ಬೀಜಿಂಗ್: ಪುಟ್ಟ ಕಂದಮ್ಮಗಳನ್ನು ಅನಾಥಾಶ್ರಮಕ್ಕೆ ಸೇರಿಸೋದು, ಆಗ ತಾನೇ ಹುಟ್ಟಿದ ಮಗುವನ್ನು ಕಸದ ತೊಟ್ಟಿಯಲ್ಲಿ ಬಿಸಾಕುವಂತಹ ಮನಕಲಕುವ ಘಟನೆಗಳನ್ನು ಕೇಳಿರುತ್ತೇವೆ. ಆದ್ರೆ ಚೀನಾದಲ್ಲಿ ಪಾಪಿ ಮಹಿಳೆಯೊಬ್ಬಳು ತನ್ನ ಮಗುವನ್ನು ಪ್ಯಾಕ್ ಮಾಡಿ ಅನಾಥಾಶ್ರಮಕ್ಕೆ ಕೊರಿಯರ್ ಮಾಡಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು. ಚೀನಾ ಮೂಲದ 24 ವರ್ಷದ ತಾಯಿಯೊಬ್ಬಳು ಕೆಲ ದಿನಗಳ ಹಿಂದೆ ಹುಟ್ಟಿದ ತನ್ನ ಮಗುವನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಪಾರ್ಸೆಲ್ ಮಾಡಿದ್ದಾಳೆ. ಅಲ್ಲದೇ ಈ ಕೊರಿಯರನ್ನು ಯಾವುದೇ ಕಾರಣಕ್ಕೆ ಓಪನ್ ಮಾಡಬಾರದೆಂದು ಪಾರ್ಸೆಲ್ ಮಾಡುವಾತನಿಗೆ ತಾಕೀತು ಮಾಡಿದ್ದಳು.
Advertisement
Advertisement
ಅಂತೆಯೇ ಬಂದಂತಹ ಕೊರಿಯರನ್ನು ಪಾರ್ಸೆಲ್ ಮಾಡುವಾತ ಫಿಝೌ ಮಕ್ಕಳ ಕಲ್ಯಾಣ ಸಂಸ್ಥೆಗೆ ತಳುಪಿಸಬೇಕಿತ್ತು. ಹೀಗಾಗಿ ಅದನ್ನು ತೆಗೆದುಕೊಂಡ ವೇಳೆ ಶಬ್ದವೊಂದು ಕೇಳಿತ್ತು. ತನ್ನ ಕೈಯಲಿದ್ದ ಪ್ಲಾಸ್ಟಿಕ್ ಕವರಿನಲ್ಲಿಯೇ ಶಬ್ದ ಬರುತ್ತಿರುವುದನ್ನು ಕಂಡು ಗಾಬರಿಯಾದ ಆತ, ಕೊರಿಯರನ್ನು ತೆರೆದು ನೋಡಿದ್ದಾನೆ. ಈ ವೇಳೆ ಪ್ಲಾಸ್ಟಿಕ್ ಕವರಿನೊಳಗೆ ಮಗು ಇರುವುದು ಪತ್ತೆಯಾಗಿದೆ. ಇದನ್ನು ಕಂಡು ಆತ ದಂಗಾಗಿದ್ದಾನೆ.
Advertisement
ಕೂಡಲೇ ಆತ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಗು ಆರೋಗ್ಯವಾಗಿದೆ ಎಂಬುವುದಾಗಿ ತಿಳಿದುಬಂದಿದೆ.
Advertisement
https://www.youtube.com/watch?v=gRagwQODW6Q