ಚೆನ್ನೈ: ಕಾಡಂಚಿನ ಗ್ರಾಮಗಳಿಗೆ ಆನೆಗಳು (Wild Elephant) ನುಗ್ಗಿ ದಾಂಧಲೆ ಮಾಡುವುದು ಹೊಸದೇನಲ್ಲ. ಹಾಗೆಯೇ ವಲಸೆ ಕಾರ್ಮಿಕರು ನೆಲೆಸಿದ್ದ ಬಾಡಿಗೆ ಮನೆಗೆ ನುಗ್ಗಿದ ಗಂಡು ಕಾಡಾನೆಯೊಂದು ಆಹಾರ ಪದಾರ್ಥಗಳನ್ನ ತಿಂದು ಹೋದ ಘಟನೆ ತಮಿಳುನಾಡು ಕೊಯಮತ್ತೂರು (Coimbatore) ಜಿಲ್ಲೆಯ ತೆರುಕ್ಕುಪಾಳ್ಯಂನಲ್ಲಿ ನಡೆದಿದೆ.
A wild Elephant feeding on rice from a house near Periyanaickenpalayam in #Coimbatore on Saturday night. Four migrant workers were inside the house. @THChennai pic.twitter.com/Z5FjjDVF8G
— Wilson Thomas (@wilson__thomas) January 19, 2025
Advertisement
ಆನೆಯು ಮನೆಯತ್ತ ನುಗ್ಗಿ ಬರುತ್ತಿರುವುದನ್ನು ಗಮನಿಸಿರುವ ಕಾರ್ಮಿಕರು ಗ್ಯಾಸ್ ಸ್ಟೌ ಆಫ್ ಮಾಡಿದ್ದಾರೆ, ಭಯಭೀತರಾಗಿ ಮನೆಯ ಮೂಲೆಯಲ್ಲಿ ಅವಿತು ಕುಳಿತಿದ್ದಾರೆ. ಇದನ್ನೂ ಓದಿ: 5 ಗೋವುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಕ್ಕಿದ್ರೂ ವಾಹನ ನಂಬರ್ ಇಲ್ವಂತೆ – ಕೈ ಚೆಲ್ಲಿದ ಪೊಲೀಸರು
Advertisement
ಬಳಿಕ ಮನೆಯ ಬಾಗಿಲ ಬಳಿ ಬಂದ ಆನೆ ಸೊಂಡಿಲು ಚಾಚಿ ಅಕ್ಕಿ ಮೂಟೆಯನ್ನು ಎಳೆದುಕೊಂಡಿದೆ. ಗ್ಯಾಸ್ ಸಿಲಿಂಡರ್ ಸಮೇತ ಮಾಡಿದ್ದ ಅಡುಗೆಯನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದೆ. ಅಕ್ಕಿಯನ್ನೆಲ್ಲ ತಿಂದು ಮುಗಿಸಿದ ಬಳಿಕ ಸ್ಥಳ ಬಿಟ್ಟು ತೆರಳಿದೆ. ಇದನ್ನೂ ಓದಿ: ವಕ್ಫ್ ವಿರುದ್ಧ ಅನ್ನದಾತರ ಆಕ್ರೋಶ – ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್
Advertisement
Advertisement
ಈ ದೃಶ್ಯವನ್ನು ಕಾರ್ಮಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ್ದು, ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಸರಣಿ ಅಪಘಾತ – ಕಾರು ಲಾರಿಯ ಕೆಳಗೆ ಸಿಲುಕಿದ್ರೂ ಪವಾಡ ರೀತಿಯಲ್ಲಿ ಚಾಲಕ ಪಾರು