ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಬಂದಿದ್ದು ಆಲೂಗಡ್ಡೆ- ಗ್ರಾಹಕ ಕಕ್ಕಾಬಿಕ್ಕಿ!

Advertisements

ಪಾಟ್ನಾ: ಸಾಮಾನ್ಯವಾಗಿ ಹಬ್ಬಗಳಿಗೆ ಆನ್‍ಲೈನ್ ಶಾಪಿಂಗ್‍ (Online Shopping) ನಲ್ಲಿ ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ರಿಯಾಯಿತಿಗಳನ್ನು ಕೊಡಲಾಗುತ್ತಿದೆ. ಇದರಿಂದ ಕೆಲವರು ಮೋಸ ಕೂಡ ಹೋಗುತ್ತಾರೆ. ಇತ್ತೀಚೆಗಷ್ಟೇ ದೆಹಲಿಯ ವ್ಯಕ್ತಿಯೊಬ್ಬರು ಲ್ಯಾಪ್‍ಟಾಪ್ (Laptop) ಬದಲಿಗೆ ಡಿಟರ್ಜೆಂಟ್ ಬಾರ್ ಗಳನ್ನು ರಿಸೀವ್ ಮಾಡಿಕೊಳ್ಳುವ ಮೂಲಕ ಭಾರೀ ಸುದ್ದಿಯಾಗಿತ್ತು. ಇದೀಗ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ.

Advertisements

ಬಿಹಾರ ನಳಂದದ ಪರ್ವಾಲ್‍ಪುರದ ವ್ಯಕ್ತಿಯೊಬ್ಬ ಮೀಶೋದಲ್ಲಿ ಡ್ರೋನ್ ಕ್ಯಾಮೆರಾ (Drone Camera) ಆರ್ಡರ್ ಮಾಡಿದ್ದಾರೆ. ಆದರೆ ಇದೀಗ ಅವರ ಮನೆ ಬಾಗಿಲಿಗೆ ಡ್ರೋನ್ ಬದಲಿಗೆ ಒಂದು ಕೆ.ಜಿ ಆಲೂಗಡ್ಡೆ ಬಂದಿದ್ದು, ಅಚ್ಚರಿ ಪಡುವಂತೆ ಮಾಡಿದೆ. ಸದ್ಯ ಪಾರ್ಸೆಲ್ ಅನ್‍ಬಾಕ್ಸ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Advertisements

ವೀಡಿಯೊದಲ್ಲಿ, ಗ್ರಾಹಕ ತನಗೆ ಬಂದ ಪಾರ್ಸೆಲ್ ಅನ್ನು ಅನ್‍ಬಾಕ್ಸ್ ಮಾಡಲು ಮೀಶೋ ಡೆಲಿವರಿ ಎಕ್ಸಿಕ್ಯೂಟಿವ್ ಬಳಿ ಹೇಳುತ್ತಾರೆ. ಡೆಲಿವರಿ ಬಾಯ್ ಪಾರ್ಸೆಲ್ ತೆರೆದಾಗ ಅದರಲ್ಲಿ ಡ್ರೋನ್ ಕ್ಯಾಮೆರಾ ಬದಲಿಗೆ 10 ಆಲೂಗಡ್ಡೆ (Potato) ಇರುವುದು ಬಯಲಾಗಿದೆ. ಇದರಿಂದ ಸಿಟ್ಟಿಗೆದ್ದ ಗ್ರಾಹಕ ಡೆಲಿಬಾಯ್ ಯನ್ನು ಬೈದಾಗ, ಆತ ಇದರಲ್ಲಿ ನನ್ನದೇನೂ ತಪ್ಪಿಲ್ಲ. ಬಾಕ್ಸ್ ಮಾಡಿ ವಿಳಾಸ ಹಾಕಿಟ್ಟಿದ್ದ ಪಾರ್ಸೆಲ್ ನಾನು ತಂದು ನಿಮಗೆ ತಲುಪಿಸಿದ್ದೇನೆ ಅಷ್ಟೇ ಎಂದು ಹೇಳಿದ್ದಾನೆ.

Advertisements

ಮೀಶೋದಲ್ಲಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಕೊಂಡುಕೊಳ್ಳಬಹುದಾದ ಆಫರ್ ಬಿಟ್ಟಿದ್ದರು. ಹೀಗಾಗಿ ನಾನು ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದ್ದೇನೆ ಎಂದು ಗ್ರಾಹಕ ಚೈತನ್ಯ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ:  ಪುರೋಹಿತರ ಮಾತಿಗೆ ಮರುಳಾಗಿ ಸಮಾಧಿಯಾಗಿದ್ದವನ ರಕ್ಷಿಸಿದ ಪೊಲೀಸರು

ಚೈತನ್ಯ ಅವರು ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಮಾರುಕಟ್ಟೆ ಮೌಲ್ಯ 84,999 ರೂ. ಇದೆ. ಆದರೆ ಮೀಶೋನಲ್ಲಿ 10, 212 ರೂ. ಗೆ ಪಡೆದುಕೊಳ್ಳುವ ಅಂತ ಆಫರ್ ಬಿಟ್ಟಿದ್ದರು. ಮೊದಲು ಅನುಮಾನಗೊಂಡ ಚೈತನ್ಯ ನಂತರ ಅದನ್ನು ಕಂಪನಿಯೊಂದಿಗೆ ಸ್ಪಷ್ಟಪಡಿಸಲು ನಿರ್ಧರಿಸಿದರು. ಈ ವೇಳೆ ಮೀಶೋ ಕಂಪನಿಯವರು, ಆಫರ್ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯ್ಲಲಿ ಚೈತನ್ಯ ಅವರು ಸಂಪೂಣ್ ಹಣ ಪಾವತಿ ಮಾಡಿ ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದ್ದರು.

ಚೈತನ್ಯ ಕುಮಾರ್ ಅವರ ದೂರಿನ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪರ್ವಲಪುರ ಎಸ್‍ಎಚ್‍ಒ ಹೇಳಿದರು.

Live Tv

Advertisements
Exit mobile version