ವಾಷಿಂಗ್ಟನ್: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಅಮೆರಿಕ ವಾಯುಪಡೆಯ ಶಕ್ತಿಶಾಲಿ ಅಸ್ತ್ರ ಥಂಡರ್‌ಬರ್ಡ್ F-16C (Thunderbird F16C) ಯುದ್ಧವಿಮಾನ ಪತನಗೊಂಡಿದೆ.
⚡️ 🇺🇸 FLASH | Crash d’un F-16 des Thunderbirds en Californie
Un F-16C de la patrouille d’élite américaine Thunderbirds s’est écrasé près de l’aéroport de Trona, en Californie, lors d’un vol d’entraînement.
La pilote, une officier, a réussi à s’éjecter juste avant l’impact.
Elle… pic.twitter.com/1c7gctrzuO
— Le Fil Express (@LeFilExpress) December 3, 2025
ಲಾಸ್ ಏಂಜಲೀಸ್‌ನ ಉತ್ತರಕ್ಕೆ ಸುಮಾರು 290 ಕಿಮೀ ದೂರದಲ್ಲಿರುವ ಮೊಜಾವೆ ಮರುಭೂಮಿ (Mojave Desert) ಪ್ರದೇಶದಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಎಫ್-16 ಜೆಟ್ ಪತನಗೊಂಡಿದೆ. ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ ಎಂದು ಯುಎಸ್ ವಾಯುಪಡೆ ತಿಳಿಸಿದೆ. ಇದನ್ನೂ ಓದಿ: ಪಾಕಿನ ಎಫ್-16 , ಜೆಎಫ್-17 ಯುದ್ಧ ವಿಮಾನಗಳನ್ನು ಹೊಡೆದಿದ್ದೇವೆ: ಏರ್ ಚೀಫ್ ಮಾರ್ಷಲ್
ಬುಧವಾರ ಬೆಳಗ್ಗೆ 10:45ರ ಸುಮಾರಿಗೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ (Southern California) ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲಿಸುತ್ತಿವೆ ಎಂದು ತಿಳಿಸಿದೆ.
ಯುದ್ಧವಿಮಾನ ಪತನಗೊಂಡ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 24 ಸೆಕೆಂಡುಗಳ ವಿಡಿಯೋದಲ್ಲಿ ಒಂದೆಡೆ ಯುದ್ಧವಿಮಾನ ಪತನಗೊಂಡು ಸಂಪೂರ್ಣ ಬೆಂಕಿಗೆ ಆಹುತಿಯಾಗಿರುದು ಮತ್ತೊಂದು ಕಡೆ ಇಬ್ಬರು ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ, ಪೈಲಟ್‌ಗಳು ಎಜೆಕ್ಟ್ ಆಗುವ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
1953 ರಲ್ಲಿ ರಚನೆಯಾದ ಥಂಡರ್‌ಬರ್ಡ್ಸ್ ಲಾಸ್ ವೇಗಾಸ್ ಬಳಿಯ ನೆಲ್ಲಿಸ್ ವಾಯುನೆಲೆಯಲ್ಲಿ (Nellis Air Force Base)ಬೇತಿ ನಡೆಸುತ್ತಾ ಬಂದಿವೆ. ಇದನ್ನೂ ಓದಿ: ಪಾಕ್‌ನ ಪ್ರಮುಖ ಎಫ್-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ

