ಬಾಗಲಕೋಟೆ: ಧರ್ಮಜೋಡಣೆ ಮಾಡಿದ್ದು ಟಿಕೆಟ್ ಕೈತಪ್ಪಲು ಕಾರಣವಾಯಿತಾ ಅಥವಾ ಧರ್ಮ ವಿಭಜನೆ ಮಾಡಿದವರಿಗೆ ಟಿಕೆಟ್ ಸಿಕ್ಕಿದೆಯಾ ಎಂಬ ಕಾರಣ ಗೊತ್ತಿಲ್ಲ ಎಂದು ಎಸ್.ಆರ್. ಪಾಟೀಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಆದೇಶದಂತೆ ಅಂದಾಜು 200 ಮಠಾಧೀಶರನ್ನು ಭೇಟಿಯಾಗಿ, ಆಶಿರ್ವಾದ ಪಡೆದು ಪಕ್ಷ ಹೇಳಿದಂತೆ ನಡೆದುಕೊಂಡಿದ್ದೆ. ಆದರೂ ಪರಿಷತ್ ಟಿಕೆಟ್ ಏಕೆ ಕೈತಪ್ಪಿದೆ ಎಂಬುದೆ ನನಗೆ ಯಕ್ಷಪ್ರಶ್ನೆಯಾಗಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
Advertisement
ಪಕ್ಷದ ಆದೇಶದಂತೆ ಧರ್ಮ ಒಗ್ಗೂಡಿಸಲು, ಮಠ ಮಾನ್ಯಗಳಿಗೆ ಭೇಟಿ ನೀಡಿದ್ದೇನೆ. ಆದರೆ ಧರ್ಮ ವಿಭಜನೆ ಮಾಡಿದವರಿಗೆ ಟಿಕೆಟ್ ನೀಡಿದಂತೆ ಮೇಲ್ನೋಟಕ್ಕೆ ಕಾಣುತ್ತಿರಬಹುದು ಎನ್ನುವ ಮೂಲಕ ಎಂ.ಬಿ ಪಾಟೀಲ್ ಸಹೋದರ ಸುನೀಲ್ ಪಾಟೀಲ್ ಅವರಿಗೆ ಟಿಕೆಟ್ ನೀಡಿರುವ ಕುರಿತು ಪರೋಕ್ಷ ಅಸಮಾಧಾನ ಹೊರ ಹಾಕಿದರು. ಇದನ್ನೂ ಓದಿ: ಯಾರೂ ತಿರುಕನ ಕನಸು ಕಾಣೋದು ಬೇಡ: ಆರ್. ಅಶೋಕ್
Advertisement
ಮುಂದಿನ ದಿನಗಳಲ್ಲಿ ಯಾರು, ಯಾವ ಕಾರಣಕ್ಕೆ ನನಗೆ ಪರಿಷತ್ ಟಿಕೆಟ್ ತಪ್ಪಿಸಿದ್ದಾರೆಂಬುದು ತಿಳಿಯುತ್ತದೆ. ಟಿಕೆಟ್ ಕೈತಪ್ಪಿದ ನಂತರ ಈ ಕುರಿತಾಗಿ ಸಿದ್ದರಾಮಯ್ಯ ನನ್ನ ಜೊತೆ ಮಾತಾಡಿಲ್ಲ. ಅವರು ಯಾವುದೋ ಕೆಲಸದಲ್ಲಿರಬಹುದು. ಮುಂದಿನ ದಿನಗಳಲ್ಲಿ ಮಾತನಾಡಬಹುದು ಎಂದು ತಿಳಿಸಿದರು.
Advertisement
ಕಾಂಗ್ರೆಸ್ ಮುಖಂಡ ಎಸ್.ಆರ್ ಪಾಟೀಲ್ ಅವರಿಗೆ ಪರಿಷತ್ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಎಸ್‍ಆರ್‍ಪಿ ಅಭಿಮಾನಿಗಳು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿಗೆ ಪತ್ರ ಬರೆದು ಪತ್ರ ಚಳುವಳಿ ನಡೆಸಿದ್ದರು. ಇದನ್ನೂ ಓದಿ: ಶುಭಾ ಪೂಂಜಾ ನ್ಯೂ ಹೇರ್ ಸ್ಟೈಲ್‍ಗೆ ದಿವ್ಯಾ ಕಾಮೆಂಟ್