ಬ್ಯಾಕಾಂಕ್: ಬೆಳಗ್ಗಿನ ಶಿಫ್ಟ್ ಗೆ ಕೆಲಸ ಮಾಡಲು ಫ್ಯಾಕ್ಟರಿಗೆ ಬಂದಿದ್ದ ಸಿಬ್ಬಂದಿ 12 ಅಡಿ ಉದ್ದದ ಹೆಬ್ಬಾವನ್ನು ನೋಡಿ ಬಿಚ್ಚಿಬಿದ್ದ ಘಟನೆ ಥೈಲ್ಯಾಂಡಿನಲ್ಲಿ ನಡೆದಿದೆ.
ಥೈಲ್ಯಾಂಡ್‍ನ ಚೋಂಬುರಿಯಲ್ಲಿರುವ ಫ್ಯಾಕ್ಟರಿಯ ಕಾಪೌಂಡ್ ಮೇಲೆ ಕಳೆದ ಗುರುವಾರ ಹೆಬ್ಬಾವು ಮಲಗಿತ್ತು. ಬೆಳಗಿನ ಶಿಫ್ಟ್ ಗೆ ಆಗಮಿಸಿದ ಸಿಬ್ಬಂದಿ ಕಾಪೌಂಡ್ ಮೇಲೆ ಮಲಗಿರುವ ಹೆಬ್ಬಾವನ್ನು ನೋಡಿ ಗಾಬರಿಗೊಂಡಿದ್ದಾರೆ.
Advertisement
Advertisement
ಹೆಬ್ಬಾವು 12 ಅಡಿ ಉದ್ದವಿದ್ದು, 30ರಿಂದ 40 ಕೆ.ಜಿ ತೂಕವಿತ್ತು. ಈ ಹಾವನ್ನು ನೋಡಿ ಅಲ್ಲಿನ ಸಿಬ್ಬಂದಿ ಏನೂ ಮಾಡಬೇಕು ಎಂದು ತಿಳಿಯದೇ ಹಾವು ಹಿಡಿಯುವವರನ್ನು ಕರೆಸಿದರು. ನಂತರ ಹಾವು ಹಿಡಿಯುವವರು ಆಗಮಿಸಿ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
Advertisement
ಹೆಬ್ಬಾವನ್ನು ಹಿಡಿಯಲು ಹರಸಾಹಸ ಪಡಲಾಗಿದ್ದು, ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ವರದಿಯಾಗಿದೆ. ಹೆಬ್ಬಾವನ್ನು ಹಿಡಿಯುತ್ತಿರುವ ವಿಡಿಯೋವನ್ನು ಅಲ್ಲಿನ ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv