Connect with us

ನಿರಂತರ 20 ಗಂಟೆ ವಿಡಿಯೋ ಗೇಮ್ ಆಡಿ ಸೊಂಟದಿಂದ ಕೆಳಭಾಗ ಸ್ವಾಧೀನವೇ ಹೋಯ್ತು

ನಿರಂತರ 20 ಗಂಟೆ ವಿಡಿಯೋ ಗೇಮ್ ಆಡಿ ಸೊಂಟದಿಂದ ಕೆಳಭಾಗ ಸ್ವಾಧೀನವೇ ಹೋಯ್ತು

ಬೀಜಿಂಗ್: ಚೀನಾದ ಯುವಕನೊಬ್ಬ ಸೈಬರ್ ಕೆಫೆಯಲ್ಲಿ ನಿರಂತರವಾಗಿ 20 ಗಂಟೆ ಕಾಲ ವಿಡಿಯೋ ಗೇಮ್ ಆಡಿದ ಪರಿಣಾಮ ಆತನ ಸೊಂಟದಿಂದ ಕೆಳಭಾಗ ಸಂಪೂರ್ಣ ಸ್ವಾಧೀನವೇ ಕಳೆದುಕೊಂಡಿದ್ದಾನೆ.

ಯುವಕ ವಿಡಿಯೋ ಗೇಮ್ ಆಡಲು ಜನವರಿ 27ರಂದು ಸಂಜೆ ಸೈಬರ್ ಕೆಫೆಗೆ ಹೋಗಿದ್ದು, ಜನವರಿ 28 ರ ಮಧ್ಯಾಹ್ನದ ವರೆಗೂ ಗೇಮ್ ಆಡಿದ್ದಾನೆ. ನಂತರ ಆತ ಶೌಚಾಲಯಕ್ಕೆ ಹೋಗಬೇಕೆಂದು ಮೇಲೇಳಲು ಪ್ರಯತ್ನಿಸಿದ್ದಾನೆ. ಆದರೆ ಅವನಿಗೆ ಏಳಲು ಸಾಧ್ಯವಾಗಲಿಲ್ಲ. ಆಗ ಅವನಿಗೆ ತಾನು ಯಾವ ಕಡೆಯೂ ಅಲುಗಾಡಲು ಸಾಧ್ಯವಾಗುತ್ತಿಲ್ಲ ಎಂದು ಗೊತ್ತಾಗಿದೆ. ಅದೇ ಕೆಫೆಯಲ್ಲಿ ಇದ್ದ ಆತನ ಸ್ನೇಹಿತನಲ್ಲಿ ತನ್ನ ಸೊಂಟದಿಂದ ಕೆಳಭಾಗದ ಅಂಗಗಳು ಸ್ವಾಧೀನ ಇಲ್ಲದಂತೆ ಆಗಿದೆ ಎಂಬುದನ್ನ ಹೇಳಿದ್ದು, ಅವರು ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ನಂತರ ಯುವಕನನ್ನು ಸ್ಟ್ರೆಚ್ಚರ್ ನಲ್ಲಿ ಇರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಗೇಮ್ ಕಂಪ್ಲೀಟ್ ಮಾಡಲು ಗೆಳೆಯನಿಗೆ ಹೇಳ್ದ: ಆಶ್ಚರ್ಯವೆಂದರೆ ಆ ರೀತಿಯ ಪರಿಸ್ಥಿತಿ ಇದ್ದರೂ ಯುವಕ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕಿದ್ದ. ತನ್ನ ಬದಲಿಗೆ ತನ್ನ ಆಟವನ್ನು ಪೂರ್ಣಗೊಳಿಸಲು ಸ್ನೇಹಿತನಿಗೆ ಮನವಿ ಮಾಡಿಕೊಂಡಿದ್ದ.

ಯುವಕ ಯಾವ ಆಟವನ್ನು ಆಡುತ್ತಿದ್ದನು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಸದ್ಯಕ್ಕೆ ಆ ಯುವಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನಾ ಇಲ್ಲವಾ ಎಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ.

ಗೇಮ್‍ಗೆ ಅಡಿಕ್ಷನ್ ಯುವಕ ಜನಾಂಗಕ್ಕೆ ಮಾರಕವಾದ ಅನೇಕ ಉದಾಹರಣೆಗಳಿವೆ. ಈ ಹಿಂದೆ ಚೀನಾದಲ್ಲಿ ನಿರಂತರ 24 ಗಂಟೆಗಳ ಕಾಲ ತನ್ನ ಮೊಬೈಲ್ ಫೋನ್‍ನಲ್ಲಿ ಗೇಮ್ ಆಡಿ ಮಹಿಳೆಯೊಬ್ಬಳು ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಳು ಎಂದು ವರದಿಯಾಗಿತ್ತು. ಇದನ್ನೂ ಓದಿ: ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ

Advertisement
Advertisement