ ರಾಜ್ಯ, ದೇಶದ ಪ್ರಜೆಗಳೇ ಅಲ್ವ? ಕೋಮು ಸೌಹಾರ್ದ ಹಾಳುಗೇಡವಲು ಬಿಜೆಪಿ ನಾಯಕರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನೂ ಓದಿ: ಗೆಳತಿಗೆ ಹತ್ತಿರವಾಗಿದ್ದ ಹುಡುಗನ ವಿರುದ್ಧ ಸೇಡು – ಮೋದಿಗೆ ಬೆದರಿಕೆ ಹಾಕಿದ್ದ ಟೆಕ್ಕಿ ಅರೆಸ್ಟ್
- Advertisement
ಬಿಜೆಪಿ ನಡೆ ನುಡಿಯಲ್ಲಿ ವ್ಯತಾಸಗಳಿದೆ, ಹಿಂದಿನ ಸೈದ್ಧಾಂತಿಕ ಆರ್‌ಎಸ್‌ಎಸ್ ಈಗಿಲ್ಲ, ಆರ್‌ಎಸ್‌ಎಸ್ ಹೆಸರಿನಲ್ಲಿ ಐಷಾರಾಮಿ ಕಾರ್‌ನಲ್ಲಿ ಓಡಾಡ್ಕೊಂಡು ಶೋಕಿ ಮಾಡುತ್ತಿದ್ದಾರೆ. ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ ಎಂದು ಟೀಕಿಸಿದರು. ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಬೇಕಾಬಿಟ್ಟಿ ಮಾತನಾಡಿದ್ರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಎಲ್ಲರಿಗೂ ರೌಡಿ ಶೀಟರ್ ಅಂತ ನಾಮಕರಣ ಮಾಡೋದು ತಪ್ಪು – ರೌಡಿಗಳ ಬಿಜೆಪಿ ಸೇರ್ಪಡೆ ಸಮರ್ಥಿಸಿಕೊಂಡ ಅಶ್ವಥ್ ನಾರಾಯಣ