ಫ್ಲೋರಿಡಾ: ದರೋಡೆಕೋರರು ಮನೆಗೆ ದಾಳಿ ಮಾಲೀಕರನ್ನು ಹೆದರಿಸಿ ಕೊಳ್ಳೆ ಹೊಡೆಯುವುದು ನಿಮಗೆ ಗೊತ್ತಿರುವ ವಿಚಾರವೇ. ಆದರೆ ಅಮೆರಿಕದಲ್ಲಿ ಮನೆ ಮೇಲೆ ದಾಳಿ ನಡೆಸಿ ದರೋಡೆಕೋರರನ್ನು ಮಾಲೀಕನೇ ಹರಿತವಾದ ಕತ್ತಿಯನ್ನು ಹಿಡಿದು ಓಡಿಸುವ ಮೂಲಕ ವಿಶ್ವದೆಲ್ಲಡೆ ಸುದ್ದಿಯಾಗಿದ್ದಾನೆ.
ಫ್ಲೋರಿಡಾದಲ್ಲಿ ಐದು ಮಂದಿ ದರೋಡೆಕೋರರು ಆಡ್ಸ್ ಎಂಬಾತನ ಮನೆ ಮೇಲೆ ದಾಳಿ ಶಸ್ತ್ರಾಸ್ತ್ರ ಹಿಡಿದುಕೊಂಡು ದಾಳಿ ಮಾಡಿದ್ದಾರೆ. ಮುಖಕ್ಕೆ ಕಪ್ಪು ಬಟ್ಟೆಯನ್ನು ಧರಿಸಿ ಗನ್ ಹಿಡಿದು ಮನೆಯಲ್ಲಿ ಇದ್ದವರನ್ನು ಬೆದರಿಸಿದ್ದಾರೆ.
Advertisement
Advertisement
ಅದರಲ್ಲೂ ಮೂವರು ದರೋಡೆಕೋರರು ಆಡ್ಸ್ ಮೇಲೆ ದಾಳಿ ಮಾಡುತ್ತಾರೆ. ಈ ವೇಳೆ ಅವರನ್ನು ಹೆದರಿಸಲು ಆಡ್ಸ್ ಪಕ್ಕದಲ್ಲಿ ಇದ್ದ ಕುರ್ಚಿಯನ್ನು ಎತ್ತಿಕೊಂಡು ಮನೆಯ ಒಳಗಡೆ ಓಡಿ ಹೋಗುತ್ತಾನೆ. ಆಡ್ಸ್ ಓಡುತ್ತಿದ್ದಂತೆ ಆತನ್ನು ಹಿಂಬಾಲಿಸಿ ಕಳ್ಳರು ಓಡುತ್ತಾರೆ.
Advertisement
ಆದರೆ ಆಡ್ಸ್ ಮನೆಯ ಒಳಗಡೆ ಹೋಗಿ ಹರಿತವಾದ ಕತ್ತಿಯನ್ನು ಹಿಡಿದು ಅವರನ್ನು ಬೆದರಿಸಿದ್ದಾನೆ. ಮಾಲೀಕನ ಈ ರೌದ್ರಾವತಾರವನ್ನು ನೋಡಿದ ಕಳ್ಳರು ಹೆದರಿ ಅಲ್ಲಿಂದಲೇ ಓಡಿದ್ದಾರೆ. ಅದರಲ್ಲೂ ಒಬ್ಬ ಕಳ್ಳನಿಗೆ ಆಡ್ಸ್ ಚೆನ್ನಾಗಿ ಓದೆ ಕೊಟ್ಟಿದ್ದಾನೆ. ಮಾಲೀಕನ ಕೈಯಲ್ಲಿ ಹರಿತವಾದ ಕತ್ತಿಯನ್ನು ನೋಡಿ ದಾಳಿ ಮಾಡಿದ ಎಲ್ಲ ವ್ಯಕ್ತಿಗಳು ಮನೆಯಿಂದಲೇ ಪರಾರಿಯಾಗಿದ್ದಾರೆ.
Advertisement
ಮನೆಯ ಮೇಲೆ ದರೋಡೆಕೋರರು ದಾಳಿ ಮಾಡುವುದು ಮತ್ತು ಮಾಲೀಕ ಕತ್ತಿಯನ್ನು ಹಿಡಿದು ಅವರನ್ನು ಬೆದರಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈಗ ವೈರಲ್ ಆಗಿದೆ. ಈ ವಿಡಿಯೋ ಆಧಾರಿಸಿ ಕೃತ್ಯ ಎಸಗಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ.