ಕೊಲಂಬೊ: ಪೊಲೀಸರು ಶಂಕಿತ ಆರೋಪಿಯನ್ನು ಬೆನ್ನಟ್ಟಿ ಬರುವಾಗ ಮಾರ್ಗ ಮಧ್ಯೆ ನಿಂತಿದ್ದ ವೃದ್ಧ ವ್ಯಕ್ತಿಯೊಬ್ಬ ಆತನನ್ನು ಬಂಧಿಸಲು ಸಿಂಪಲ್ ಟೆಕ್ನಿಕ್ ಬಳಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಬಿಲ್ ಎಂಬವರೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರಿಗೆ ಸಹಕರಿಸಿದ ವಯೋವೃದ್ಧರು. ಏಪ್ರಿಲ್ 3ರಂದು ಬಿಲ್ ತಮ್ಮ ಮೊಮ್ಮಗಳೊಂದಿಗೆ ನಗರದ ಗೃಂಥಾಲಯಕ್ಕೆ ಆಗಮಿಸಿದ್ದರು. ಗೃಂಥಾಲಯದಿಂದ ಹಿಂದಿರುವ ವೇಳೆ ಪೊಲೀಸ್ ವಾಹನದ ಸೈರನ್ ಕೇಳಿಸಿದ್ದರಿಂದ ರಸ್ತೆ ದಾಟದೇ ಅಲ್ಲಿಯೇ ನಿಂತುಕೊಂಡಿದ್ದಾರೆ.
Advertisement
ವಿಡಿಯೋದಲ್ಲಿ ಏನಿದೆ?: ಬಿಲ್ ಪೊಲೀಸ್ ವಾಹನದ ಸೈರನ್ ಕೇಳುತ್ತಿದ್ದಂತೆ ಗೃಂಥಾಲಯದ ಕಟ್ಟಡದ ಮುಂಭಾಗದಲ್ಲಿಯೇ ನಿಂತಿದ್ದಾರೆ. ಎಡಗಡೆಯಿಂದ ಯುವಕನೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಬರುತ್ತಿದ್ದನ್ನು ನೋಡಿದ್ದಾರೆ. ಯುವಕ ತಮ್ಮ ಹತ್ತಿರ ಬರುತ್ತಿದ್ದಂತೆ ಒಂದು ಹೆಜ್ಜೆ ಹಿಂದೆ ಬಂದು ಅವನಿಗೆ ಕಾಲು ಅಡ್ಡ ಹಾಕಿ ಬೀಳಿಸಿದ್ದಾರೆ. ವೇಗದಲ್ಲಿ ಓಡಿ ಬರ್ತಿದ್ದ ಆರೋಪಿ ಆಯತಪ್ಪಿ ಕೆಲ ದೂರ ಹೋಗಿ ಬಿದ್ದಿದ್ದಾನೆ. ಕೂಡಲೇ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ.
Advertisement
Advertisement
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಿಲ್, ಗೃಂಥಾಲಯದಿಂದ ಹೊರ ಬಂದಾಗ ಪೊಲೀಸ್ ಸೈರನ್ ಕೇಳಿಸಿತು. ಎಡಗಡೆಯಿಂದ ಒಬ್ಬ ಓಡಿ ಬುರತ್ತಿದ್ದನ್ನು ನೋಡಿ ಪೊಲೀಸರಿಗೆ ಸಹಾಯ ಮಾಡುವ ಉದ್ದೇಶಕ್ಕಾಗಿ ಕಾಲನ್ನು ಅಡ್ಡ ಹಾಕಿ ಆತನನ್ನು ಬೀಳಿಸಿದೆ. ಎಲ್ಲರೂ ಕಳ್ಳರನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
Advertisement
ಬಿಲ್ ಆರೋಪಿಯನ್ನು ಹಿಡಿಯಲು ಬಳಸಿರುವ ಟೆಕ್ನಿಕ್ ಗೃಂಥಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಏಪ್ರಿಲ್ 3ರಂದು ಈ ಘಟನೆ ನಡೆದಿದ್ದು, ಗುರುವಾರ (ಮೇ 3)ದಂದು ಕೊಲಂಬೊದ ಓಹಿಯೋ ಪೊಲೀಸರು ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಬಂಧಿತ ಶಂಕಿತ ಆರೋಪಿಯಿಂದ ಗ್ಲಾಕ್ 9 ಎಂ.ಎಂ ಪಿಸ್ತೂಲ್ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇನ್ನು ವಿಡಿಯೋ ನೋಡಿದ ಜನರು ಅಜ್ಜನ ಸಿಂಪಲ್ ಟೆಕ್ನಿಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.