ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಟೀ-ಕಾಫಿ ಕುಡಿಯುವ ಮುನ್ನ ಈ ಸ್ಟೋರಿ ಓದಿ! – ವಿಡಿಯೋ ನೋಡಿ

Public TV
1 Min Read
TRAIN TEA

ಹೈದರಾಬಾದ್: ರೈಲು ಪ್ರಯಾಣಿಕರೇ ಎಚ್ಚರ ಎಚ್ಚರ…ರೈಲಿನಲ್ಲಿ ನೀವು ಕುಡಿಯುವ ಟೀ ಮತ್ತು ಕಾಫಿಗೆ ಶೌಚಾಲಯದ ನೀರನ್ನು ಬಳಸಿರುವ ವಿಡಿಯೋವೊಂದು ಸಾಮಾಜಿಕ ಜಾಣತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಆದ ನಂತರ ರೈಲ್ವೆ ಇಲಾಖೆ ಈ ಬಗ್ಗೆ ತನಿಖೆ ಮಾಡಿದ್ದು, ಟೀ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡವಿಧಿಸಲಾಗಿದೆ ಎಂದು ಸೌಥ್ ಸೆಂಟ್ರಲ್ ರೈಲ್ವೆಯ ಪಿಆರ್ ಒ ಬುಧವಾರ ಪ್ರಕಟಣೆ ಹೊರಡಿಸಿದ್ದಾರೆ.

ಈ ವಿಡಿಯೋ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದೆ. ಟೀ ಮಾರಾಟಗಾರನೊಬ್ಬ ಶೌಚಾಲಯದೊಳಗೆ ಹೋಗಿ ಟೀ ಕ್ಯಾನ್ ಗೆ ಅಲ್ಲಿನ ನೀರು ತುಂಬಿಕೊಂಡು ಹೊರ ಬಂದಿದ್ದಾನೆ. ಮತ್ತೊಬ್ಬ ಶೌಚಾಲಯದ ನೀರು ತುಂಬಿಸಿದ ಕ್ಯಾನ್ ನನ್ನು ತೆಗೆದುಕೊಂಡು ಹೋಗಿದ್ದಾನೆ. ಈ ಎಲ್ಲ ದೃಶ್ಯವನ್ನು ರೈಲು ಪ್ರಯಾಣಿಕರೊಬ್ಬರು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮೂವರು ವ್ಯಕ್ತಿಗಳನ್ನು ಕಾಣಬಹುದಾಗಿದೆ.

ಈ ಬಗ್ಗೆ ರೈಲ್ವೇ ಇಲಾಖೆ ತನಿಖೆ ನಡೆಸಿದೆ. ಆಗ ಈ ಘಟನೆ ಕಳೆದ ಡಿಸೆಂಬರ್  ನಲ್ಲಿ ಸಿಕಿಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಚೆನ್ನೈಗೆ ಹೋಗುತ್ತಿದ್ದ ಹೈದರಾಬಾದ್ ಚಾರ್ಮಿನರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಟೀ ವ್ಯಾಪಾರಿ ಪಿ.ಶಿವಪ್ರಸಾದ್ ಈ ಕೃತ್ಯ ಎಸಗಿದ್ದಾನೆ. ತನಿಖೆ ಮಾಡಿ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡವಿಧಿಸಿ ರೈಲ್ವೆ ಇಲಾಖೆ ಕ್ರಮ ತೆಗೆದುಕೊಂಡಿದೆ ಎಂದು ಹಿರಿಯ ರೈಲ್ವೇ ಅಧಿಕಾರಿ ಎ. ಉಮಾಶಂಕರ್ ಕುಮಾರ್ ತಿಳಿಸಿದ್ದಾರೆ.

https://www.youtube.com/watch?v=BMZILny61R8

Share This Article
Leave a Comment

Leave a Reply

Your email address will not be published. Required fields are marked *