ಕೈವ್: ಇತ್ತೀಚೆಗಷ್ಟೇ ಭಾರತದ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದದ ಕುರಿತು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತನಾಡಿದ್ದರು. ಈ ಬೆನ್ನಲ್ಲೇ ಉಕ್ರೇನ್ (Ukraine), ರಷ್ಯಾ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದೆ. ಉಕ್ರೇನ್, ರಷ್ಯಾದ ಸೇನಾ ನೆಲೆಗಳ ಮೇಲೆ ʻಡ್ರ್ಯಾಗನ್ ಡ್ರೋನ್ʼ (Dragon Drone) ಎಂಬ ಹೊಸ ಅಸ್ತ್ರವನ್ನು ಪ್ರಯೋಗಿಸಿದೆ ಎಂದು ವರದಿಯಾಗಿದೆ.
The Ukrainian military began using the Dragon drone, which burns the area underneath with thermite 🥰🥰🥰 Thermite is a mixture of burning granules of iron oxide and aluminum. About 500 grams of thermite mixture can be placed under a standard FPV drone. The chemical reaction is… pic.twitter.com/3XIzc3LLHN
— Anastasia (@Nastushichek) September 5, 2024
Advertisement
ಆಕ್ರಮಿತ ಖಾರ್ಕಿವ್ (ಕೈವ್) ಪ್ರದೇಶದಲ್ಲಿರುವ ರಷ್ಯಾದ ಸ್ಥಾನಗಳ ಮೇಲೆ ಬೆಂಕಿ ಉಗುಳುವ ʻಡ್ರ್ಯಾಗನ್ ಡ್ರೋನ್ʼ ಅಸ್ತ್ರವನ್ನು ಪ್ರಯೋಗಿಸಿದೆ. ಈ ಅಸ್ತ್ರದ ಬಳಕೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಅದೇ ರೀತಿ ಅರಣ್ಯದಲ್ಲಿರುವ ರಷ್ಯಾದ ಸೈನಿಕರ ಮೇಲೆಯೂ ಈ ಅಸ್ತ್ರವನ್ನು ಹೆಚ್ಚು ಪ್ರಯೋಗಿಸುತ್ತಿದೆ. ಇದರಿಂದ ಮರಗಳು ಮಾತ್ರವಲ್ಲದೇ ರಷ್ಯಾದ ಅನೇಕ ಸೈನಿಕ ಪ್ರಾಣಹಾನಿಯಾಗಿರುವುದಾಗಿ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪ್ರಧಾನಿ ಮೋದಿ ಸಿಂಗಾಪುರ ಭೇಟಿ – ಮಹತ್ವದ 4 ಒಪ್ಪಂದಗಳಿಗೆ ಸಹಿ
Advertisement
Advertisement
ಇದು ರಷ್ಯಾದ ವಿರುದ್ಧ ಉಕ್ರೇನಿನ ಪ್ರತಿದಾಳಿಯಾಗಿದೆ ಎನ್ನಲಾಗಿದೆ. ಅದಕ್ಕಾಗಿ ಎರಡು ವಿಶ್ವ ಮಹಾಯುದ್ಧಗಳಲ್ಲಿ ಬಳಸಿದ್ದ ಹಳೆಯ ಅಸ್ತ್ರಕ್ಕೆ ಉಕ್ರೇನ್ ಮರುಜೀವ ನೀಡಿದೆ. ವಿಶ್ವಯುದ್ಧದ (World War) ಸಂದರ್ಭಗಳಲ್ಲಿ ಬಳಸಿದ್ದ ಅಸ್ತ್ರವನ್ನೇ ಉಕ್ರೇನ್ ನವೀಕರಿಸಿದ್ದು, ರಷ್ಯಾ ಸೇನಾನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕೀನ್ಯಾ ಶಾಲೆಯಲ್ಲಿ ಅಗ್ನಿ ಅವಘಡ – 17 ಮಕ್ಕಳು ದಾರುಣ ಸಾವು
Advertisement
ಖೋರ್ನೆ ಗ್ರೂಪ್ ಎಂಬ ಟೆಲಿಗ್ರಾಮ್ ಚಾನೆಲ್, ಡ್ರ್ಯಾಗನ್ ಡ್ರೋನ್ ಬೆಂಕಿ ಉಂಡೆ ಉಗುಳುತ್ತಿರುವ ವೀಡಿಯೋವೊಂದನ್ನು ಹಂಚಿಕೊಂಡಿದೆ. ರಷ್ಯಾ ಸೇನೆಗಳು ನೆಲೆಸಿವೆ ಎನ್ನಲಾದ ಅರಣ್ಯ ಪ್ರದೇಶದ ಮೇಲೆ ಉಕ್ರೇನ್ ಡ್ರ್ಯಾಗನ್ ಡ್ರೋನ್ ಬಳಸಿ ದಾಳಿ ನಡೆಸಿದೆ ಎಂದೂ ಖೋರ್ನೆ ಉಲ್ಲೇಖಿಸಿದೆ. ಇದಕ್ಕೆ ಐರನ್ ಆಕ್ಸೈಡ್ ಮತ್ತು ಅಲ್ಯೂಮೀನಿಯಂ ಪೌಡರ್ ಮಿಶ್ರಣ ಮಾಡಿರುವುದರಿಂದ ಬೆಂಕಿ ಉಂಡೆ ಉಗುಳುತ್ತಿದ್ದಂತೆ ಸಾಕಷ್ಟು ಮರಗಳು ಆಹುತಿಯಾಗಿವೆ. ಅಲ್ಲದೇ ಈ ಪ್ರದೇಶದಲ್ಲಿದ್ದ ರಷ್ಯಾ ಸೇನೆಯ ರಕ್ಷಾಕವಚ ಹಾಗೂ ಮಿಲಟರಿ ವಾಹನಗಳನ್ನು ನಿಷ್ಕ್ರಿಯಗೊಳಿಸಿವೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಅಮೆರಿಕದ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ – ಇಬ್ಬರು ಶಿಕ್ಷಕರು ಸೇರಿ ನಾಲ್ವರು ಸಾವು
ʻಡ್ರ್ಯಾಗನ್ ಡ್ರೋನ್ʼ ಹಿನ್ನೆಲೆ ರೋಚಕ:
ಮೊದಲ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ನರು ಈ ಬೆಂಕಿ ಉಗುಳುವ ಬಾಂಬ್‌ಗಳನ್ನು ಬಳಸಿದ್ದರು. ಜರ್ಮನ್ನರು B1.3E, 1938, ಬೆಂಕಿಯಿಡುವ ಬಾಂಬುಗಳನ್ನು ಅಭಿವೃದ್ಧಿಪಡಿಸಿದರು. ಆಗಿನ-ಜರ್ಮನ್ ಏರ್ ಫೋರ್ಸ್ (ಲುಫ್ಟ್‌ವಾಫೆ) ಬ್ರಿಟಿಷ್ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮಾಡಲು ಇದನ್ನು ತೀವ್ರವಾಗಿ ಬಳಸಿದ್ದರು ಎಂದು ಹೇಳಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ರಷ್ಯಾ ಉಕ್ರೇನ್ ವಿರುದ್ಧ 100 ಅಟ್ಯಾಕಿಂಗ್ ಡ್ರೋನ್‌ಗಳಿಂದ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ಉಕ್ರೇನ್ ದಾಳಿ ನಡೆಸಿದೆ ಎಂದು ಸೇನಾಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ರಾಜಕೀಯ ಪ್ರೇರಿತ: ಭಾರತದ ವಿರುದ್ಧವೇ ಪ್ರಶ್ನೆ ಎತ್ತಿದ ಯೂನಸ್