ಪಾಟ್ನಾ: ಹಿಜಬ್ ವಿವಾದ ದಿನೇ ದಿನೇ ತಾರಕಕ್ಕೆ ಏರುತ್ತಿದ್ದು, ಕೇವಲ ರಾಜ್ಯವೊಂದೇ ಅಲ್ಲ ದೇಶವ್ಯಾಪಿ ಹರಡಿದೆ. ಈಗ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಹಿಜಬ್ ಧರಿಸಿದ ಯುವತಿಗೆ ಯುಕೋ ಬ್ಯಾಂಕ್‍ನಲ್ಲಿ ವಹಿವಾಟು ನಡೆಸದಂತೆ ನಿರ್ಬಂಧ ಹೇರಿದ ಘಟನೆ ನಡೆದಿದೆ.
ಯುವತಿ ರಾಷ್ಟ್ರೀಕೃತ ಬ್ಯಾಂಕ್‍ನಿಂದ ಹಣ ಡ್ರಾ ಮಾಡಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯ ವೀಡಿಯೋವನ್ನು ಯುವತಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement
Advertisement
ಈ ವೀಡಿಯೋವು 2 ನಿಮಿಷ 20 ಸೆಕೆಂಡ್ ಇದೆ. ಯುವತಿಯು ಹಿಜಬ್ ಧರಿಸಿಕೊಂಡು ಬ್ಯಾಂಕ್‍ಗೆ ಬಂದಿದ್ದಾರೆ. ಇದಕ್ಕೆ ಬ್ಯಾಂಕ್‍ನ ಉದ್ಯೋಗಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹಣವನ್ನು ಡ್ರಾ ಮಾಡಲು ಹಿಜಬ್ ತೆಗೆಯುವಂತೆ ಒತ್ತಾಯಿಸಿದ್ದಾರೆ. ಯಾರು ಹಿಜಬ್‍ನ್ನು ತೆಗೆಯುವಂತೆ ಹೇಳುತ್ತಾರೋ ಅವರು ದಾಖಲೆ ಸಮೇತ ಹೇಳಿ ಎಂದು ಯುವತಿಯ ಪೋಷಕರು ಒತ್ತಾಯಿಸಿದ್ದಾರೆ. ಅದಕ್ಕೆ ಬ್ಯಾಂಕ್ ಉದ್ಯೋಗಿಯು ಯುವತಿ ಮಾಡುತ್ತಿರುವ ವೀಡಿಯೋವನ್ನು ನಿಲ್ಲಿಸಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ
Advertisement
ವೀಡಿಯೋದಲ್ಲಿ ಏನಿದೆ?: ನಾನು ಹಾಗೂ ನನ್ನ ಮಗಳು ತಿಂಗಳಿಗೊಮ್ಮೆ ಈ ಬ್ಯಾಂಕ್‍ಗೆ ಬರುತ್ತಿದ್ದೆವು. ಈ ಹಿಂದೆ ಯಾರೂ ಸಹ ಹಿಜಬ್ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. ಇಂದು ಯಾಕೆ ಈ ರೀತಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಆಗುತ್ತಿರುವ ವಿವಾದವನ್ನು ಬಿಹಾರಕ್ಕೆ ಯಾಕೆ ತರುತ್ತೀರಾ, ಬ್ಯಾಂಕ್‍ಗಳಲ್ಲಿ ಹಿಜಬ್‍ನ್ನು ಧರಿಸಬಾರದು ಎನ್ನುವ ದಾಖಲೆ ಎಲ್ಲಿಯಾದರೂ ಇದೆಯೇ ಎಂದು ಯುವತಿಯ ಪೋಷಕರು ವೀಡಿಯೋದಲ್ಲಿ ಪ್ರಶ್ನಿಸಿದ್ದಾರೆ.
Advertisement
Meanwhile a girl in UCO Bank, Bihar told to take off her Hijab to withdraw cash. This video is from Begusarai Mansoor chowk.#HijabRow #Bihar #Islamophobia_In_India pic.twitter.com/Z5eCpXNpzx
— Meer Faisal (@meerfaisal01) February 20, 2022
ಈ ವೀಡಿಯೋವನ್ನು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ತೇಜಸ್ವಿ ಯಾದವ್ ಶೇರ್ ಮಾಡಿಕೊಂಡಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮ ಯೋಚನೆ, ಯೋಜನೆ ಹಾಗೂ ನಿಮ್ಮ ಜವಾಬ್ದಾರಿ ಬಗ್ಗೆ ನನಗೆ ಅರ್ಥವಾಗುತ್ತಿದೆ. ನೀವು ಸಂವಿಧಾನವನ್ನು ಗೌರವಿಸುವುದರ ಜೊತೆಗೆ ಬ್ಯಾಕ್‍ನ ಉದ್ಯೋಗಿಯನ್ನು ಬಂಧಿಸಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ
माननीय मुख्यमंत्री @NitishKumar जी,
कुर्सी की ख़ातिर आप बिहार में यह सब क्या करवा रहे है? माना आपने अपना विचार, नीति, सिद्धांत और अंतरात्मा सब भाजपा के पास गिरवी रख दिया है लेकिन संविधान की जो शपथ ली है कम से कम उसका तो ख़्याल रखिए। इस कुकृत्य के दोषी लोगों को गिरफ़्तार कीजिए। https://t.co/Ryg9FXzOMX
— Office of Tejashwi Yadav (@TejashwiOffice) February 21, 2022
ಈ ಘಟನೆಯ ನಂತರ ಬ್ಯಾಂಕ್ ಅಧಿಸೂಚನೆಯನ್ನು ಹೊರಡಿಸಿದ್ದು, ಎಲ್ಲಾ ಧರ್ಮದವರ ಭಾವನೆಗಳನ್ನು ಬ್ಯಾಂಕ್ ಗೌರವಿಸುತ್ತದೆ. ಘಟನೆಯ ಕುರಿತು ಬ್ಯಾಂಕ್ ತನಿಖೆ ನಡೆಸುತ್ತದೆ ಎಂದು ತಿಳಿಸಿದೆ.